ಹಂಗಿನ ಮುಸುಕಿನಲ್ಲಿ

Author : ಚಿತ್ರಲೇಖಾ ಎಸ್.

Pages 160

₹ 60.00
Year of Publication: 2010
Published by: ಶುಭೋದಯ ಪ್ರಿಂಟರ್ಸ್
Address: ಕಸ್ತೂರ್‌ಬ ನಗರ್‌, ಬನಶಂಕರಿ, ಬೇಂಗಳೂರು- 560026

Synopsys

ಹಂಗಿನ ಮುಸುಕಿನಲ್ಲಿ ಚಿತ್ರಲೇಖ ಅವರ ಕೃತಿಯಾಗಿದೆ. ಈ ಕಥೆಯಲ್ಲಿ ಬರುವ ನಾಯಕಿ ಸಿಂಧು , ಬಡತನದ ಮೂಸೆಯಲ್ಲಿ ಬೆಳೆದು ಒಬ್ಬ ತಮ್ಮ , ತಂಗಿ ಹಾಗೂ ತಾಯಿಯೊಡನೆ ವಠಾರದ ಮನೆಯಲ್ಲಿ ವಾಸ. ತಂದೆ ತೀರಿಹೋದ ನಂತರ ತಾಯಿ ರಾಧಾಬಾಯಿ ದುಡಿದು ಮಕ್ಕಳನ್ನು ಸಾಕುತ್ತಿದ್ದರು. ಹೆಸರಿಗೆ ತಕ್ಕಂತೆ ರಾಧಾ ಬಾಯಿಗೆ ಬಾಯಿ ಜಾಸ್ತಿ! ಚೂಪು ಮಾತುಗಳು ಹೆಚ್ಚು ಬಡತನದ ಬೇಗೆಗೆ ಹೈರಣಳಾದ ರಾಧಾಬಾಯಿಗೆ ತಮ್ಮ ಶ್ಯಾಮಣ್ಣ ಸಿಂಧುವಿಗೆ ವಿಧುರನೊಡನೆ ಮದುವೆ ಮಾಡಲು ಪ್ರಸ್ತಾಪಿಸುತ್ತಾರೆ. ಮೊದಮೊದಲ ಬೇಡವೆಂದ ತಾಯಿಯನ್ನು ಸಿಂಧು ಒಪ್ಪಿಸುವಲ್ಲಿ ಮಾವನೊಡನೆ ಒಂದಾಗುತ್ತಾಳೆ. ಅವಳಿ ಮಕ್ಕಳ ತಂದೆ ಶ್ರೀಧರನೊಡನೆ ಮಾತುಕತೆಯಾಗಿ ಸಿಂಧು ಬ್ಯಾಂಕ್ ಉದ್ಯೋಗಿ ಶ್ರೀಧರನೊಡನೆ ಮದುವೆಯ ತದನಂತರ ತಮ್ಮ ಭರತ್ ಕೆಲಸಕ್ಕೆ ಸೇರುವ ತನಕ ಸಹಾಯ ಮಾಡಬೇಕೆಂದು ವಿನಂತಿಸಿಕೊಳ್ಳುತ್ತಾಳೆ. ಶ್ರೀಧರ ತಾನು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದನ್ನು ಹೇಳುವುದು ಅವನ ಒಳ್ಳೆತನಕ್ಕೆ ಉದಾಹರಣೆ ಮದುವೆಯಾಗಿ ಗಂಡನೊಡನೆ ಮಕ್ಕಳನ್ನು ಪ್ರಾಣದಂತೆ ನೋಡುವ ಸಿಂಧು. ಅಳಿದ ಹೆಂಡತಿ ಲಕ್ಷಿಯ ಸಂಬಂಧಿಯಾದ ಶಾರದಕ್ಕ ಅಡಿಗೆ ಮನೆಗೆ ಯಜಮಾನಿ , ಒಳ್ಳೆಯ ಹೆಂಗಸು . ಸಿಂಧು ಹೊಂದಿಕೊಂಡು ಹೋಗುವುದನ್ನು ಶ್ರೀಧರ ಗಮನಿಸುತ್ತಾನೆ. ಮಕ್ಕಳು ಸಹ ಅಮ್ಮನೆಂದು ಕರೆಯಲು ಪ್ರಾರಂಭಿಸುತ್ತದೆ. ಎರಡು ತಿಂಗಳ ನಂತರ ತಾಯಿ ಹಾಸಿಗೆ ಹಿಡಿದು ಮಲಗಿದ ಸಂಗತಿ ತಿಳಿದು ಗಂಡನಿಗೆ ಹೇಳಿ ನೋಡಲು ಹೋಗುವ ಸಿಂಧುವನ್ನು ಸಮಾಧಾನವಾಗಿ ಕಳುಹದ ಶ್ರೀಧರ ಸಿಂಧುವಿಗೆ ಪ್ರಶ್ನೆಯಾಗುತ್ತಾನೆ. ನಂತರ ಗಂಡನಲ್ಲಿ ಅಂಗಲಾಚಿ ತಾಯಿಯನ್ನು ಮತ್ತು ಒಡಹುಟ್ಟಿದವರನ್ನು ತನ್ನ ಮನೆಗೆ ಕರೆತರುವಲ್ಲಿ ಯಶಸ್ವಿ ಯಾಗುತ್ತಾಳೆ. ' ಹಂಗು' ಎಂಬುದು ಇಲ್ಲಿಂದ ಬೆಳೆಯಲು ಪ್ರಾರಂಭವಾಗುತ್ತದೆ.

About the Author

ಚಿತ್ರಲೇಖಾ ಎಸ್.
(06 May 1945)

ಸಾಹಿತಿ, ಕಾದಂಬರಿಗಾರ್ತಿ ಚಿತ್ರಲೇಖಾ ಎಸ್ ಅವರು 1945 ಮೇ 01 ಜನಿಸಿದರು.  ಇವರ ಬಹುತೇಕ ಕಾದಂಬರಿಗಳು ಸಿನಿಮಾಗಳಾಗಿವೆ. ‘ಮುದುಡಿದ ತಾವರೆ ಅರಳಿತು, ಸಮಯದ ಗೊಂಬೆ’ ಕನ್ನಡದಲ್ಲಿ ಚಲನಚಿತ್ರವಾಗಿದೆ.  ‘ಪ್ರೇಮಪಲ್ಲವಿ, ಸ್ವರ್ಗದ ನೆರಳು, ಕೆಂಪಾದ ದೀಪ, ಹೂಮಂಚ, 47 ದಿನಗಳು 1987, ಕರುಣಹತ್ಯೆ, ನಂಜಾದ ನೆನಪು, ಸಂಗಮಿಸದ ನದಿಗಳು’ ಅವರ ಪ್ರಮುಖ ಕಾದಂಬರಿಗಳು. ...

READ MORE

Related Books