ದಾರಿ ಕಾಣದಾಗಿದೆ

Author : ಎನ್. ಭಾಸ್ಕರ ಆಚಾರ್ಯ

Pages 200

₹ 150.00




Year of Publication: 2021
Published by: ಎನ್. ಆರ್. ಎ. ಎಂ ಪ್ರಕಾಶನ
Address: ಕೋಟೇಶ್ವರ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ-576222
Phone: 9844091370

Synopsys

ಲೇಖಕ ಭಾಸ್ಕರ ಆಚಾರ್ಯ ಅವರ  ಕಾದಂಬರಿ ‘ದಾರಿ ಕಾಣದಾಗಿದೆ. ದ್ವಂದ್ವದಿಂದ ಪಾರಾಗಲು ಕೆಲವೊಂದು ಬುದ್ದಿ ಜೀವಿಗಳ, ಮಾನಸಿಕ ತಜ್ಞರ, ಉದ್ಯಮಿಗಳ , ಬಂಡವಾಳಶಾಹಿಗಳ ಒಂದು ಸಂಘಟನೆ ಮಾಡುವ ಪ್ರಯತ್ನಗಳೇ ಈ ಕಾದಂಬರಿ ಮಾಲೆಯ ಜೀವಾಳವಾಗಿದೆ. ಮುಗಿಯದ ಪಯಣವಾಗಿರುವ ಇದರಲ್ಲಿ ಕಥಾನಾಯಕ ಈಗ ದಾರಿ ಕಾಣದೆ ಪರಿತಪಿಸುತ್ತಿದ್ದಾನೆ. ಈ ಸಂಕೀರ್ಣ ಕಾಲದಲ್ಲಿ ನ್ಯಾಯ ಆಯಾವೊಂದೇ ಪರಿಹಾರ ನೀಡಬಲ್ಲದು ಎಂಬ ದೂರದಾಶೆ ಅಥವಾ ಭ್ರಮೆ ಸಂಘಟಕರ ಮನಸ್ಸಲ್ಲಿ ಹುಟ್ಟು ಪಡೆಯುತ್ತಿರುವಾಗ, ನ್ಯಾಯಾಂಗವನ್ನು ಎಷ್ಟು ಸುಲಭದಲ್ಲಿ ತಿರುಚಬಹುದು, ಮಣಿಸಬಹುದು, ತನ್ನಂತೆ ಮಾಡಿಕೊಳ್ಳಬಹುದು ಎನ್ನುವ ಸತ್ಯ ಕಥಾನಾಯಕನ ಅಭ್ಯಾಸ, ಅಧ್ಯಯನದಲ್ಲಿ ಅನಾವರಣಗೊಂಡಿದೆ ಎಂದು ಲೇಖಕರು ಕಾದಂಬರಿ ಕುರಿತು ಹೇಳಿಕೊಂಡಿದ್ದಾರೆ. 

About the Author

ಎನ್. ಭಾಸ್ಕರ ಆಚಾರ್ಯ
(01 February 1954)

ಭಾಸ್ಕರ್ ಆಚಾರ್ಯ ಎನ್ ಅವರು ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ 1954 ಫೆಬ್ರವರಿ 01ರಂದು ಜನಿಸಿದರು. ಆರ್ಚಿ ಅವರ ಕಾವ್ಯನಾಮ. ತಂದೆಯ ಸ್ಮರಣಾರ್ಥ ಡಾ. ಎನ್. ಆರ್. ಆಚಾರ್ಯ ಸ್ಮಾರಕ ಆಸ್ಪತ್ರೆಯನ್ನು 1983ರಲ್ಲಿ ನಿರ್ಮಿಸಿದ್ದಾರೆ.  ಕೋಟೇಶ್ವರ ರೋಟರಿ ಸಂಸ್ಥೆಯ ಪ್ರಾರಂಭಿಕ ಸದಸ್ಯರಾಗಿದ್ದರು. ಸುವರ್ಣ ಮಹೋತ್ಸವ ಸಮಿತಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರದ ಗೌರವಾಧ್ಯಕ್ಷ ಹಾಗೂ ಸ್ಮರಣ ಸಂಚಿಕೆಯ ಸಂಪಾದಕರಾಗಿದ್ದರು. ‘ದ್ವಂದ್ವ, ವ್ಯವಸ್ಥೆ, ಅಭ್ಯಾಸ, ಪ್ರಯೋಗ, ಪರಿಣಾಮ, ಹೊಸ ಹಾದಿಯಲ್ಲಿ, ಆರ್ಚಿ ಅಂಕಣ’ ಅವರ ಮುಖ್ಯ ಕೃತಿಗಳು. ಪ್ರತಿ ವರ್ಷ ಬೆಂಗಳೂರಿನ ಗೆಳೆಯರ ಬಳಗದ ಸಹಯೋಗದೊಡನೆ ಸಾಹಿತ್ಯಕ ಸ್ಪರ್ಧೆ, ...

READ MORE

Related Books