ಮದುವೆಯ ಕಥಾ ಪ್ರಸಂಗ

Author : ಮಾಧವ ಕುಲಕರ್ಣಿ

Pages 212

₹ 190.00
Year of Publication: 2021
Published by: ಶ್ರೀ ರಾಮ ಪ್ರಕಾಶನ
Address: #893/ಡಿ. 3ನೇ ಕ್ರಾಸ್, ಇಸ್ಟರ್ನ್ ಎಕ್ಸ್ಟೆಕ್ಷನ್, ನೆಹರು ನಗರ, ಮಂಡ್ಯ-571401
Phone: 9448930173

Synopsys

ಮದುವೆಯ ಕಥಾ ಪ್ರಸಂಗ ’ ಕೃತಿಯು ಮಾಧವ ಕುಲಕರ್ಣಿ ಅವರ ಕಾದಂಬರಿ. ವರ್ತಮಾನದಲ್ಲಿ ನಡೆಯುತ್ತಿರುವ ಸಂಗತಿಗಳನ್ನು ಲೇಖಕ ಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ. ’ಗೋವಿಂದ ಭಟ್ಟ’ ಎನ್ನುವ ಪಾತ್ರವನ್ನು ಕೇಂದ್ರವಾಗಿರಿಸಿ, ವರ್ತಮಾನದ ಸಂಗತಿಗಳನ್ನು ಜನರಿಗೆ ತಿಳಿಯಪಡಿಸುತ್ತದೆ ಈ ಕಾದಂಬರಿ. ಲೇಖಕ ತನ್ನ ಸುರಕ್ಷಿತ ಪರಿಧಿಯಿಂದ ಹೊರ ಜಗತ್ತಿನ ಪ್ರವೇಶಕ್ಕೆ ಸಿದ್ಧನಾಗುವ ಮೂರನೇ ಆಯಾಮದ ನೋಟವನ್ನು ಇಲ್ಲಿ ಕಾಣಬಹುದು. ಗೋವಿಂದ ಭಟ್ಟರು ಗದುಗಿನ ಸುರಕ್ಷಿತ ವಲಯದಲ್ಲಿ ಎಲ್ಲರಿಗೂ ಪರಿಚಯವಿದ್ದ ವ್ಯಕ್ತಿ, ಪೌರೋಹಿತ್ಯದಿಂದ  ಜೀವನೋಪಾಯ ನಡೆಸುತ್ತಿದ್ದರು ಎನ್ನುವ ಅಂಶವನ್ನು ತೆಗೆದುಕೊಂಡು ಕಾದಂಬರಿಯನ್ನು ಬೆಳೆಸುತ್ತಾ ಹೋಗುತ್ತಾರೆ ಲೇಖಕರು. ಇಲ್ಲಿ ಗದುಗಿನ ಭಾಷೆಯನ್ನು ಮತ್ತು ಜೀವನ ಶೈಲಿಯನ್ನು ಕೂಡಾ ಚಿತ್ರಿಸಿದ್ದಾರೆ. ಅಲ್ಲಿನ ಜನರ ಹಿಂದಿ ಸಿನಿಮಾಗಳನ್ನು ನೋಡುವ ಹುಚ್ಚು ಸೇರಿದಂತೆೆ ಅನೇಕ ವಿಚಾರಧಾರೆಗಳ ಕುರಿತು ವಿಶ್ಲೇಷಿಸುತ್ತಾರೆ. ಕಾದಂಬರಿಯಲ್ಲಿ ಹೃದ್ಯ ಪ್ರಸಂಗಗಳು ಕೂಡಾ ವ್ಯಕ್ತವಾಗಿದ್ದು, ಗತಕಾಲದಲ್ಲಿ ನಡೆದ ಮತ್ತು ಭವಿಷ್ಯದಲ್ಲಿ ನಡೆಯಬಹುದಾದ ಕೆಲವೊಂದು ವಿಷಯಗಳ ಬಗ್ಗೆ ಲೇಖಕರು ಬೆಳಕು ಚೆಲ್ಲಿದ್ದಾರೆ. ವರ್ತಮಾನದ ವಿಷಯಗಳನ್ನಾಧರಿಸಿ ಸಾಹಿತ್ಯ ರಚಿಸುವವರಿಗೆ ಈ ಕಾದಂಬರಿ ಒಂದು ಮಾರ್ಗಸೂಚಿಯಂತಿದೆ.

About the Author

ಮಾಧವ ಕುಲಕರ್ಣಿ
(14 January 1946)

ಲೇಖಕ ಮಾಧವ ಕುಲಕರ್ಣಿ ಅವರು ಮೂಲತಃ ಗದಗ ಜಿಲ್ಲೆಯವರು, ವಿದ್ಯಾಭ್ಯಾಸ ಗದಗ ಮತ್ತು ಧಾರವಾಡದಲ್ಲಿ ಪೂರ್ಣಗೊಳಿಸಿದ ಅವರು ಆಂಗ್ಲ ಸಾಹಿತ್ಯದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ 1968ರಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಗದಗ, ಅಂಕೋಲ, ಉಡುಪಿಗಳಲ್ಲಿ ಇಂಗ್ಲಿಷ್ ಸಾಹಿತ್ಯದ ಅಧ್ಯಾಪಕರಾಗಿದ್ದರು. 1972 ರಿಂದ ರಿಂದ 2003ರವರೆಗೆ ಮೈಸೂರಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ  ಸದ್ಯ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಕನ್ನಡದ ಸುಪ್ರಸಿದ ಕಥೆಗಾರರು ಮತ್ತು ವಿಮರ್ಶಕರು ಆಗಿರುವ ಮಾಧವ ಕುಲಕರ್ಣಿಯವರು  ನಾಲ್ಕು ಕಥಾ ಸಂಕಲನ ಒಂಬತ್ತು ವಿಮರ್ಶಾ ಸಂಕಲನ ಪ್ರಕಟಿಸಿದ್ದಾರೆ. 'ಬಂಧ ಬಂಧುರ' ಅವರ ಆಯ್ದ ವಿಮರ್ಶಾ ಲೇಖನಗಳ ಗ್ರಂಥ. “ಕುಲಕರ್ಣಿಯವರ ನಲವತ್ತೂರು ...

READ MORE

Related Books