ಸ್ಕೆಚ್

Author : ರಂಜಿತಾದರ್ಶಿನಿ ಆರ್. ಎಸ್

Pages 212

₹ 180.00
Year of Publication: 2020
Published by: ಶ್ರೀ ಗೌರಿ ಪ್ರಕಾಶನ
Address: ಮನೆ: 1-3-573/56/1 ಆಫೀಸರ್‍ಸ ಕಾಲೋನಿ, ೨ನೇ ಅಡ್ಡರಸ್ತೆ ಆಶಾಪೂರ್ ರೋಡ್, ರಾಯಚೂರು - -534103
Phone: 9972767961

Synopsys

ಲೇಖಕಿ ನಂದಾದೀಪ ಅವರ ಚೊಚ್ಚಲ ಕಾದಂಬರಿ ’ಸ್ಕೆಚ್, ಕೆಂಪು ಕ್ಯಾನ್ವಾಸ್’. ಕನ್ನಡ ಉಪನ್ಯಾಸಕ ರಾಜಶ್ರೀ ರಮೇಶ್ ಕಲ್ಲೂರಕರ್.ಕೃತಿಗೆ ಮುನ್ನುಡಿ ಬರೆದು ‘ಓದುಗನ ಕುತೂಹಲ ಹೆಚ್ಚಿಸುವುದು, ಜೊತೆಗೆ ಕೊಲೆಗಾರ ಯಾರೆಂಬ ಉತ್ತರ ಹುಡುಕುವುದರಲ್ಲಿ ಓದುಗ ಮುಳುಗಿ ಹೋಗುವನು. ಆಕಸ್ಮಾತ್ತಾಗಿ ಓದುಗ ಯಾವುದಾದರೂ ಪುಟ ಓದದೇ ಮುಂದೆ ಹೋದರೆ ಏನನ್ನೋ ಕಳೆದುಕೊಂಡ ಅನುಭವವಾಗುವುದಂತೂ ಖಂಡಿತ. ಬಿಟ್ಟುಹೋದ ಪುಟ ಓದಿಯೇ ಮರುಳುವ ರೋಮಾಂಚನ. ಎಲ್ಲರ ಮೇಲೂ ಅನುಮಾನ ಕೆರಳಿಸಿ ಓದುಗ 'ಸೋತೆ' ಅನ್ನುವ ಭಾವದಲ್ಲಿದ್ದಾಗ ಕಲ್ಪನಾತೀತ ವ್ಯಕ್ತಿಯೇ ಕೊಲೆಗಾರ ಎನ್ನುವುದು ನಿಜಕ್ಕೂ ಅದ್ಭುತ’ ಎಂದು ಪ್ರಶಂಸಿದ್ದಾರೆ .

About the Author

ರಂಜಿತಾದರ್ಶಿನಿ ಆರ್. ಎಸ್
(04 June 1991)

ಲೇಖಕಿ ರಂಜಿತಾದರ್ಶಿನಿ ಆರ್. ಎಸ್. 1991 ಜೂನ್ 04ರಲ್ಲಿ ಮಂಡ್ಯ ತಾಲೂಕಿನಲ್ಲಿ ಜನಿಸಿದರು. ಅವರು ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಸದ್ಯ ಮಂಡ್ಯದ ಮಹಿಳಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 'ನಂದಾದೀಪ' ಎಂಬ ಕಾವ್ಯನಾಮದಿಂದ ಗುರುತಿಸಿಕೊಂಡಿರುವ ಇವರ ಹಲವಾರು ಬರಹಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ. ಕನ್ನಡ ಪುಸ್ತಕ ಪ್ರಾಧಿಕಾರವು ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡಲ್ಪಡುವ ಧನ ಸಹಾಯಕ್ಕೆ ಅವರ ‘ಸ್ಕೆಚ್’ ಕಾದಂಬರಿ ಆಯ್ಕೆಯಾಗಿದೆ. ...

READ MORE

Related Books