ರಂಗನಾಯಕಿ

Author : ನಾ. ಕಸ್ತೂರಿ

Pages 200

₹ 60.00




Year of Publication: 1999
Published by: ಮನೋಹರ ಗ್ರಂಥ ಮಾಲಾ
Address: ಧಾರವಾಡ

Synopsys

ನಾ. ಕಸ್ತೂರಿ ಅವರ ಕಾದಂಬರಿ ‘ರಂಗನಾಯಕಿ’. "ಕಲ್ಪಕತೆಗಿಂತ ಹೆಚ್ಚಾಗಿ ಕಸ್ತೂರಿಯವರ ಹಾಸ್ಯಪ್ರಜ್ಞೆ ಇಲ್ಲಿಯ ಜಗತ್ತನ್ನು ರೂಪಿಸಿದೆ. ಅವರ ಬರವಣಿಗೆಯ ಜೀವವಾಗಿರುವ ಹಾಸ್ಯವೇ ಇಲ್ಲಿಯ ಪ್ರಧಾನ ರಸ." ಈ ಕಾದಂಬರಿಯ ಬಗ್ಗೆ ಸಂಪಾದಕರು ಬರೆದ ಮಾತುಗಳಿವು. 1960ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿ 1999ರಲ್ಲಿ 2ನೇ ಮುದ್ರಣ ಕಂಡಿದೆ..

About the Author

ನಾ. ಕಸ್ತೂರಿ
(25 December 1897 - 14 August 1987)

ಕೇರಳದ ತ್ರಿಪುನಿತ್ತೂರ್ ಗ್ರಾಮದಲ್ಲಿ ಜನಿಸಿದ ನಾ. ಕಸ್ತೂರಿ ಅವರು ಕೇರಳದ ಎರ್ನಾಕುಲಂ ಮಹಾರಾಜಾ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ತಂದೆ ನಾರಾಯಣ. ಇತಿಹಾಸದಲ್ಲಿ ಸ್ನಾತಕೋತ್ತರ (ಎಂ.ಎ.) ಪಡೆದ ನಂತರ ಬಿ.ಎಲ್. ಪದವಿ ಪಡೆದರು. ವಕೀಲಿ ವೃತ್ತಿಗೆ ಸೇರುವ ಬದಲು ಶಿಕ್ಷಕ ವೃತ್ತಿಯತ್ತ ಹೊರಳಿದರು. ಮೈಸೂರಿಗೆ ಬಂದ ಅವರು ಅಲ್ಲಿನ ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು. ನಾಟಕ, ಪ್ರಹಸನ, ಕಥೆ, ಕಾದಂಬರಿ ಮುಂತಾದ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಗಗ್ಗಯ್ಯನ ಗಡಿಬಿಡಿ, ಕಾಡಾನೆ, ವರಪರೀಕ್ಷೆ, ರಾಮಕೃಷ್ಣಯ್ಯನ ದರ್ಬಾರು, ಹೋಳು-ಬಾಳು, ಬ್ಯಾಂಕಿನ ದಿವಾಳಿ ಮುಂತಾದುವು ಅವರ ನಾಟಕಗಳು. ಗಾಳಿಗೋಪುರ, ಶಂಖವಾದ್ಯ, ರಂಗನಾಯಕಿ, ಅಲ್ಲೋಲ, ಕಲ್ಲೋಲ, ಉಪಾಯ ವೇದಾಂತ ಮುಂತಾದ ಹಾಸ್ಯ ಸಂಕಲನಗಳನ್ನು ರಚಿಸಿರುವುದಲ್ಲಿ ಹಾಸ್ಯ ...

READ MORE

Related Books