ಸ್ವಪ್ನ ಸಾರಸ್ವತ

Author : ಪೆರ್ಲ ಗೋಪಾಲಕೃಷ್ಣ ಪೈ

Pages 496

₹ 360.00

Buy Now


Year of Publication: 2019
Published by: ಹೇಮಂತ ಸಾಹಿತ್ಯ
Address: ನಂ.972, ಸಿ, 4ನೇ ಇ ಬ್ಲಾಕ್, 10ನೇ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-560060
Phone: 08023507170

Synopsys

ಗೋಪಾಲಕೃಷ್ಣ ಪೈ ಅವರು ಬರೆದ ಕಾದಂಬರಿ-ಸ್ವಪ್ನ ಸಾರಸ್ವತ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಈ ಕಾದಂಬರಿಯು ಚಿಂತನೆ ಮತ್ತು ತಾತ್ವಿಕತೆಯ ಹಿನ್ನೆಲೆಯಲ್ಲಿ ಕಥಾ ವಸ್ತುವೊಂದು ಸೆಳೆಯುವುದು ಈ ಕೃತಿಯ ಗಟ್ಟಿತನ. ಪೋರ್ಚುಗೀಸರ ದಬ್ಬಾಳಿಕೆಗೆ ಸಾರಸ್ವತ ಜನಾಂಗವೊಂದು ಗೋವೆಯ ತಮ್ಮ ನೆಲ ತೊರೆದು ಅಪರಿಚಿತ ನೆಲಕ್ಕೆ ಸ್ಥಳಾಂತರವಾಗುವಾಗಿನ ನೋವುಗಳ ದಾರುಣ ಕಥೆ ಇದು.

ಸ್ಥಳಾಂತರ ಮಾಡುವಾಗ ಹಣ, ಒಡವೆ, ವಸ್ತ್ರ ಎಲ್ಲವನ್ನೂ ಬಿಟ್ಟು ಹೋಗುತ್ತೇವೆಂಬ ನೋವಿಗಿಂತ ಆ ಸ್ಥಳದಲ್ಲಿ ಕಳೆದ ತಮ್ಮ ಭಾವನಾತ್ಮಕ ನೆನಪುಗಳನ್ನು ಬಿಟ್ಟು ಹೋಗುತ್ತಿದ್ದೇವೆ ಎಂಬುದು ಅವರನ್ನು ಕಾಡುತ್ತದೆ. ಅಷ್ಟೇ ಅಲ್ಲ; ಈ ಪೋರ್ಚುಗೀಸರು ತಮ್ಮ ಮೂಲ ನೆಲಕ್ಕಂಟಿರುವ ಭಾವಗಳ ಬೇರನ್ನೇ ಕೀಳುತ್ತಿದ್ದಾರೆ ಎಂಬಷ್ಟು ನೋವು ಅವರನ್ನು ಆಕ್ರೋಶಕ್ಕೆ ದೂಡುತ್ತದೆ.

ಪೋರ್ಚುಗೀಸರು ಬರುವಾಗ ತಮ್ಮೊಂದಿಗೆ ಮುದ್ರಣ ಯಂತ್ರವನ್ನೂ ತೆಗೆದುಕೊಂಡು ಬಂದಾಗ ಉದ್ಯೋಗವನ್ನು ಕಸಿದುಕೊಳ್ಳುವ ಭಾಗವೇ ಇದು ಎಂದು ಬಹುಜನರು ತರ್ಕಿಸುತ್ತಾರೆ. ಆದರೆ, ನಾಗ್ಡೋ ಬೇತಾಳನೊಬ್ಬ ಮಾತ್ರ ‘ಮುಂದೆ ಈ ಯಂತ್ರ ನಮ್ಮೆಲ್ಲರ ಜೀವನೋಪಾಯಕ್ಕೆ ಅನುಕೂಲವಾಗುತ್ತದೆ. ಈ ಯಂತ್ರಕ್ಕೆ ಬಹಿಷ್ಕಾರ ಹಾಕುವುದು ಮೂರ್ಖತನ’ಎಂದು ಪ್ರತಿಕ್ರಿಯಿಸುತ್ತಾನೆ. 

ಬದಲಾಗುವ ಕಾಲದೊಂದಿಗೆ ಹೇಗೆ ಹೊಂದಿಕೊಳ್ಳಬೇಕು ಎಂಬುದನ್ನು ಸ್ಥಳಾಂತರ ಸಮಸ್ಯೆ ಎದುರಿಸುತ್ತಿರುವ ಸಾರಸ್ವತ ಜನಸಮೂಹಕ್ಕೆ ಮಾತ್ರವಲ್ಲ ಬದಲಾವಣೆಯ ಬಿರುಗಾಳಿ ಎದುರಿಸುವ ಯಾರೇ ಆಗಲಿ ಅವರಿಗೂ ಒಂದು ರೀತಿಯ ಸಂದೇಶ ರವಾನಿಸುವ ಈ ಕಾದಂಬರಿಯ ಒಟ್ಟು ಆಶಯವೂ ಇದೇ ಆಗಿದೆ. 

About the Author

ಪೆರ್ಲ ಗೋಪಾಲಕೃಷ್ಣ ಪೈ

ಮೂಲತಃ ಕೇರಳದ ಕಾಸರಗೋಡು ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಮಧ್ಯೆ ಇರುವ ಪೆರ್ಲ ಮೂಲದ ಗೋಪಾಲಕೃಷ್ಣ ಪೈ ಅವರು ಕತೆ,ನಾಟಕ ,ಪ್ರಬಂದ, ಲೇಖನ ಕಾದಂಬರಿಗಳನ್ನು ಬರೆಯುವುದರಲ್ಲಿ ಪ್ರವೀಣರು. ನಾಟಕ ವಿಮರ್ಶೆ ಮೊದಲಾದ ಹಲವು ಪ್ರಕಾರಗಳಲ್ಲಿ ಕೈಯ್ಯಾಡಿಸಿ ಉತ್ತಮ ಸಾಹಿತ್ಯ ಕೃಷಿಯನ್ನು ಬೆಳೆಸುತ್ತಿರುವ ಗೋಪಾಲಕೃಷ್ಣ ಪೈ ಅವರ ಮತ್ತಿತರ ಕೃತಿಗಳು ಇಂತಿವೆ; ತಿರುವು, ಈ ಬೆರಳ ಗುರುತು, ಹಾರುವ ಹಕ್ಕಿಯ ಗೂಡಿನ ದಾರಿ ,ಮೊದಲಾದ ಚಿಕ್ಕ ಕಥೆಗಳು. ಆಧುನಿಕ ಚೀನೀ ಸಣ್ಣಕಥೆಗಳು, 'ಪೆರ್ಲ ಗೋಪಾಲಕೃಷ್ಣ ಪೈ'ರವರ ಸ್ವಪ್ನ ಸಾರಸ್ವತ ಕಾದಂಬರಿಗೆ 2010 ರ ಸಾಲಿನ 'ಪ್ರತಿಷ್ಠಿತ ಕೇಂದ್ರ ಸಾಹಿತ್ಯ ...

READ MORE

Awards & Recognitions

Related Books