ನಿಲ್ಲಿಸದಿರು ಕೊಳಲಗಾನವ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 218

₹ 175.00
Year of Publication: 2016
Published by: ಸುಧಾ ಎಂಟರ್ ಪ್ರೈಸಸ್

Synopsys

ಕಾದಂಬರಿಕಾರ್ತಿ ಸಾಯಿಸುತೆ ಸಾಮಾಜಿಕ ಕಾದಂಬರಿ ನಿಲ್ಲಿಸದಿರು ಕೊಳಲಗಾನವ. ನಿಲ್ಲಿಸದಿರು ವನಮಾಲೀ ಕೊಳಲ ಗಾನವ ನಿಲ್ಲಿಸೆ ನೀ ಕಳೆವುದೆಂತೊ ಭವಭೀತಿಯ ಕೇಶವ|| - ಪಜ್ಯ ಪ.ತಿ.ನ ಕೃಷ್ಣ ಕೊಳಲಗಾನವನ್ನ ನಿಲ್ಲಿಸಿದಾಗ ಗೋಪಿಯರು ಮಾಡುವ ಪ್ರಾರ್ಥನೆಯ ಒಂದು ಸುಂದರ ಅದ್ಭುತ ವರ್ಣನೆ. ಬೃಂದಾವನದಲ್ಲಿ ಮಾತ್ರವಲ್ಲದೆ, ಜಗತ್ತಿನ ಪಶು, ಪಕ್ಷಿ, ಪ್ರಾಣಿ, ಮಾನವ ಚೇತನಗಳೆಲ್ಲ ಪ್ರೇಮದ ಸುತ್ತ ತಿರುಗುತ್ತದೆ. ಪ್ರೇಮವೆನ್ನುವುದು ಅಲೌಕಿಕ ಗಾನ ವರ್ಷ (ಇಂಥ ವರ್ಷಕ್ಕಾಗಿಯೇ ಎಲ್ಲರ ಚಡಪಡಿಕೆ). ಸಂಬಂಧಗಳು, ಸ್ವಾಭಿಮಾನ, ಐಡೆಂಟಿಟಿ, ಅವಲಂಬನೆ ಮಧ್ಯ ನೈತಿಕತೆಯ ಒಳಮಿಂಚನ್ನ ಪ್ರಸರಿಸುವ ದೀಪಿಕಾ ಎಲ್ಲರಿಗೂ ಇಷ್ಟವಾಗುತ್ತಾಳೆ. ಭಾವ ಶ್ರೀಮಂತಿಕೆಯ ಅದ್ಭುತವಾದ ಪರಿಕಲ್ಪನೆಯ ಕೊಳಲಗಾನವಿದು. 'ಅಧಿಕಾರ ಮತ್ತು ಸಂಪತ್ತನ್ನು ಪಜಿಸುವ ಸಮಾಜದಲ್ಲಿ ನಾವು ಇದ್ದೇವೆ. ಶಾಲೆಗಳಲ್ಲಿ ಮಕ್ಕಳಿಗೆ ನೈತಿಕ ಪಾಠ ಬೋಧಿಸಬೇಕಾಗಿದೆ.' ಇದನ್ನ ಹೇಳಿದವಳು ಪ್ರೊಫೆಸರ್ ದಿಜೇಂದ್ರ ಬೋಸರ ಮಗಳು ದೀಪಿಕಾ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books