ತಾಳಿಕೋಟೆಯ ಕದನದಲ್ಲಿ

Author : ವಿಠಲ್ ಶೆಣೈ

Pages 160

₹ 150.00




Published by: ಟೋಟಲ್ ಕನ್ನಡ
Phone: 98459 04451

Synopsys

ಮನಃಶಾಸ್ತ್ರೀಯ ಹಿನ್ನೆಲೆಯಿಂದ ರೂಪುಗೊಂಡಿರುವ ಕಥಾವಸ್ತುವನ್ನು ಈ ಕಾದಂಬರಿ ಒಳಗೊಂಡಿದೆ. ವಾಸ್ತವದಲ್ಲಿ ಮನಶ್ಯಾಸ್ತ್ರೀಯ ವಿಷಯಗಳು ಅಷ್ಟು ಸರಳವಾಗಿರುವುದಿಲ್ಲ. ಇಲ್ಲಿ ಕಾದಂಬರಿಕಾರರು ತಮ್ಮ ಕತೆಯನ್ನು ಹೇಳಲು ಎರಡು ತಂತ್ರಗಳನ್ನು ಬಳಸಿಕೊಂಡಿದ್ದಾರೆ. ಒಂದು ಇತಿಹಾಸ. ಇನ್ನೊಂದು ವಾಸ್ತವ. ಕಾದಂಬರಿಯ ಮುನ್ನುಡಿಯಲ್ಲಿ ಹೇಳುವಂತೆ, ಮಾನವನ ಚರಿತ್ರೆಗೂ ಆತನ ಮೆದುಳಿಗೂ ನೇರ ಸಂಬಂಧವಿದೆ. ಚರಿತ್ರೆಯಷ್ಟೇ ಅವನ ಮೆದುಳು, ಮನಸ್ಸು, ಸಂಕೀರ್ಣವಾದದ್ದು, ಕೌತುಕವಾದದ್ದು, ಸೂಕ್ಷವಾದದ್ದು ಕೂಡ. ಇದು ಕದಡಿದಾಗ ವರ್ತಮಾನವೂ ಕದಡತೊಡಗುತ್ತದೆ. ಇಲ್ಲಿ ಕಾದಂಬರಿಕಾರನನ್ನು ಸೆಳೆದಿರುವುದು ಹಂಪಿಯ ಇತಿಹಾಸ, ವಿಜಯನಗರದ ಕಾಲಘಟ್ಟ ಕಾದಂಬರಿಕಾರನನ್ನು ರೋಮಾಂಚನಗೊಳಿಸಿದೆ. ಕಾದಂಬರಿಕಾರರು, ತಾಳಿಕೋಟೆ ಕದನದ ಇತಿಹಾಸವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿದ್ದಾರೆ. ಸಂತೆಯಲ್ಲಿ ವಜ್ರ ವೈಡೂರ್ಯಗಳನ್ನು ಮಾರುವ ಇತಿಹಾಸ ಲೇಖಕರನ್ನೂ ರೋಮಾಂಚನಗೊಳಿಸಿದೆ. ಈ ನಿಟ್ಟಿನಲ್ಲಿ, ಇತಿಹಾಸ ಮತ್ತು ವಾಸ್ತವಗಳೆರಡನ್ನೂ ಜೊತೆಗಿಟ್ಟು ಬರೆದಿದ್ದಾರೆ.  ಇತಿಹಾಸ ಮತ್ತು ವರ್ತಮಾನಗಳ ನಡುವೆ ತಾಕಲಾಟಗಳನ್ನು ಈ ಕಾದಂಬರಿಯಲ್ಲಿ ಕಾಣಸಿಗುತ್ತದೆ.

About the Author

ವಿಠಲ್ ಶೆಣೈ

ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ವಿಠ್ಠಲ್ ಶೆಣೈ ಅವರು ಮೂಲತಃ ಮಂಗಳೂರಿನವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು, ತಾವು ಓದಿದ ಪುಸ್ತಕಗಳ ಬಗ್ಗೆ ತಮ್ಮ ಬ್ಲಾಗ್‌ಗಳಲ್ಲಿ ಬರೆಯುವ ಹವ್ಯಾಸ ಉಳ್ಳವರು.  ಕೃತಿಗಳು:  ಪಾರಿವಾಳಗಳು (ಲಲಿತ ಪ್ರಬಂಧಗಳು) ಹಾಗೂ ತಾಳಿಕೋಟೆಯ ಕದನದಲ್ಲಿ (ಕಾದಂಬರಿ) , ಹುಲಿ ವೇಷ (ಕತೆಗಳ ಸಂಕಲನ) ಹಾಗೂ ನಿಗೂಢ ನಾಣ್ಯ (ಕಾದಂಬರಿ)  ...

