ಅವಧೇಶ್ವರಿ

Author : ಶಂಕರ್ ಮೊಕಾಶಿ ಪುಣೇಕರ್

Pages 288

₹ 200.00
Year of Publication: 2012
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಪುಣೇಕರ್‌ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1988) ಪುರಸ್ಕೃತ ಕಾದಂಬರಿ ’ಅವಧೇಶ್ವರಿ’. ವೇದಕಾಲೀನ ಬದುಕನ್ನು ಕೇಂದ್ರವಾಗಿರಿಸಿಕೊಂಡು ರಚಿಸಲಾದ ಕಾದಂಬರಿ. ಅವಧೇಶ್ವರಿ ಮೊದಲು ಪ್ರಕಟವಾದದ್ದು1987ರಲ್ಲಿ. ಅವಧೇಶ್ವರಿಯನ್ನು ಪುಣೇಕರ್‌ ಅವರು ’ವೇದಕಾಲೀನ ರಾಜಕೀಯ ಕಾದಂಬರಿ’ ಎಂದು ಕರೆದಿದ್ದಾರೆ.

ಪುರುಕುತ್ಸ, ಪುರುಕುತ್ಸಾನಿ, ತ್ರಸದಸ್ಯು, ವೃಶಜಾನ, ಶಂಬರಾಸುರ ಪಾತ್ರಗಳು ಋಗ್ವೇದದಲ್ಲಿ ಉಲ್ಲೇಖಿತವಾಗಿವೆ ಎನ್ನುವ ಪುಣೇಕರ್‌ ಅವರು ಯಜ್ಞನ-ಯಾಗ, ಋಷಿಗಳು, ರಾಜರುಗಳ ವಿವರಣೆಗಳಿಂದ ವೇದಕಾಲದ ವಾತಾವರಣ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.  ಕಾದಂಬರಿಯಲ್ಲಿ ಪುರುಕುತ್ಸನ ಖಿನ್ನತೆ, ಪುರುಕುತ್ಸಾನಿಯ ಚಾಣಾಕ್ಷತೆ, ತಾರ್ಕ್ಷ್ಯನ ದಕ್ಷತೆ, ತ್ರಸದಸ್ಯುವಿನ ತಿಳಿಯದ ಅಸ್ಮಿತೆಗಳ ಮೂಲಕ ಒಂದು ವಿಭಿನ್ನ ಮಾಯಾಲೋಕವನ್ನೇ ಚಿತ್ರಿಸಲಾಗಿದೆ.

About the Author

ಶಂಕರ್ ಮೊಕಾಶಿ ಪುಣೇಕರ್
(08 May 1928 - 11 August 2004)

ಶಂಕರ ಮೊಕಾಶಿ ಪುಣೇಕರ ಅವರು ಹುಟ್ಟಿದ್ದು 1928, ಧಾರವಾಡದಲ್ಲಿ. ಅಲ್ಲಿಯೇ ತಮ್ಮ ಶಿಕ್ಷಣವನ್ನು ಮುಗಿಸಿದರು. ಬಿ.ಎ.ಪದವಿ ಮುಗಿದ ನಂತರ ನಾಲ್ಕು ವರ್ಷಗಳ ಕಾಲ ವಿಜಾಪುರ, ಕಾರವಾರ, ಧಾರವಾಡಗಳಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂ.ಎ.ಪದವಿ ಮತ್ತು ಪಿಎಚ್.ಡಿ ಪದವಿಯನ್ನು ಪಡೆದರು. ಬೆಳಗಾವಿಯ ಆರ್.ಪಿ.ಡಿ.ಕಾಲೇಜು, ಲಿಂಗರಾಜ ಕಾಲೇಜು, ಮುಂಬಯಿಯ ಕೆ.ಸಿ.ಕಾಲೇಜು, ಐ.ಐ.ಟಿಗಳಲ್ಲಿ ಅಧ್ಯಾಪಕರಾಗಿ, ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. 1988ರಲ್ಲಿ ನಿವೃತ್ತಿಯ ನಂತರ ಮೂರು ವರ್ಷಗಳ ಕಾಲ ಶ್ರೀ ಸತ್ಯಸಾಯಿಬಾಬಾ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.  ಕನ್ನಡ ಮತ್ತು ಇಂಗ್ಲಿಷ್ ...

READ MORE

Awards & Recognitions

Related Books