ಮೋಹ ಚುಂಬಿತ ಮಾಯೆ

Author : ಕೆ.ಟಿ.ಗಟ್ಟಿ

Pages 200

₹ 200.00




Year of Publication: 2018
Published by: ಸುಂದರ ಪುಸ್ತಕ ಪ್ರಕಾಶನ
Address: #79, ಚಂದ್ರಕಿರಣ, 2ನೇ ತಿರುವು, 2ನೇ ಮುಖ್ಯರಸ್ತೆ, ಶಕ್ತಿನಗರ, ಧಾರವಾಡ-580004

Synopsys

‘ಮೋಹ ಚುಂಬಿತ ಮಾಯೆ’ ಕನ್ನಡದ ಖ್ಯಾತ ಲೇಖಕ ಕೆ.ಟಿ.ಗಟ್ಟಿ ಅವರ ಕಾದಂಬರಿ. ಬದುಕಿನಲ್ಲಿ ಪ್ರೇಮದ ಮಾಯೆ ಹೇಗೆ ಆವರಿಸುತ್ತದೆ ಎಂಬುದನ್ನು ಸುಂದರ ಸಾಹಿತ್ಯಿಕ ಭಾಷೆಯಲ್ಲಿ ಕಟ್ಟಿಕೊಟ್ಟಿರುವ ಕಾದಂಬರಿ -ಮೋಹ ಚುಂಬಿತ ಮಾಯೆ. ತಮ್ಮ ಸೂಕ್ಷ್ಮ ಒಳನೋಟಗಳ ಮೂಲಕ ವಿಭಿನ್ನ ಶೈಲಿಯ ಕೃತಿಗಳನ್ನು ರಚಿಸುವ ಲೇಖಕರ ಈ ಕೃತಿ ತಾನಾಗೇ ಓದಿಸಿಕೊಳ್ಳುವ ಗುಣವನ್ನು ಹೊಂದಿದೆ.

About the Author

ಕೆ.ಟಿ.ಗಟ್ಟಿ
(22 July 1938)

ಕಾದಂಬರಿಕಾರ, ಭಾಷಾತಜ್ಞ, ಸಮರ್ಥ ಪ್ರಾಧ್ಯಾಪಕರೆನಿಸಿದ ಕೆ.ಟಿ. ಗಟ್ಟಿಯವರು ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ ಜನಿಸಿದರು. ತಂದೆ ಧೂಮಪ್ಪಗಟ್ಟಿಯವರು ಕೃಷಿಕರಾದರೂ ಯಕ್ಷಗಾನ ಕಲೆಯ ಬಗ್ಗೆ ಅಪಾರ ಒಲವಿದ್ದವರು. ತಾಯಿ ಪರಮೇಶ್ವರಿ ತುಳು-ಮಲಯಾಳಂ ಪಾಡ್ದನ ಹಾಡುಗಳನ್ನು ಕಲಿತವರು. ಉತ್ತಮ ಭಾಷೆ, ಆಕರ್ಷಕ ಶೈಲಿ, ಹೊಸ ಹೊಸ ವಸ್ತು, ಸರಳ ನಿರೂಪಣೆಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಮನೆ ಮಾತಾದ ಹಿರಿಯ ಕಥೆಗಾರ ಕೆ.ಟಿ.ಗಟ್ಟಿ ಅವರು ಎಲ್ಲಾ ಓದುಗರಿಗೆ ಚಿರಪರಿಚಿತರು. ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿಎಡ್ ಪದವಿ ಪಡೆದಿರುವ ಕೆ.ಟಿ.ಗಟ್ಟಿ ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯವರು. ಜನಿಸಿದ್ದು 1938ರಲ್ಲಿ. ಸದ್ಯ ...

READ MORE

Related Books