READ MORE

Reviews

‘ತಾಳಿಕೋಟೆಯ ಕದನದಲ್ಲಿ’ - ವಿಠಲ್ ಶೆಣೈ ಅವರ ಕಾದಂಬರಿಯ ಹೆಸರು ಇದು. ಇದರ ಹೆಸರು ಕೇಳಿದ ಕೂಡಲೇ ಇದೊಂದು ಚಾರಿತ್ರಿಕ ಕತೆ ಎನಿಸಿದರೆ ಸರಿ. ಇಲ್ಲ ಇದೊಂದು ಸಾಮಾಜಿಕ ಕಾದಂಬರಿ ಎಂದರೆ ಅದೂ ಸರಿ. ಇದು ವೈಜ್ಞಾನಿಕ ಇದ್ದರೂ ಇರಬಹುದು ಎಂದರೆ ಅದು ಮತ್ತೂ ಸರಿ. ಹೌದು ಈ ಎಲ್ಲ ಅಂಶಗಳ ಮಿಶ್ರಣ ಈ ಕಾದಂಬರಿ. ಇಲ್ಲಿ ಚರಿತ್ರೆ ವರ್ತಮಾನಕ್ಕೆ ಬರುತ್ತದೆ. ವರ್ತಮಾನದಲ್ಲಿ ಇದ್ದುಕೊಂಡು ಇತಿಹಾಸವನ್ನು ನೋಡುವ ಚಾಣಾಕ್ಷತೆ ಇಲ್ಲಿದೆ. ಜತೆಗೆ ಮನದೊಳಗಿನ ಭಾವವನ್ನು ತನಗರಿವಿಲ್ಲದೆ ಹೇಗೆ ರೂಢಿಸಿಕೊಳ್ಳುತ್ತೇವೆ, ಅದು ತನಗರಿವಿಲ್ಲದೇ ಹೇಗೆ ಬಗೆಹರಿಯುತ್ತದೆ ಎನ್ನುವುದು ರೋಚಕವಾಗಿ ಓದಿಸಿಕೊಳ್ಳುತ್ತದೆ. ಇಲ್ಲಿರುವ ಪಾತ್ರಗಳಿಗೆ ಯಾವುದೇ ಅವಸರವಿಲ್ಲ. ಸಾವಧಾನವಾಗಿ ಓದುಗನನ್ನು ಇತಿಹಾಸ ಮತ್ತು ವರ್ತಮಾನದಲ್ಲಿ ಕೈಹಿಡಿದು ನಡೆಸುತ್ತವೆ! ಕಾದಂಬರಿಯ ಇನ್ನೊಂದು ಪ್ರಮುಖ ಅಂಶವೆಂದರೆ ಬರುವ ಕೆಲವೇ ಪ್ರಮುಖ ಪಾತ್ರಗಳು ಮತ್ತು ಕೆಲವೇ ಪ್ರಮುಖ ಸ್ಥಳಗಳು. ಎಲ್ಲಿಯೂ ಗೊಂದಲವಿಲ್ಲ, ಅಂಗೈ ಗೆರೆಯಷ್ಟೇ ಸ್ಪಷ್ಟ ಪಾತ್ರ ಮತ್ತು ವಿಷಯ. ತಾಳಿಕೋಟೆ ಎಂದಾಕ್ಷಣ ಇತಿಹಾಸ ಬಲ್ಲವರಿಗೆ ನೆನಪಾಗುವುದು ವಿಜಯನಗರ ಸಾಮ್ರಾಜ್ಯ. ಈ ತಾಳಿಕೋಟೆ ಕದನದಿಂದ ವಿಜಯನಗರ ಹಾಳು ಹಂಪಿಯಾಯಿತು. ಇದೇ ಈ ಕತೆಯ ತಿರುಳು. ಕಾದಂಬರಿ ಆರಂಭವಾಗುವುದೇ ಒಂದು ಕೊಲೆಯ ಮೂಲಕ. ಕೊಲೆ ಮಾಡಿದವ ಒಬ್ಬ ಇತಿಹಾಸ ಪ್ರಾಧ್ಯಾಪಕ ಮತ್ತು ಲೇಖಕ. ಇಡೀ ಕಾದಂಬರಿ ಸಾಗುವುದೇ ಈ ಪ್ರಾಧ್ಯಾಪಕ ವೈಕುಂಠನ ನಿರೂಪಣೆಯಲ್ಲಿ. ತನ್ನ ಬಗ್ಗೆ, ತನ್ನ ಆತ್ಮೀಯ ಮಿತ್ರ, ಕುಟುಂಬ, ಊರು, ಗದ್ದೆ, ಕಾಲೇಜು ಹೀಗೆ ಎಲ್ಲವುಗಳನ್ನು ಪರಿಚಯಿಸುತ್ತ ಸಾಗುತ್ತಾರೆ. ಅಂದಹಾಗೆ ಆರಂಭದಲ್ಲಿ ಕೊಲೆ ಮಾಡುವುದು ಇದೇ ಉಪನ್ಯಾಸಕ. ಅದೂ ತನ್ನ ಆತ್ಮೀಯ ಮಿತ್ರನ್ನನೇ! ತಾನಾಯ್ತು, ತನ್ನ ಕೆಲಸವಾಯ್ತು ಎಂದಿದ್ದ ಈ ಪ್ರೊೆಸರ್ ಮಡದಿ ದೇವಿಕಾಳ ತಮ್ಮ ಗಿರೀಶ್ ಮೂರ್ತಿ ಮದುವೆಗೆ ಹೊಸಪೇಟೆಗೆ ಹೊರಡಬೇಕಾಗುತ್ತದೆ. ಇಷ್ಟವಿಲ್ಲದಿದ್ದರೂ ಹೊಸಪೇಟೆ ಬಳಿ ಇರುವ ಹಂಪಿಯನ್ನು ನೋಡುವ ಸಲುವಾಗಿ ವೈಕುಂಠ ತಯಾರಾಗುತ್ತಾನೆ. ಮದುವೆ ಮನೆಯ ಗೌಜು ಗದ್ದಲವನ್ನು ಬಿಟ್ಟು ತಾನು ಹಂಪೆಗೆ ಪಯಣ ಬೆಳೆಸುತ್ತಾನೆ. ಹಂಪೆಯ ಸೌಂದರ್ಯಕ್ಕೆ ಮಾರುಹೋಗುವ ಇತಿಹಾಸ ಉಪನ್ಯಾಸಕ ವೈಕುಂಠನಿಗೆ ಆಶ್ಚರ್ಯವೊಂದು ಕಾದಿರುತ್ತದೆ. ಉಗ್ರನರಸಿಂಹ ಮೂರ್ತಿ ಬಳಿಯ ಬಡವಿ ಲಿಂಗದ ಬಳಿ ಅಚಾನಕ್ಕಾಗಿ ವಿಜಯನಗರ ಸಾಮ್ರಾಜ್ಯದ ಇಬ್ಬರು ಸೈನಿಕರು ಪ್ರತ್ಯಕ್ಷರಾಗುತ್ತಾರೆ. ಅದು ವೈಕುಂಠ ಸರಿಸಿದ ಒಂದು ಕಲ್ಲಿನಿಂದ ಅವರಿಗೆ ಮತ್ತೆ ಮಾನವ ರೂಪ ಸಿದ್ಧಿಸುತ್ತದೆ. ಅದಕ್ಕಾಗಿ ಸೈನಿಕರು ಇವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಅಂದಿನ ಕಾಲದ ಸೈನಿಕರು ಇರುವೆ ಗಾತ್ರದವರಾಗಿರುತ್ತಾರೆ. ಮತ್ತು ಹೀಗೆ ಆಗುವುದು ಆಗಿನ ಕಾಲದ ಯುದ್ಧ ತಂತ್ರವೆಂದು ತಿಳಿಸುತ್ತಾರೆ. ಇದರಿಂದ ಪುಸ್ತಕ ಬರೆಯುವ ಕನಸು ಹೊತ್ತ ವೈಕುಂಠನಿಗೆ ಸಂತಸವಾಗುತ್ತದೆ." 

