ಮನೆ ಬೆಳಕಾಯ್ತು

Author : ಹೆಚ್.ಜಿ. ರಾಧಾದೇವಿ

Pages 100

₹ 100.00
Year of Publication: 2011
Published by: ಹೇಮಂತ ಸಾಹಿತ್ಯ
Address: 972 ಸಿ, 62ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, 4ನೇ ಎಂ ಬ್ಲಾಕ್, ಮಂಜುನಾಥನಗರ, ರಾಜಾಜಿನಗರ, ಬೆಂಗಳೂರು-560010
Phone: 0802670210

Synopsys

ತುಂಬಿದ ಕುಟುಂಬದ ಆರ್ಥಿಕ ಸಮಸ್ಯೆಗಳಿಗೆ ಹೆದರದೆ ತನ್ನಲ್ಲಿದ್ದ ವಿದ್ಯೆ ಮತ್ತು ಧೈರ್ಯವನ್ನೇ ಬಂಡವಾಳವನ್ನಾಗಿಸಿಕೊಂಡು ಸಾರ್ಥಕ ಬದುಕಿನ ಬೆಳಕು ಕಂಡ ತರುಣಿಯ ಕಥೆಯ ವಸ್ತುವನ್ನು ಮನೆ ಬೆಳಕಾಯ್ತು-ಕಾದಂಬರಿಯಲ್ಲಿದೆ.

ರಕ್ತ ಸಂಬಂಧಿಗಳಲ್ಲಿ ಮೂಡುವ ವಿರಸ, ಸಾಮಾಜಿಕ ನೆಲೆಗಟ್ಟಿನಲ್ಲಿ ಇಂದಿಗೂ ಬೇರೂರಿರುವ ತಾಯಿಯ ಗಂಡು ಮಕ್ಕಳ ಮೇಲಿನ ಅತಿ ವ್ಯಾಮೋಹದಿಂದ ಹೆಣ್ಣು ಮಕ್ಕಳನ್ನು ಕಡೆಗಣಿಸುವ ರೀತಿ, 'ಗೆದ್ದೆತ್ತಿನ ಬಾಲ' ಹಿಡಿವ ಜನರು ಹೀಗೆ ಪ್ರತಿಯೊಂದು ವಿಷಯವೂ ಈ ಕಾದಂಬರಿಯಲ್ಲಿ ಹಾಸು ಹೊಕ್ಕಾಗಿದೆ.

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books