ಬೆಸುಗೆ

Author : ಅಶ್ವಿನಿ (ಎಂ. ವಿ. ಕನಕಮ್ಮ)

Pages 242

₹ 120.00
Year of Publication: 2008
Published by: ಚಾರುಮತಿ ಪ್ರಕಾಶನ
Address: ಬೆಂಗಳೂರು

Synopsys

ಕಾದಂಬರಿಗಾರ್ತಿ ಅಶ್ವಿನಿ ಅವರ ವಿಭಿನ್ನ ಸಾಮಾಜಿಕ ಕಾದಂಬರಿ ‘ಬೆಸುಗೆ’. ಇದು "ಸುಧಾ" ದಲ್ಲಿ ಧಾರಾವಾಹಿಯಾಗಿ ಬಂದು ಓದುಗ ವೃಂದಕ್ಕೆ ಲೇಖಕಿ ಅಶ್ವಿನಿಯವರನ್ನು ಬೆಸುಗೆ ಹಾಕಿದ ಕಾದಂಬರಿ. ಚಲನಚಿತ್ರವಾಗಿಯೂ ಹೆಚ್ಚು ಜನಮನ್ನಣೆ ಗಳಿಸಿದೆ. ಲೇಖಕಿಯವರ ಮಾತಲ್ಲೇ ಹೇಳುವುದಾದರೆ ಈ ಕಾದಂಬರಿಯ ಕಥಾವಸ್ತುವಿಗಿಂತ ಅದರಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು, ಜೀವನ ಮೌಲ್ಯಗಳು, ನಿರೂಪಿಸಿರುವ ತಂತ್ರ, ಬಳಸಿರುವ ಭಾಷಾ ಸೊಬಗು ಪ್ರಸಿದ್ಧಿಗೆ ಕಾರಣವೆನಿಸುತ್ತದೆ.

ಅನಂತರಾಯರ ಉತ್ತಮ ವ್ಯಕ್ತಿತ್ವ, ಅನಾಥರನ್ನು, ಬಡವರನ್ನು ಪ್ರೀತಿಯಿಂದ ಕಂಡು ಅವರ ಏಳಿಗೆಗಾಗಿ ನೆರವಿಗಾಗಿ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಈ ಒಳ್ಳೆತನದ ಹಿಂದೆ ಪ್ರಬಲವಾದ ಕಾರಣವಿದೆ.ಅವರ ಹೆಂಡತಿಯೂ ಅವರಂತೆ ಕರುಣಾಮಯಿಯಾದರೂ ಪ್ರತೀಷ್ಠೆ, ಮನೆತನ ಎಂಬ ದೊಡ್ಡಸ್ತಿಕೆ ಕೆಲವೊಮ್ಮೆ ಬೇಸರ ತರಿಸುತ್ತದೆ. ಇನ್ನೂ ಮಗ ವೇಣುಮಾಧವ ಉನ್ನತ ವ್ಯಾಸಾಂಗ ಮಾಡಿ, ವಿದೇಶಕ್ಕೆ ಹೋಗಿಬಂದರೂ ವಿಲಾಸಿ ಜೀವನ ನಡೆಸುವಷ್ಟು ಐಶ್ವರ್ಯ, ಸೌಲಭ್ಯಗಳಿದ್ದರೂ ದಾರಿ ತಪ್ಪದೆ, ಭಾರತೀಯ ಮೌಲ್ಯಗಳನ್ನೂ, ಪರಂಪರೆಯನ್ನೂ ಗೌರವಿಸುವ ಅವನ ಸರಳತನ ಮೆಚ್ಚುವಂತಹದ್ದು. ಅನಾಥ ಹುಡುಗಿಯಾಗಿ, ಅನಂತರಾಯರ ಆಶ್ರಯ ಪಡೆದು ಅವರ ಅತೀ ಸಲುಗೆಯನ್ನು ದುರುಪಯೋಗ ಮಾಡಿಕ್ಕೊಳ್ಳದೇ ತನ್ನ ಗುರಿಸಾಧನೆಗಾಗಿ ಸುಮ ಶ್ರಮಿಸುತ್ತಾಳೆ. ಅವಳ ಸರಳತೆಗೆ ವೇಣುಮಾಧವ ಮೆಚ್ಚುತ್ತಾನೆ, ಆದರೆ ಅದಕ್ಕೆ ತಾಯಿಯ ಪ್ರಬಲ ವಿರೋಧವಿರುತ್ತದೆ, ಸುಮ ಮತ್ತು ಮಾಧವನ ಬಾಲ್ಯದಲ್ಲಿ ಒಂದು ರಹಸ್ಯ ಘಟನೆ ನಡೆದಿರುತ್ತದೆ.ಅದು ಇಬ್ಬರ ಮಿಲನಕ್ಕೆ ಕಾರಣವಾಗುತ್ತದೆ ಅದು ಕಾದಂಬರಿಯ ಪ್ರಮುಖ ತಿರುವು, ಇಷ್ಟು ಕಥಾವಸ್ತು… ಮೊದಲ ಮುದ್ರಣ 1978, 3ನೇ ಮುದ್ರಣ 2008

About the Author

ಅಶ್ವಿನಿ (ಎಂ. ವಿ. ಕನಕಮ್ಮ)
(01 November 1933)

ಕಾದಂಬರಿಗಾರ್ತಿ ಅಶ್ವಿನಿ ಹುಟ್ಟಿದ್ದು ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮಂಗಲಂ ಎಂಬ ಗ್ರಾಮದಲ್ಲಿ. ತಂದೆ ವೆಂಕಟ ರಾಘವಾಚಾರ್ಯರು, ತಾಯಿ ಲಕ್ಷ್ಮಮ್ಮ. ರಾಮಾಯಣ, ಮಹಾಭಾರತ ಕಥೆಗಳನ್ನು ಮಿಡ್ಲೆ ಸ್ಕೂಲಿನಲ್ಲಿದ್ದಾಗಲೇ ಓದಿ ಮುಗಿಸಿದ್ದರು. ಇವರ ಓದಿನ ಆಸಕ್ತಿಯನ್ನು ಗಮನಿಸಿದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಯ್ಯನವರು ಹೆಚ್ಚಿನ ಪ್ರೋತ್ಸಾಹ ನೀಡಿದರು.  ಅಕೌಂಟೆಂಟ್‌ರವರ ಕಚೇರಿಯಲ್ಲಿದ್ದಾಗಲೇ ಕಿರು ಪ್ರಹಸನಗಳನ್ನು ಆಕಾಶವಾಣಿಗಾಗಿ ಬರೆದು ಕೊಡತೊಡಗಿದ್ದರು. ಹೀಗೆ ಪ್ರಾರಂಭವಾದ ಇವರ ಸಾಹಿತ್ಯದ ಬರವಣಿಗೆ ಸಾಗುತ್ತಾ ಬಂದು ‘ನಿಲುಕದ ನಕ್ಷತ್ರ’ ಎಂಬ ಕಾದಂಬರಿ ರಚಿಸಿದರು. ನಂತರ ವೆಂಕಟೂವಿನ ಬುಗುರಿ, ತುಪ್ಪದ ದೀಪ,ನಾನೇಕೆ ಬೇಡವಾದೆ ಮುಂತಾದ ಇಪ್ಪತ್ತು ಕಥೆಗಳು ಸುಧಾ, ಮಯೂರ, ಪ್ರಜಾಮತ, ಕರ್ಮವೀರ ...

READ MORE

Related Books