ಲೇಖಕ ಕರಣಂ ಪವನ್ ಪ್ರಸಾದ್ ಅವರು ಈಗಾಗಲೇ ನನ್ನಿ, ಗ್ರಸ್ತ ಇಂತಹ ಕಾದಂಭರಿ ಬರೆದು ಪರಿಚಿತರಾಗಿದ್ದು, ಈಗ ‘ಕರ್ಮ’ ಶೀರ್ಷಿಕೆಯಡಿ ಕಾದಂಬರಿ ರಚಿಸಿದ್ದಾರೆ. ಕಥೆಯ ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ -ಈ ಎಲ್ಲ ಅಂಶಗಳಿಂದಾಗಿ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
ರಂಗನಿರ್ದೇಶಕ, ನಾಟಕಕಾರ ಕರಣಂ ಪವನ್ ಪ್ರಸಾದ್ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ವೃತ್ತಿಯಿಂದ ಬಳಕೆದಾರ ಇಂಟರ್ಫೇಸ್ ಡಿಸೈನರ್ ಆಗಿರುವ ಕರಣಂ ಅವರು ಸಂಶೋಧನೆ, ಸಾಹಿತ್ಯ ಅಧ್ಯಯನ ಬರೆಹವನ್ನು ತಮ್ಮ ಹವ್ಯಾಸವಾಗಿಸಿಕೊಂಡಿದ್ದಾರೆ. ನಾಟಕಗಳ ರಚನೆ, ನಿರ್ದೇಶನ ಅವರ ಪ್ರೌವೃತ್ತಿಯಾಗಿದೆ. ...
READ MORE