ತ್ರಿವೇಣಿ ಅವರು ಬರೆದ ಸಾಮಾಜಿಕ ಕಾದಂಬರಿ-ಅಪಸ್ವರ-ಅಪಜಯ. ವಿಶ್ವ ಕನ್ನಡ ಸಮ್ಮೇಳನದ ಭಾಗವಾಗಿ ಕರ್ನಾಟಕ ಸರ್ಕಾರವು ಈ ಕೃತಿಯನ್ನು ಪ್ರಕಟಿಸಿದೆ. ಮೊದಲು ಅಪಸ್ವರ ಕಾದಂಬರಿ ಪ್ರಕಟವಾಗಿದ್ದು, ಇದರ ಮುಕ್ತಾಯ ಅಪೂರ್ಣವಾಗಿದೆ ಎಂದು ಬಹುತೇಕ ಓದುಗರು ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಅದರ ಮುಂದುವರಿದ ಭಾಗವಾಗಿ ‘ಅಪಜಯ’ ಕಾದಂಬರಿ ಬರೆದೆ. ಈ ಎರಡೂ ಕೃತಿಗಳನ್ನು ಸ್ವತಂತ್ರ ಎಂದೂ ಪರಿಗಣಿಸಬಹುದು ಎಂದು ಸ್ವತಃ ಲೇಖಕರೇ ಅಂದು ಹೇಳಿದ್ದರು.ಆದ್ದರಿಂದ, ಈ ಎರಡು ಕಾದಂಬರಿಗಳನ್ನು ಒಂದೇ ಕೃತಿಯಾಗಿ ಸರ್ಕಾರ ಪ್ರಕಟಿಸಿದೆ.
ಹೆಣ್ಣಿನ ಕನಸುಗಳಿಗೆ ಜೀವನದಲ್ಲಿ ಕಿಮ್ಮತ್ತು ಇಲ್ಲವೇ ಎಂದು ಪ್ರಶ್ನಿಸುವ ಕಾದಂಬರಿ ಇದು. ಕಥಾನಯಕಿ ಮೀರಾ ತನ್ನ ಆಸೆಗೆ ವಿರುದ್ಧವಾಗಿ ವೈದ್ಯಕೀಯ ಶಿಕ್ಷಣವನ್ನು ಮೊಟಕುಗೊಳಿಸುವಳು. ಹಳ್ಳಿಯ ಜಮೀನುದಾರನ ಜೊತೆ ಮದುವೆಯಾಗುತ್ತದೆ. ಪತ್ನಿಯು ಹೊರಗೆ ಎಲ್ಲೂ ಹೋಗಕೂಡದು ಎಂಬ ಆತನ ಮನಸ್ಥಿತಿ ಸದಾ ದಬ್ಬಾಳಿಕೆಯ ಪ್ರತೀಕವಾಗುತ್ತದೆ. ಇಲ್ಲಿಯ ಪ್ರಧಾನ ಅಂಶವೆಂದರೆ, ಹೆಣ್ಣಿನ ಕನಸುಗಳಿಗೆ-ಆಶಯಗಳಿಗೆ ಬೆಲೆ ಇಲ್ಲವೇ ಎನ್ನುವುದನ್ನು ಮೀರಾಳ ಬದುಕಿನ ಮೂಲಕ ಲೇಖಕಿ ಸಮಾಜವನ್ನು ಪ್ರಶ್ನಿಸುತ್ತಾಳೆ.
ಈ ಕಾದಂಬರಿಯ ಮುಂದುವರೆದ ಭಾಗವೇ ‘ಅಪಜಯ’. ಇಲ್ಲಿಯ ಕಥಾನಾಯಕಿ ಗಟ್ಟಿಗಿತ್ತಿ. ಪತಿಯನ್ನು ಮನವೊಲಿಸಿ ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುತ್ತಾಳೆ. ಈ ಪ್ರಕ್ರಿಯೆಯಲ್ಲಿ ಹೆಣ್ಣು ಬದಲಾಗುವ ಅನಿವಾರ್ಯತೆಯ ಸೂಕ್ಷ್ಮ ಸಂದೇಶ ಈ ಕಾದಂಬರಿ ನೀಡುತ್ತದೆ.
ಮನಸ್ಸಿನ ಕ್ರಿಯೆಗಳಿಗೆ ಕಥಾರೂಪ ನೀಡಿ ಕಾದಂಬರಿಗಳನ್ನು ರಚಿಸಿದ್ದು ತ್ರಿವೇಣಿ ಅವರ ಹೆಗ್ಗಳಿಕೆ. ಇವರು 1928 ರ ಸೆಪ್ಟಂಬರ್ 1 ರಂದು ಮೈಸೂರಿನಲ್ಲಿ ಜನಿಸಿದರು. ಮನಸ್ಸಿನ ಭಾವನೆಗಳನ್ನೂ ಚಿತ್ರಿಸಿ ಬರೆದ ಇವರು ರಚಿಸಿದ ಪ್ರಮುಖ ಕಾದಂಬರಿಗಳೆಂದರೆ- ಹೂವು ಹಣ್ಣು, ಅಪಸ್ವರ, ಅಪಜಯ, ಸೋತುಗೆದ್ದವಳು, ಬೆಕ್ಕಿನಕಣ್ಣು, ಶರಪಂಜರ, ದೂರದ ಬೆಟ್ಟ, ಅಪಜಯ, ಕಂಕಣ, ಮುಚ್ಚಿದ ಬಾಗಿಲು, ಬಾನು ಬೆಳಗಿತು, ಅವಳ ಮನೆ, ವಸಂತಗಾನದಿಂದ ಹಿಡಿದು ಬೆಳ್ಳಿಮೋಡದವರೆಗೆ ಸುಮಾರು 20 ಕಾದಂಬರಿಗಳನ್ನು ಹಾಗೂ 3 ಕತಾ ಸಂಕಲನಗಳನ್ನು ರಚಿಸಿದ್ದಾರೆ. ಇವರ ಬೆಳ್ಳಿಮೋಡ, ಶರಪಂಜರ, ಹಣ್ಣಲೆ ಚಿಗುರಿದಾಗ ಕಾದಂಬರಿಗಳು ಚಲನಚಿತ್ರವಾಗಿಯೂ ಅಪಾರ ಜನಮನ್ನಣೆ ಗಳಿಸಿವೆ. ಇವರಿಗೆ ಕರ್ನಾಟಕ ರಾಜ್ಯಪ್ರಶಸ್ತಿ – 'ಅವಳ ಮನೆ' ...
READ MORE