ತ್ರಸ್ತ

Author : ರೇಖಾ ಕಾಖಂಡಕಿ



Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮೀ ಭವನ್, ಸುಭಾಷ್ ರಸ್ತೆ, ಹೊಸಯಲ್ಲಾಪುರ್ , ಧಾರವಾಡ, ಕರ್ನಾಟಕ -580 001
Phone: 0836244 1822

Synopsys

ಕಾದಂಬರಿಗಾರ್ತಿ ರೇಖಾ ಕಾಖಿಂಡಕಿ ಅವರ ಕಾದಂಬರಿ ‘ತ್ರಸ್ತ’. ಈ ಕಾದಂಬರಿಯಲ್ಲಿ ಮನುಷ್ಯನ ಅಸ್ಮಿತೆಯ ಕುರಿತಾದ ಹುಡುಕಾಟವಿದೆ . ತಾನು ಯಾರು , ಎಲ್ಲಿಯವನು ಇತ್ಯಾದಿ ಪ್ರಶ್ನೆಗಳ ನಡುವೆ ನಾಯಕ ಪುರುಷೋತ್ತಮ ತನ್ನ ಬೇರುಗಳ ಹುಡುಕಾಟದಲ್ಲಿದ್ದಾನೆ . ಎಷ್ಟೇ ಎತ್ತರಕ್ಕೆ ಬೆಳೆದರೂ , ಏನೆಲ್ಲಾ ಸಾಧಿಸಿದರೂ ಪುರು ಬಾಲ್ಯದ ಅವಮಾನ , ಅನಾಥ ಪ್ರಜ್ಞೆಗಳಿಂದ ಹೊರಬಂದಿಲ್ಲ .ತನ್ನನ್ನು ಅಷ್ಟೆಲ್ಲಾ ಪ್ರೀತಿಸಿ , ತನಗೊಂದು ಬದುಕು ಕೊಟ್ಟ ದತ್ತು ಮಾಸ್ತರಿಗೆ ದ್ರೋಹ ಬಗೆದು ಬಿಟ್ಟೆನೇ ಎನ್ನುವ ಅಶಾಂತಿ ಕಾಡಿದಾಗ ಪುರುವಿನಷ್ಟು ತ್ರಸ್ತ ಬೇರಾರಿಲ್ಲ . ಈ ಬಲೆಯಲ್ಲಿ ಆತ ಎಲ್ಲಿಯವರೆಗೂ ಸಿಲುಕಿದ್ದಾನೆ ಎಂದರೆ , ಆತನ ಹೆಂಡತಿ ಮಂದಾಕಿನಿ ರಸ್ತೆ ಬದಿಯಲ್ಲಿ ಯಾರೋ ಬಿಸುಟು ಹೋದ ನವಜಾತ ಶಿಶುವನ್ನು ಸ್ವೀಕರಿಸಲು ಸಿಧ್ಧಳಿದ್ದಾಳೆ . ಆದರೆ ಪುರು ಸ್ಪಷ್ಟವಾಗಿ ನಿರಾಕರಿಸುತ್ತಾನೆ . ಕಾರಣ ಆ ಮಗುವೂ ಮುಂದೆ ತನ್ನಂತೆ ಮಾನಸಿಕ ದ್ವಂದ್ವದಲ್ಲಿ ಸಿಲುಕಿ ನರಳುವುದು ಬೇಡ ಎಂದು . ಬಾಲ್ಯದಿಂದಲೂ ಸದಾ ತನ್ನ ತಂದೆ ತಾಯಿಗಳ ಕುರಿತಾದ ಹುಡುಕಾಟದಲ್ಲಿದ್ದ ಪುರು ಮಂದಾಳ ತಂದೆ ತಾಯಿಗಳಿಗೆ ಮಗನ ಸ್ಥಾನದಲ್ಲಿ ನಿಂತು ಅವರ ಯೋಗಕ್ಷೇಮ ನೋಡಿ ಕೊಳ್ಳುವ ಜವಾಬ್ದಾರಿ ಹೊರುವುದೂ ತನ್ನ ಅನಾಥ ಪ್ರಜ್ಞೆಯಿಂದ ಹೊರ ಬರುವ ಅಂಗವಾಗಿಯೇ . ಇದರ ಜೊತೆ ಲೇಖಕಿ ಇಲ್ಲಿ ಬಾಗಲಕೋಟೆಯ ಮುಳುಗಡೆ ವಿಷಯವನ್ನೂ ತೆಗೆದುಕೊಂಡಿದ್ದಾರೆ . ಮುಳುಗಡೆ ತಂದಿಡುವ ನೂರೆಂಟು ದುರವಸ್ಥೆಗಳ ನಡುವೆಯೂ ಆರ್ಥಿಕ , ಭಾವನಾತ್ಮಕ ಕಾರಣಗಳಿಗಾಗಿ ಹಳೇ ಊರನ್ನೇ ನೆಚ್ಚಿ ಬದುಕುವ ಜನತೆ . ಎಂದೋ ಅಲ್ಲಿಂದ ವಲಸೆ ಹೋಗಿದ್ದರೂ ಬಿಟ್ಟು ಹೋದ ಊರನ್ನು ಮುಳುಗಡೆಯಾಗುವ ಮುಂಚೆ ಒಮ್ಮೆ ಕಣ್ತಂಬ ನೋಡಿ ಹೋಗಲು ಬರುವ ಒಂದಾನೊಂದು ಕಾಲದ ಅಲ್ಲಿನ ಮೂಲನಿವಾಸಿಗಳು . ಊರಿನ ಮುಳುಗಡೆಯಿಂದ ತಮ್ಮ ಬೇರುಗಳನ್ನು ಕಳೆದುಕೊಂಡೆವೇನೋ ಎಂಬ ಅವರ ಭಾವನಾತ್ಮಕ ಚಡಪಡಿಕೆ , ಲೇಖಕಿ ಪುರುವಿನ ಮನಸ್ಸಿನ ಚಡಪಡಿಕೆಗಳನ್ನು ಇಲ್ಲೂ ಚಿತ್ರಿಸುತ್ತಾರೆ .

