ಮೌನ ಧ್ವನಿಸಿತು

Author : ದಿವ್ಯಾ ಶ್ರೀಧರ ರಾವ್

₹ 200.00
Year of Publication: 2020
Published by: ಆರ್ಯ ಪ್ರಕಾಶನ
Address: ಉಡುಪಿ

Synopsys

‘ಮೌನ ಧ್ವನಿಸಿತು’ ಕೃತಿಯು ದಿವ್ಯಾ ಶ್ರೀಧರ ರಾವ್ ಅವರ ಕಾದಂಬರಿಯಾಗಿದೆ. ವೇಶ್ಯಾವಾಟಿಕೆಯ ಕಥೆಯೊಂದನ್ನು ಆರಿಸಿಕೊಂಡು, ಕಾಲ್ಪನಿಕವಾಗಿ ಕಥೆ ಹೆಣೆಯುತ್ತಾ ಹೋದಂತೆ ಹೆಣ್ಣೊಬಳ ಬದುಕಿನ ಬವಣೆಗಳನ್ನು ಮತ್ತಷ್ಟು ಸದೃಶ್ಯಗೊಳಿಸುವ ಮನಸ್ಸು ಈ ಕೃತಿಗಿದೆ. ವೇಶ್ಯೆಗೆ ಹುಟ್ಟಿದ ಮಗುವಿಗೂ ಬದುಕಿರುತ್ತದೆ. ಆ ಬದುಕಿಗೊಂದು ಉಸಿರಾಟದ ಬಯಕೆಯಿರುತ್ತದೆ. ಆ ಬಯಕೆಗಳ ಸುಳಿಯಲ್ಲಿ ಬೀಳುವ ಮಗುವೊಂದು ತಾನೂ ತನ್ನಮ್ಮನ ದಾರಿ ಹಿಡಿದಾಳಾ ಎಂಬುದು ಈ ಕಥೆಯ ತಿರುಳಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಅಂಬಾತನಯ ಮುದ್ರಾಡಿ ಅವರು, ಇಲ್ಲಿರುವ ಒಂದೊಂದು ವಾಕ್ಯವೂ ಜೀವನಾನುಭವದ ಮೂಲೆಯಿಂದ ಪುಟಗೊಂಡು ಹೊರಬಂದವುಗಳಾಗಿದ್ದು, ಚಿಂತನೆಗೆ, ವಿಶ್ಲೆಷಣೆಗೆ ತಕ್ಕುದಾದವುಗಳು ಎಂದೇ ಹೇಳಬಹುದು. ಕಾದಂಬರಿಯ ಹೆಸರು, ‘ಮೌನ ಧ್ವನಿಸಿತು’ ನನ್ನನ್ನು ಸಹಜವಾಗಿ ಆಕರ್ಷಿಸಿತು. ಮೌನಾಂತರಂಗದಲ್ಲಿ ಏನೆಲ್ಲ ಹುದುಗಿದೆಯೋ ಯಾರಿಗೆ ಗೊತ್ತು. ಮೌನ ಕೆಲವೊಮ್ಮೆ ಮಾತಿಗೂ ಮೀರಿದ್ದನ್ನು ಹೇಳುತ್ತದೆ. ಅದು ಧ್ಯಾನಲೀಲ ಮನಸ್ಸಿನ ದರ್ಶನಾಕಾಂಕ್ಷೆಯಾಗಿರಬಹುದು ಅಥವಾ ಬದುಕಿನ ನಿರಾಶೆಯ ದ್ಯೋತಕವಾಗಿರಬಹುದು. ಇಲ್ಲ, ಗಾಢವಾಗಿ ಆವರಿಸಿದ ನೋವನ್ನು ಹೇಳಿಕೊಳ್ಳಲು ಆಗದ ಸ್ಥಿತಿಯಾಗಿರಬಹುದು.‘ಮೌನ ಧ್ವನಿಸಿತು’ ಕಾದಂಬರಿ ದುರಂತದಲ್ಲಿ ಕೊನೆಗೊಳ್ಳುತ್ತದೆ. ಓದುಗರಿಗೆ ಇಲ್ಲಿ ಪಾತ್ರದಾರಿಯಾಗಿರುವ ಸಂತು ಸಾಯಬಾರದಿತ್ತು ಎನಿಸುತ್ತದೆ. ಆದರೆ ಲೇಖಕಿ ಇದನ್ನು ದುರಂತವಾಗಿಯೇ ಚಿತ್ರಿಸಿ ವಿಧವೆಯಾದ ಸೌಮ್ಯಳಿಗೆ ಮರುಮದುವೆ ಮಾಡಿಸಿ ಬದುಕಗೊಡುವ ಸಾಮಾಜಿಕ ಕಳಕಳಿ ಇದ್ದದ್ದನ್ನು ಓದುಗರು ಪರಿಭಾಷಿಸದಿರಲಾರರು ಎಂದಿದ್ದಾರೆ.

About the Author

ದಿವ್ಯಾ ಶ್ರೀಧರ ರಾವ್

ಯಕ್ಷಗಾನ ಪ್ರಸಂಗಕರ್ತೆ, ಲೇಖಕಿ ದಿವ್ಯಾ ಶ್ರೀಧರ ರಾವ್‌ ಅವರು ಮೂಲತಃ ಕುಂದಾಪುರದವರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಬಿ.ಎಂ ಪದವಿ ಪೂರೈಸಿ ಪ್ರಸ್ತುತ ಸೆಲ್ಕೋ ಫೌಂಡೇಷನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊಸದಿಗಂತ, ಉದಯವಾಣಿ, ಸುಧಾ, ಕಲಾದರ್ಶನ, ನಗಾರಿಧ್ವನಿ ಮುಂತಾದ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ. ಸನ್ ರೈಸ್ ಬೆಂಗಳೂರು ಪತ್ರಿಕೆಯಲ್ಲಿ 2018ರಲ್ಲಿ ಹೆಣ್ಣಿನ ಅಂತರಾಳದ ಮಾತುಗಳ ಕುರಿತು ಸರಣಿ ಬರಹವನ್ನು ಬರೆದಿದ್ದಾರೆ. ‘ಆ ನೀಲಿ ಕಂಗಳ ಹುಡುಗಿ’ (ಕಾದಂಬರಿ) ಅವರ ಚೊಚ್ಚಲ ಕೃತಿ. ...

READ MORE

Related Books