ವೀರ ಕ್ಷತ್ರಿಯ

Author : ಕೌಂಡಿನ್ಯ ನಾಗೇಶ

Pages 234

₹ 200.00




Year of Publication: 2022
Published by: ವಂಶಿ ಪಬ್ಲಿಕೇಷನ್‌
Address: ನೆಲಮಂಗಲ ಬೆಂಗಳೂರು
Phone: 9916595916

Synopsys

”ವೀರ ಕ್ಷತ್ರಿಯ’ ಕೌಂಡಿನ್ಯ ಅವರು ರಚಿಸಿದ ಐತಿಹಾಸಿ ಕಾದಂಬರಿಯಾಗಿದೆ. ಕಾಲಗರ್ಭದಲ್ಲಿ ಸೇರಿಹೋಗಿರುವ ಇತಿಹಾಸದ ಶೇಷವನ್ನು ಹೊರತೆಗೆದು, ವಿಚಾರ ವಿಮರ್ಶೆ ಮಾಡಿ, ವಾಸ್ತವಿಕತೆಯೊಂದಿಗೆ ಸತ್ಯವನ್ನು ಅನಾವರಣಗೊಳಿಸುವ ಪ್ರಯತ್ನವನ್ನು ಈ ಕಾದಂಬರಿಯಲ್ಲಿ ಮಾಡಿದ್ದೇನೆ. ಇತಿಹಾಸದ ಅಧ್ಯಯನ, ಪೂರಕವಾದ ಶಾಸನಗಳ ಮಾಹಿತಿ ಅತ್ಯಗತ್ಯವಾಗಿರುತ್ತದೆ. ಒಂದು ವರ್ಷದ ನಿರಂತರ ಸಂಶೋಧನೆಯ ಫಲವಾಗಿ ನ್ಯಾಯ ಸಲ್ಲಿಸಲು ಸಾಧ್ಯವಾಗಿದೆ. ಭರತ ಖಂಡದ ಇತಿಹಾಸದಲ್ಲಿ ಸ್ವಸಾಮರ್ಥ್ಯದಿಂದ ರಾಜ್ಯವನ್ನು ಕಟ್ಟಿ ಆಳಿರುವ ಕಲಿಗಳು ಅಸಂಖ್ಯಾತ ಮಂದಿ ಇದ್ದಾರೆ ಈ ಪುಣ್ಯಭೂಮಿಯನ್ನು ದಕ್ಷತೆಯಿಂದ ಆಳಿರುವ ರಾಜರುಗಳೆಲ್ಲಾ ಕ್ಷತ್ರಿಯರಲ್ಲ. ರಾಜನಾದವನಿಗೆ ಕ್ಷತ್ರಿಯತ್ವ ಎಂಬುದು ಮಾನದಂಡವಲ್ಲ. ಧೈರ್ಯ, ಸಾಹಸ, ಸಾಧನೆಯ ಹೋರಾಟದಲ್ಲಿ ಕ್ಷಾತ್ರತ್ವ ಇರಬೇಕು. ಸ್ವರಾಜ್ಯ ಸ್ಥಾಪನೆ, ಹಿಂದು ಧರ್ಮದ ರಕ್ಷಣೆಗಾಗಿ ಸಾಮ್ರಾಜ್ಯ ಕಟ್ಟಿ ಮಹಾ ಸಾಮ್ರಾಟನಾದ ಕ್ಷತ್ರಿಯನಲ್ಲದವನ ಹೋರಾಟದ ಯಶೋಗಾಥೆಯೇ ಈ ಮಹಾನ್ ಕೃತಿಯಾಗಿದೆ.

About the Author

ಕೌಂಡಿನ್ಯ ನಾಗೇಶ

  ಕೌಂಡಿನ್ಯ   ಕಾವ್ಯನಾಮದಿಂದ  ಪ್ರಸಿಧ್ದಿಯನ್ನು  ಪಡೆದಿರುವ ವೈ.ಎನ್‌ ನಾಗೇಶ್‌ ಅವರು ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸೀಪುರದವರು . ತಂದೆ ನಾರಾಯಣ ರಾವ್‌ ತಾಯಿ ಜಯಲಕ್ಷ್ಮಿ . ಮೂವತ್ತೆರಡು ವರ್ಷಗಳಿಂದ ಸಾಹಿತ್ಯ ಸೇವೆಯನ್ನು ಮಾಡಿಕೊಂಡಿದ್ದಾರೆ. ಇವರು ಮಂಗಳ, ತರಂಗ, ಸುಧಾ, ಕನ್ನಡ ಪ್ರಭ, ಪ್ರಜಾವಾಣಿ ,ಉದಯವಾಣಿ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ 350 ಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಕನ್ನಡ ಭಾಷಾ ಸಂಶೋಧನಾ ಕೃತಿ, ಚಾರಿತ್ರಿಕ ಕೃತಿ, ಪೌರಾಣಿಕ ಗ್ರಂಥಗಳು ,ಧಾರ್ಮಿಕ ಮತ್ತು ಸಾಮಾನ್ಯ ಲೇಖನಗಳು, ಸಣ್ಣ ಕತೆಗಳು , ಕವನ ಸಂಕಲನಗಳು,  ಚಲನಚಿತ್ರಗಳು  ರಚಿಸಿದ್ದಾರೆ.   ಪ್ರಶಸ್ತಿ ...

READ MORE

Related Books