ಪವನಪುತ್ರ ಹನುಮಂತ

Author : ವಿ.ಗಣೇಶ್‌

Pages 408

₹ 400.00




Year of Publication: 2020
Published by: ನೀವೆದಿತ ಪ್ರಕಾಶನ
Address: ಶಾಸ್ತ್ರಿ ನಗರ , ಬನಶಂಕರಿ 2ನೇ ಹಂತ ಬೆಂಗಳೂರು

Synopsys

‘ಪವನಪುತ್ರ ಹನುಮಂತ’ ವಿ. ಗಣೇಶ್ ಕಾದಂಬರಿಯಾಗಿದೆ. “ಈ ವಾನರನ ಮಾತುಗಳನ್ನು ಕೇಳಿದರೆ ನನ್ನ ಮನಸ್ಸು ತುಂಬಿಬರುತ್ತಿದೆ. ಇವನನ್ನು ಸಂಪೂರ್ಣವಾಗಿ ನಂಬಬಹುದೆಂದು ಅನಿಸುತ್ತಿದೆ. ಅವನ ಪಾಂಡಿತ್ಯ, ಭಾಷೆಯ ಮೇಲಿನ ಹಿಡಿತ ಅದ್ಭುತವಾಗಿದೆ. ಒಂದು ರೀತಿಯಲ್ಲಿ ಅವನು ವೇದಶಾಸ್ತ್ರಗಳ ಪಂಡಿತರಂತೆ ಕಾಣುತ್ತಿದ್ದಾನೆ. ಋಗ್ವದ, ಯಜುರ್ವೇದ ಸಾಮವೇದಗಳನ್ನು ಅಭ್ಯಾಸ ಮಾಡದವನಿಗೆ ಈ ರೀತಿಯಲ್ಲಿ ಮಾತನಾಡಲು ಸಾಧ್ಯವಿಲ್ಲ. ಇವನ ಬಾಯಿಂದ ಒಂದು ಅಪಶಬ್ದವೂ ಬರಲಿಲ್ಲ. ಈತನು ವ್ಯಾಕರಣ ಪಂಡಿತನಂತೆ ಕಾಣುತ್ತಿದ್ದಾನೆ. ನಿಜವಾಗಿಯೂ ಇವನೊಬ್ಬ ಆದರ್ಶ ದೂತನಾಗಿ ಕಾಣುತ್ತಿದ್ದಾನೆ. ಇವನ ಮಾತುಗಳಲ್ಲಿ ಕುಹಕ ಅಥವಾ ಮೋಸ ಕಿಂಚಿತ್ತೂ ಕಾಣುವುದಿಲ್ಲ.” ಪ್ರಥಮ ಭೇಟಿಯಲ್ಲಿಯೇ ರಾಮನು ಹನುಮಂತನನ್ನು ಹೀಗೆ ಮೆಚ್ಚಿಕೊಳ್ಳುತ್ತಾನೆ. ಅಂತೆಯೇ ವಿಭೀಷಣನನ್ನು ಸ್ವೀಕರಿಸಬೇಕೋ ಬೇಡವೋ ಎಂದು ರಾಮನು ಕೇಳಿದಾಗ ಹನುಮಂತನು ತನ್ನ ಮಾತುಗಳಮೂಲಕ ರಾಮನ ಮೇಲಿರುವ ತನ್ನ ಅನನ್ಯವಾದ ಭಕ್ತಿಯನ್ನು ವ್ಯಕ್ತಪಡಿಸುತ್ತಾನೆ. “ವಿಭೀಷಣ ಒಳ್ಳೆಯವನಾಗಲೀ ಅಥವಾ ಕೆಟ್ಟವನಾಗಲೀ, ಅವನು ನಿನಗೆ ಏನು ತಾನೇ ಮಾಡಲು ಸಾಧ್ಯ? ಕೆಟ್ಟದ್ದನ್ನಂತೂ ಮಾಡಲು ಸಾಧ್ಯವೇ ಇಲ್ಲ. ನಿನ್ನ ಬೆರಳ ತುದಿಯಿಂದ ಬೇಕಾದರೆ ನೀನು ಇಡೀ ಜಗತ್ತನ್ನೇ ನಾಶಮಾಡಬಲ್ಲೆ. ಸ್ವತಃ ರಾವಣನೇ ವಿಭೀಷಣನ ವೇಷದಿಂದ ಬಂದಿದ್ದರೂ ಕೂಡಾ ನೀನು ಅವನಿಗೆ ಅಭಯವನ್ನು ಕೊಡದೇ ಇರಲಾರೆ, ಶರಣು ಹೊಕ್ಕವರನ್ನು ಪ್ರಾಣ ಕೊಟ್ಟಾದರೂ ಕಾಪಾಡುವುದು ನಿನ್ನ ಧರ್ಮವಲ್ಲವೇ ಪ್ರಭು? ಅಂತಹುದರಲ್ಲಿ ಈ ವಿಭೀಷಣನನ್ನು ತಿರಸ್ಕರಿಸುವುದು ಸಮಂಜಸವಲ್ಲ.”

About the Author

ವಿ.ಗಣೇಶ್‌

ವಿ.ಗಣೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂ.ಎಸ್.ಸಿ, ಎಂ.ಎ., ಬಿ.ಎಡ್. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ, ಗಣಿತ ಉಪನ್ಯಾಸಕರಾಗಿ, ಇಂಗ್ಲೀಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಬಿ.ಎಡ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books