ಕನಸಿನ ಮನೆ

Author : ವಿ.ಎಂ. ಇನಾಂದಾರ್

Pages 136

₹ 2.00
Year of Publication: 1954
Published by: ಉಷಾ ಸಾಹಿತ್ಯ ಮಾಲೆ
Address: ಮೈಸೂರು

Synopsys

‘ಕನಸಿನ ಮನೆ’ ಲೇಖಕ ವಿ.ಎಂ. ಇನಾಂದಾರ್ ಅವರ ಕಾದಂಬರಿ. ಈ ಕೃತಿಯಲ್ಲಿ ಹೊಸ ಪ್ರಯತ್ನವನ್ನು ಕಾಣಬಹುದಾಗಿದೆ. ಇಲ್ಲಿ ಹಿನ್ನೆಲೆಯ ವೈಶಾಲ್ಯವಿಲ್ಲ. ಅದನ್ನು ಕಲ್ಪಿಸುವುದು ಕಾದಂಬರಿಕಾರರ ಉದ್ದೇಶವೂ ಅಲ್ಲ. ಇಲ್ಲಿಯ ಪಾತ್ರಗಳು ಸರಳಜೀವಿಗಳ ಒಂದು ರೀತಿಯಲ್ಲಿ ಇವರೆಲ್ಲ ಸುಶಿಕ್ಷಿತರೆನ್ನಬಹುದು. ಇದು ಸಾಮಾಜಿಕ ಕಾದಂಬರಿ. ಇಲ್ಲಿಯ ವ್ಯಕ್ತಿಗಳು ಮಾನವಸಹಜವಾದ ನಗ್ನ ಗಾಂಭೀರ್ಯದಿಂದ ಜೀವನವನ್ನೆದುರಿಸುತ್ತಾರೆ ಎನ್ನುವುದಕ್ಕಿಂತ ಈಗಿನ ನಾಗರಿಕತೆಗೆ ಸಹಜವಾದ ಆಂದೋಲನಕ್ಕೆ ಸಿಕ್ಕಿ ಸಮಾಜ ಜೀವನವನ್ನೆದುರಿಸಿ  ನಿಲ್ಲುತ್ತಾರೆ ಎನ್ನುವಂತಿವೆ. 

About the Author

ವಿ.ಎಂ. ಇನಾಂದಾರ್
(01 October 1913 - 26 January 1986)

ಬೆಳಗಾವಿ ತಾಲೂಕಿನ ಹುದಲಿಯವರಾದ ವಿ.ಎಂ. ಇನಾಂದಾರ್  ಅವರ ಪೂರ್ಣ ಹೆಸರು ವೆಂಕಟೇಶ್ ಮಧ್ವರಾವ ಇನಾಂದಾರ್. ಎಂ.ಎ. ಪದವಿ ಪಡೆದ ನಂತರ ಕೆಲಕಾಲ ನ್ಯಾಯಾಲಯದಲ್ಲಿ ಕೆಲಸ ಮಾಡಿದ ಅವರು 1940ರಲ್ಲಿ ಅಧ್ಯಾಪಕ ವೃತ್ತಿಗೆ ಬಂದರು. ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ನಿವೃತ್ತರಾದ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಕವಿತೆ, ನಾಟಕ, ಕಥೆ, ಪ್ರವಾಸಿ ಲೇಖನ, ವಿಮರ್ಶೆ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಮೂರಾಬಟ್ಟೆ, ಚಿತ್ರಲೇಖಾ, ಕನಸಿನ ಮನೆ ಮನೆ, ಮಂಜು ಮುಸುಕಿದ ದಾರಿ, ಈ ಪರಿಯ ಸೊಬಗು, ಸ್ವರ್ಗದ ಬಾಗಿಲು, ಎರಡು ಧ್ರುವ, ಮೋಹಿನಿ, ನವಿಲು ನೌಕೆ, ಯಾತ್ರಿಕರು, ಬಿಡುಗಡೆ (ಕಾದಂಬರಿ), ಕಾಳಿದಾಸನ ಕಥಾ ನಾಟಕಗಳು, 'ಪಾಶ್ಚಾತ್ಯ ...

READ MORE

Related Books