ಮಿಥಿಲೆಯ ಮೊಗ್ಗು-ಸೃಜನ್ ಗಣೇಶ ಹೆಗಡೆ ಅವರ ಕಾದಂಬರಿ. ಭಾರತದ ಮಹಾಕಾವ್ಯಗಳಲ್ಲೊಂದಾದ "ಶ್ರೀರಾಮಾಯಣ"ವು ಒಂದು ನೆಲೆಯಲ್ಲಿ ಜನಪದದ ಪಾಡು ಹಾಡಾಗಿ "ಕಾವ್ಯ" ಭಾಷೆಯಲ್ಲಿ ಪರಿಪಾಕ ಹೊಂದಿ ಮೂರ್ತಿವೆತ್ತಿ ಭವ್ಯ ಕೃತಿಯಾಗಿದೆ. ಇನ್ನೊಂದು ನೆಲೆಯಲ್ಲಿ ಭಾರತೀಯ ಚರಿತ್ರೆಯ ನೆಲೆಯ ನೋಟವಾಗಿಯೂ ಇದ್ದು, ಶ್ರೀರಾಮ ಪಾತ್ರವಾಗಿ, ನಾಯಕನಾಗಿ, ದೈವವಾಗಿ ಪರಿಭಾವಿಸಿಕೊಂಡೆ ಬಂದ ಆಯಾಮಗಳಿದೆ. ಸಾಕಷ್ಟು ಕೃತಿಗಳು "ಶ್ರೀರಾಮಾಯಣ"ದ ಹಾಸು ಚಪ್ಪರದಡಿಗೆ ಮತ್ತೆ ಮತ್ತೆ ಕಂಡುಬಂದದ್ದಿದೆ. ಪ್ರಸ್ತುತ ಈ ಕೃತಿಯು "ಶ್ರೀರಾಮಾಯಣದ ಭಾವ ಶೋಧ". ಆದರೆ ಶ್ರೀರಾಮನ ಪಾತ್ರ ನೆಲೆಗಿಂತಲೂ "ಸೀತೆ"ಯ ಪಾತ್ರ ಚಿತ್ರದ ಭಾವದ ಆಳ ಪರಿಪಾಕ ಇಲ್ಲಿ ಕಂಡುಬರುತ್ತದೆ.
"ಮಿಥಿಲೆಯ ಮೊಗ್ಗು" ಎಂಬಲ್ಲಿ ಸೀತೆಯ "ತವರೂರು" ಮತ್ತು ಆಕೆಯ "ಭಾವನೆ"ಯ ಚಿತ್ರಣ ಎರಡೂ ಗೋಚರವಾಗುತ್ತದೆ. ಇಡಿಯಾಗಿ ಕಾದಂಬರಿಯು ಕೇವಲ ಸೀತೆಯ ಭಾವ ಮಾತ್ರವಲ್ಲದೆ " ಮೊಗ್ಗು", "ಹೂವು" ಎಂದೆಲ್ಲಾ ಸಾಗಿಕೊಂಡು ಸಸ್ಯ ಮತ್ತು ಹೆಣ್ಣು ಜೀವಿಯ ನಡುವಿನ ಸಂಬಂಧದ ಮಹಾ ಚಿತ್ರಣವನ್ನು ಲೇಖಕರು ಮನೋಜ್ಞವಾಗಿ ಕಟ್ಟಿಕೊಟ್ಟಿರುತ್ತಾರೆ. ಶ್ರೀರಾಮಾಯಣ ಕಥೆಯನ್ನೆ ಸೃಜನಶೀಲತೆಯೊಳಗೆ ಹೊಸದಾಗಿ ಕಟ್ಟಲ್ಪಟ್ಟಿದೆ. ಕುತೂಹಲದೊಳಗೆ ತೆರೆದುಕೊಂಡು ಸಾಗುವ ಈ ಕಾದಂಬರಿಯು ಒಂದು ಮಹಾಕಾವ್ಯದ ಒಳದ ತಾತ್ವಿಕ, ಮನಃಶಾಸ್ತ್ರೀಯ, ವೈಚಾರಿಕ ಸ್ಪರ್ಶನದ ಕೃತಿ.
ಸೃಜನ್ ಗಣೇಶ ಹೆಗಡೆ ಅವರ ಕಾವ್ಯನಾಮ -ಸೃಜನಾಲೋಚನ. ತಂದೆ- ಶ್ರೀಧರ್ ಹೆಗಡೆ ತಾಯಿ- ಜಯಲಕ್ಷ್ಮಿ ಹೆಗಡೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಸಮೀಪದ ಗುಬ್ಬಿಗ ಗ್ರಾಮದಲ್ಲಿ 26-09-1996 ರಂದು ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಕೃತಿಗಳು- ಗೊಂಬೆಯ ಸಂಕಟ, ರಾಧಾಸ್ನೇಹಿ, ಅನಂತ ಸೋಪಾನ(ಕವನ ಸಂಕಲನ) ಆಪ್ತ ಬಂಧನ, ಗೋಜಗಾಮೃತ(ಯಕ್ಷಗಾನ ಪ್ರಸಂಗಗಳು) ಆಸಕ್ತಿ ಕ್ಷೇತ್ರಗಳು- ಯಕ್ಷಗಾನ ಭಾಗವತಿಕೆ, ತತ್ವಶಾಸ್ತ್ರ, ಅಧ್ಯಾತ್ಮ ವೈಚಾರಿಕತೆ, ವಿಮರ್ಶೆ ಕ್ಷೇತ್ರದಲ್ಲಿ ಆಸಕ್ತಿ. ...
READ MORE‘ಮಿಥಿಲೆಯ ಮೊಗ್ಗು’ ಕೃತಿಯ ಕುರಿತು ಲೇಖಕ ಸೃಜನ್ ಗಣೇಶ ಹೆಗಡೆ ಅವರ ಮಾತು