ವಿಷಮಂಥನ

Author : ಸುದರ್ಶನ ದೇಸಾಯಿ

Pages 109

₹ 18.00
Year of Publication: 1993
Published by: ಭಾಗ್ಯಲಕ್ಷ್ಮೀ ಪ್ರಕಾಶನ
Address: 37, 3ನೇ ಕ್ರಾಸ್‌, 4ನೇ ಬ್ಲಾಕ್‌ ಬನಶಂಕರಿ, 3ನೇ ಸ್ಟೇಜ್‌, 3ನೇ ಫೇಸ್‌ ಬೆಂಗಳೂರು-560085

Synopsys

ʼವಿಷಮಂಥನʼ ಕಾದಂಬರಿಯನ್ನು ಲೇಖಕ ಸುದರ್ಶನ ದೇಸಾಯಿಯವರು ರಚಿಸಿದ್ದಾರೆ. ಕನ್ನಡದಲ್ಲಿ ಪತ್ತೇದಾರಿಯ ಹೊಸ ರೂಪದೊಂದಿಗೆ ಈ ಕಾದಂಬರಿಯು ಮೂಡಿಬಂದಿದೆ. ತುಷಾರ ಪತ್ರಿಕೆಯಲ್ಲಿ ಧಾರವಾಹಿಯ ರೂಪದಲ್ಲಿ ಈ ಕಾದಂಬರಿಯು ಮೂಡಿಬಂದಿದೆ. ಬ್ರಿಟಿಷ್‌ ಆಳ್ವಿಕೆಯಲ್ಲಿ ಅಸ್ತಿತ್ವದಲ್ಲಿದ್ದ ಅಭಿಜಾತ ಶ್ರೀಮಂತ ಕುಟುಂಬದ ಒಳಗಿನ ಸನ್ನಿವೇಷಗಳು ಈ ಕಾದಂಬರಿಯಲ್ಲಿದೆ. ಇಲ್ಲಿನ ಕಥೆಯಲ್ಲಿ ಅಪರಾಧಗಳ ಜಾಲ ವಾಸ್ತವಿಕವೇ ಅಥವಾ ಅವಾಸ್ತವಿಕವೇ ಎಂಬ ಪ್ರಶ್ನೆಯೊಂದಿಗೆ ಕಾದಂಬರಿಯು ಸಾಗುತ್ತದೆ. ಹಿಂದಿ ಸಿನಿಮಾಗಳ ಪ್ರಭಾವ ಕೂಡ ಇದರಲ್ಲಿ ಅಡಗಿದೆ ಎಂದು ಮುನ್ನುಡಿಯಲ್ಲಿ ಈ ಕಾದಂಬರಿಯ ಕುರಿತು ವಿಶ್ಲೇಷಿಸಲಾಗಿದೆ.ಮಧ್ಯಮ ವರ್ಗದ ಸಂಸಾರ ಆಕಸ್ಮಿಕವಾಗಿ ಅಪರಾಧ ಜಗತ್ತಿಗೆ ಕಾಲಿಟ್ಟು ನಂತರ ನಂತರ ಅನುಭವಿಸುವ ತೊಂದರೆಗಳನ್ನು ಇಲ್ಲಿ ಕಥೆಯ ರೂಪದಲ್ಲಿ ವಿವರಿಸಲಾಗಿದೆ.

About the Author

ಸುದರ್ಶನ ದೇಸಾಯಿ
(14 January 1945 - 31 July 2012)

ಲೇಖಕ ಸುದರ್ಶನ ದೇಸಾಯಿ ಅವರು ಮೂಲತಃ ಧಾರವಾಡದವರು. ತಂದೆ- ಕೃಷ್ಣರಾವ ರಾಮಾರಾವ ದೇಸಾಯಿ. ತಾಯಿ- ರಾಧಾಬಾಯಿ. ವಿದ್ಯಾಭ್ಯಾಸವನ್ನು ಧಾರವಾಡದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆ, ಮಾಳಮಡ್ಡಿಯ ಕೆ.ಇ.ಬೋರ್ಡ್ ಹೈಸ್ಕೂಲಿನಲ್ಲಿ ಪೂರ್ಣಗೊಳಿಸಿದರು. ಬಾಸೆಲ್ ಮಿಷನ್ ಟ್ರೈನಿಂಗ್ ಕಾಲೇಜಿನಿಂದ ಟಿ.ಸಿ.ಎಚ್. ತರಬೇತಿ ಪಡೆದು  ಧಾರವಾಡದ ಗುಲಗುಂಜಿ ಕೊಪ್ಪದ ಸರಕಾರಿ ಶಾಲೆಯಲ್ಲಿ  ಶಿಕ್ಷಕರಾಗಿ ದುಡಿದರು.1977ರಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡರು.  ಪ್ರಜಾಮತ ವಾರಪತ್ರಿಕೆಯ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ತಮ್ಮ ಸಪ್ತಪದಿ ಕತೆಗೆ ಮೂರನೆ ಬಹುಮಾನ ಪಡೆದರು. ಆನಂತರದಲ್ಲಿ ಸುಮಾರು 60ಕ್ಕೂ ಹೆಚ್ಚು ಸಣ್ಣಕತೆಗಳನ್ನು ರಚಿಸಿದರು. ಅವರ ಕಥೆಗಳಾದ ಅಪರಿಚಿತ, ಕರಿನಾಯಿ, ನೆಲುವಿಗೆ ಹಾರದ ಬೆಕ್ಕು ಹಾಗೂ ...

READ MORE

Related Books