About the Author

ರೇಖಾ ಕಾಖಂಡಕಿ
(09 June 1951)

ರೇಖಾ ಕಾಖಂಡಕಿಯವರು ಹಲವಾರು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ಅವರು ಮೂಲತಃ ಬಾಗಲಕೋಟೆಯವರು. ಇವರು ಬರೆದ ಕಥೆಗಳು ಮಲ್ಲಿಗೆ, ಜನಪ್ರಗತಿ, ಪ್ರಜಾಮತ ಮುಂತಾದ ಪತ್ರಿಕೆಗಳಲ್ಲಿ ಬೆಳಕು ಕಂಡವು. ಕಾಲೇಜು ಓದುತ್ತಿದ್ದಾಗ ಬರೆದ ಕೋಟಿ ಕಾದಂಬರಿಯು ಬಾಗಕೋಟೆಯ ಪರಿಸರದ ವಸ್ತು ಇರುವ ಕಾದಂಬರಿ. ಮಲ್ಲಿಗೆ ಮಾಸಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯಿತು. ನಂತರ ಬರೆದ ಕಾದಂಬರಿಗಳು ಬಂಧನ, ಅರುಣರಾಗ, ಹೊಸಹೆಜ್ಜೆ ಮುಂತಾದವುಗಳು. ಇವರ ಹಲವಾರು ಕಾದಂಬರಿಗಳಲ್ಲಿ ಪ್ರಾದೇಶಿಕ ಭಾಷೆಯ ಸೊಗಡು, ದಟ್ಟ ಅನುಭವ, ಸಾಮಾಜಿಕ ಸ್ಥಿತ್ಯಂತರಗಳು ಮುಂತಾದವುಗಳೇ ವೈವಿಧ್ಯಮಯ ವಸ್ತುಗಳಾಗಿ, ಮೂಲದ್ರವ್ಯಗಳಾಗಿ ಪ್ರಕಟಗೊಂಡಿವೆ. ಆರುಣರಾಗ ಚಲನಚಿತ್ರವಾಗಿ ಪ್ರಖ್ಯಾತಿ ಪಡೆದಿದ್ದರೆ ಲಂಬಾಣಿಗಳ ...

READ MORE

Related Books