ಕಾದಂಬರಿಕಾರ ಅ.ನ.ಕೃಷ್ಣರಾಯರ ಸಾಮಾಜಿಕ ಕಾದಂಬರಿ-ನಗ್ನ ಸತ್ಯ. ವ್ಯಕ್ತಿ, ಸಮಾಜ, ಧರ್ಮ-ರಾಷ್ಟ್ರದ ಹೆಸರಿನಲ್ಲಿ ಅಬಲೆಯರನ್ನು ಹೇಗೆ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ ಎಂಬ ಬಗ್ಗೆ ಲೇಖಕ ಅ.ನ.ಕೃಷ್ಣರಾಯರು ಜೀವನಯಾತ್ರೆ, ಧರ್ಮಸಂಕಟ ಹಾಗೂ ಪಾಪ-ಪುಣ್ಯ ಕಾದಂಬರಿಯಲ್ಲಿ ಚಿತ್ರಿಸಿರುವಂತೆ ನಗ್ನ ಸತ್ಯ ಕಾದಂಬರಿಯಲ್ಲೂ ಇದೇ ಕಥಾ ವಸ್ತುವನ್ನು ಎತ್ತಿಕೊಂಡಿದ್ದು, ವೇಶ್ಯೆಯರನ್ನು ಬಳಸಿಕೊಳ್ಳುವ ವಿವಿಧ ಪರಿಗಳನ್ನು ಇಲ್ಲಿ ತೆರೆದಿಡುತ್ತಾ ಹೋಗುತ್ತಾರೆ.
ಹೆಣ್ಣಿಗೆ ಮಾತೃ ಸ್ಥಾನ ನೀಡಿದ ಸಮಾಜದಲ್ಲಿ ವೇಶ್ಯೆಯರು ಇರುವ ಪ್ರಮೇಯವಿಲ್ಲ. ಆದರೆ, ಅವಳು ಕ್ರಮೇಣ ಹೇಗೆ ತನ್ನ ಮರ್ಯಾದೆಯ ಬದುಕಿನಿಂದ ಕೆಳಗಿಳಿದಳು. ಗುರುಮನೆ-ಅರಮನೆಯಲ್ಲಿ ವೇಶ್ಯೆಯರು ಇರದಿದ್ದರೆ ಮಂಗಳ ಕಾರ್ಯಗಳು ನೆರವೇರುತ್ತಿರಲಿಲ್ಲ. ಆದರೂ, ಅವಳ ಗೌರವ ತಲೆಕೆಳಗಾಯಿತೇಕೆ? ವೇಶ್ಯೆ ಕೇವಲ ಶೀಲಕ್ಕೆ ಸಂಂಧಿಸಿದ ಸಮಸ್ಯೆಯಲ್ಲ; ಬದುಕಿನ ಬಹುಭಾಗದಲ್ಲಿ ವಹಿಸಬೇಕಾದ ಅನಿವಾರ್ಯತೆಯ ಭಾಗವಾಗಿಯೂ ಆಕೆ ಇದ್ದಾಳೆ. ಈ ಕಾದಂಬರಿಯಲ್ಲಿ ವೇಶ್ಯಾ ಸಮಸ್ಯೆಯನ್ನು ಕೌಟುಂಬಿಕ-ಸಾಮಾಜಿಕ -ರಾಷ್ಟ್ರೀಯ ಸಮಸ್ಯೆಯಾಗಿ ನೋಡಲಾಗುತ್ತಿದೆ. ವೇಶ್ಯಾವೃತ್ತಿ ತೊಲಗಬೇಕೆಂದರೆ ಮೊದಲು ಬಡತನ ನಿವಾರಿಸಬೇಕು ಎಂಬ ಚಿಂತನೆಯೂ ಇಲ್ಲಿದೆ. ನಗ್ನ ಸತ್ಯ ಎಂಬುದು ವೇಶ್ಯೆಯ ಕಥೆಯಲ್ಲ; ಅದು ವೇಶ್ಯಾ ಸಮಸ್ಯೆಯ ಕಥೆಯಾಗಿದೆ ಎಂದು ಲೇಖಕರು ಹೇಳಿದ್ದಾರೆ.
‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...
READ MORE