ಕುರು ಸಾಮ್ರಾಜ್ಞಿ

Author : ಲೀಲಾ ದಾಮೋದರ್‌



Year of Publication: 2022
Published by: ಧಾತ್ರಿ ಪ್ರಕಾಶನ
Address: ನಂ.240, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಕೃಷ್ಣಮೂರ್ತಿ ಬಡಾವಣೆ, ನ್ಯೂ ಕಾಂತರಾಜೇ ಅರಸು ರಸ್ತೆ, ಮೈಸೂರು- 570 009
Phone: 9900580394

Synopsys

ಲೀಲಾ ದಾಮೋರ್ ಅವರ ಅನುವಾದಿತ ಕಾದಂಬರಿ ಕೃತಿ ʻಕುರು ಸಾಮ್ರಾಜ್ಞಿʼ. ಲೇಖಕ ಪ್ರಭಾಕರ ಶಿಶಿಲ ಅವರು ಕನ್ನಡದಲ್ಲಿ ರಚಿಸಿದ ಮಹಾಭಾರತ ಮಹಾಕಾವ್ಯ ಆಧಾರಿತ ʻಮತ್ಸ್ಯಗಂಧಿʼ ಕೃತಿಯ ಅರೆಭಾಷೆ ಅನುವಾದ ಈ ಪುಸ್ತಕ. ಮಹಾಭಾರತದಲ್ಲಿ ಅಲ್ಲಲ್ಲಿ ಬರುವ ವಿಶೇಷ ಕತೆಗಳು, ಧರ್ಮ-ಅಧರ್ಮ, ಕೃಷ್ಣ ಪರಮಾತ್ಮನ ಆಗಮನ ಇಂತಹ ಬಹುಮುಖ್ಯ ವಿಚಾರಗಳ ಮುಂದೆ ಆರಂಭದಲ್ಲಿ ಸಿಗುವ ಮತ್ಸ್ಯಗಂಧಿಯ ವಿಚಾರವನ್ನು ತಿಳಿದಿರುವುದು ಕಡಿಮೆ. ಆದರೆ ಮಹಾಭಾರತದ ಮಹಾತಿರುವು ಇರುವುದೇ ಮತ್ಸ್ಯಗಂಧಿ ಪ್ರಕರಣದಲ್ಲಿ. ಮತ್ಸ್ಯಗಂಧಿ ಮೀನಿನ ಗರ್ಭದಲ್ಲಿ ಜನಿಸಿದ ಹೆಣ್ಣು ಮಗಳು, ಮುಂದೆ ಪರಾಶರ ಮುನಿಯೊಂದಿಗೆ ನಿಯೋಗದಿಂದ ತೊಡಗಿ ವೇದವ್ಯಾಸ ಮಹರ್ಷಿಗಳಿಗೆ ಜನ್ಮನೀಡುತ್ತಾಳೆ. ಹಸ್ತಿನಾವತಿ ರಾಜ ಶಂತನನ್ನು ಮತ್ತೆ ಮದುವೆಯಾಗಿ ಬಳಿಕ ಮಗನನ್ನು ಅಂಬಿಕೆ ಅಂಬಾಲಿಕೆಯರೊಂದಿಗೆ ಮದುವೆ ಮಾಡಿಸಿ, ಮುಂದೆ ಅಂಬಿಕೆಗೆ ಕುರುಡು ಮಗ ದೃತರಾಷ್ಟ್ರ ಹುಟ್ಟಿದರೆ, ಅಂಬಾಲಿಕೆಗೆ ರೋಗಿಷ್ಟನಾದ ಪಾಂಡುರಾಜ ಜನಿಸುತ್ತಾನೆ. ಹೀಗೆ ಪಟ್ಟಕ್ಕೆ ಅಸಮರ್ಥ ಉತ್ತರಾಧಿಕಾರಿಗಳು ಹುಟ್ಟಿದ್ದರಿಂದ ನೊಂದು ಅನಾರೋಗ್ಯಕ್ಕೆ ತುತ್ತಾಗಿ ಮಗ ವೇದವ್ಯಾಸನ ಮಡಿಲಲ್ಲಿ ಪ್ರಾಣಬಿಟ್ಟ ಮತ್ಸ್ಯಗಂಧಿಯ ಹೃದಯ ವಿದ್ರಾವಕ ಕತೆಯನ್ನು ಇಲ್ಲಿ ಹೇಳಿದ್ದಾರೆ. ಜೊತೆಗೆ ಭೀಷ್ಮನ ಜೀವನದಲ್ಲಿ ನಡೆದ ಹೋರಾಟಗಳು, ತಂದೆಗೆ ಇಷ್ಟವಿಲ್ಲದಿದ್ದರೂ ಸಿಂಹಾಸನ ತ್ಯಜಿಸಿದ್ದು ಮತ್ತು ಬ್ರಹ್ಮಚರ್ಯ ಪಾಲಿಸಿದ್ದು ಇವೆಲ್ಲ ಪಾತ್ರಗಳೂ, ಸನ್ನಿವೇಶಗಳೂ ಮನಮುಟ್ಟುವಂತೆ ಪ್ರಭಾಕರ ಶಿಶಿಲ ಅವರು ಮೂಲ ಚಿತ್ರಿಸಿದ್ದಾರೆ. ಅದನ್ನು ಲೀಲಾ ದಾಮೋದರ್ ಅವರು ಅಚ್ಚುಕಟ್ಟಾಗಿ ಅನುವಾದಿಸಿದ್ದಾರೆ.

About the Author

ಲೀಲಾ ದಾಮೋದರ್‌

ಕತೆಗಾರ್ತಿ ಲೀಲಾ ದಾಮೋದರ್‌ ಅವರು 1954ರಲ್ಲಿ ಕೊಡಗು ಜಿಲ್ಲೆಯ ಚೆಂಬು ಗ್ರಾಮದಲ್ಲಿ ಜನಿಸಿದರು. ಉಪನ್ಯಾಸಕಿಯಾಗಿ ನಿವೃತ್ತಿ ಪಡೆದಿದ್ದಾರೆ.  ಹೆಗ್ಗಡೆಯ ಮಗಳು ಅವರ  ಕಥಾಸಂಕಲನ. ‘ಮಾತು ಬೇಡದ ಕ್ಷಣಗಳು’ ಕವನ ಸಂಕಲನ, ‘ಕಂದನ ಕನಸು’ ಶಿಶು ಕಾವ್ಯ ಪ್ರಕಟವಾಗಿವೆ. ಅವರಿಗೆ ‘ತುಷಾರ ಎಚ್. ಎಂ. ಟಿ. ಕಥಾ ಪ್ರಶಸ್ತಿ’ ಲಭಿಸಿವೆ. ...

READ MORE

Related Books