 ಉಗ್ರನರಸಿಂಹ ಮೂರ್ತಿ ಬಳಿಯ ಬಡವಿ ಲಿಂಗದ ಬಳಿ ಅಚಾನಕ್ಕಾಗಿ ವಿಜಯನಗರ ಸಾಮ್ರಾಜ್ಯದ ಇಬ್ಬರು ಸೈನಿಕರು ಪ್ರತ್ಯಕ್ಷರಾಗುತ್ತಾರೆ. ಅದು ವೈಕುಂಠ ಸರಿಸಿದ ಒಂದು ಕಲ್ಲಿನಿಂದ ಅವರಿಗೆ ಮತ್ತೆ ಮಾನವ ರೂಪ ಸಿದ್ಧಿಸುತ್ತದೆ. ಅದಕ್ಕಾಗಿ ಸೈನಿಕರು ಇವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಅಂದಿನ ಕಾಲದ ಸೈನಿಕರು ಇರುವೆ ಗಾತ್ರದವರಾಗಿರುತ್ತಾರೆ. ಮತ್ತು ಹೀಗೆ ಆಗುವುದು ಆಗಿನ ಕಾಲದ ಯುದ್ಧ ತಂತ್ರವೆಂದು ತಿಳಿಸುತ್ತಾರೆ. ಇದರಿಂದ ಪುಸ್ತಕ ಬರೆಯುವ ಕನಸು ಹೊತ್ತ ವೈಕುಂಠನಿಗೆ ಸಂತಸವಾಗುತ್ತದೆ. ತಾಳಿಕೋಟೆ ಯುದ್ಧದಲ್ಲಿ ಭಾಗವಹಿಸಿದ್ದ ಸೈನಿಕರಿಂದಲೇ ಸಮರದ ವಿವರವನ್ನು ತಿಳಿದು ಅದನ್ನೇ ಪುಸ್ತಕ ರೂಪಕ್ಕೆ ಇಳಿಸಿದರೆ ಇತಿಹಾಸದ ಬಗ್ಗೆ ಮಾಹಿತಿ ನಿಖರವಾಗಿರುತ್ತೆ ಎಂಬ ಎಣಿಕೆ ಪ್ರಾಧ್ಯಾಪಕನದ್ದು. ಹಾಗಾಗಿ ಆ ಸೈನಿಕರನ್ನ ಜತೆಗಿಟ್ಟುಕೊಂಡೇ ಹಂಪೆ ಸುತ್ತುತ್ತಾನೆ. ಆದರೆ ಇವರ ಜತೆಗಿನ ಬಾಂಧವ್ಯ ಅಷ್ಟಕ್ಕೆ ಮುಗಿಯೊಲ್ಲದು. ಅವರಿಗೆ ತಾಳಿಕೋಟೆ ಕದನದಲ್ಲಿ ವಿಜಯನಗರಕ್ಕೆ ದ್ರೋಹ ಬಗೆದ ಗಿಲಾನಿ ಸೋದರರ ವಿರುದ್ಧ ಸೇಡು ತೀರಿಸಿಕೊಳ್ಳುವ ಹಠ. ಒಬ್ಬ ದೇಶದ್ರೋಹಿಯಾಗಿ ಹುಟ್ಟಿ ಮರಣ ಹೊದಿದ್ದಾನೆ. ಉಳಿದ ಇನ್ನೊಬ್ಬನನ್ನ ಹುಡುಕುವುದು ಮತ್ತು ಆತನನ್ನು ಕೊಲೆ ಮಾಡುವುದು ಇವರ ಉದ್ದೇಶ. ಮತ್ತೆ ಹಾಗೇ ಈಗ ಕೊಲೆ ಮಾಡಿದರೆ ಮತ್ತೆ ಇನ್ನೊಮ್ಮೆ ಆವರು ಜನ್ಮ ತಾಳುವುದಿಲ್ಲ ಎಂಬ ನಂಬಿಕೆ ಆ ಸೈನಿಕರಾದ ಮಲ್ಲಣ್ಣ ಮತ್ತು ತ್ರಿವಿಕ್ರಮ ಅವರದು. ಯಾರು ಗಿಲಾನಿ ಸೋದರ, ಆತನ ಕೊಲೆ ಮಾಡಿದರಾ? ನಂತರ ಆ ಸೈನಿಕರು ಏನಾದರು.... ಹೀಗೆ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಲೇ ಕಾದಂಬರಿ ಸಾಗುತ್ತದೆ. ಸುಖಾಂತ್ಯದಲ್ಲಿ ಕೊನೆಗೊಳ್ಳುತ್ತದೆ. ಎಲ್ಲೂ ಬೇಸರ ತರುವುದಿಲ್ಲ. ಎಲ್ಲವೂ ಅಚ್ಚುಕಟ್ಟು. ಕಾದಂಬರಿಯ ಮುನ್ನುಡಿಯಲ್ಲಿ ಡಾ. ಎಚ್.ಎನ್. ಶುಭದಾ ಅವರು ಒಂದು ಮಾತು ಉಲ್ಲೇಖನೀಯ. ‘ಕಾದಂಬರಿ ಓದುಗರಿಗೆ ಭಾವನಾತ್ಮಕವಾಗಿ ಹತ್ತಿರವಾಗುತ್ತದೆ. ಲೇಖಕರ ಚರಿತ್ರೆಯ ಬಗೆಗಗಿನ ತಿಳಿವಳಿಕೆ, ವೈಜ್ಞಾನಿಕತೆಯ ನಿಲುವು ಕೃತಿಯಲ್ಲಿ ಅನೇಕ ಕಡೆ ಉದಿತವಾಗುತ್ತದೆ. ಭವಿಷ್ಯ ದರ್ಶಕ, ಬೆಂಡವಾಲೆಗಳು ಕೃತಿಗೆ ನಾಡಕದ ಮಾತ್ರಿಕ ಸ್ಪರ್ಶ ನೀಡಿವೆ’. (ವಿಜಯವಾಣಿ ಪತ್ರಿಕೆಗೆ ಬರೆದ ವಿಠಲ್ ಶೆಣೈ ಅವರ ತಾಳಿಕೋಟೆ ಕದನದಲ್ಲಿ ಕಾದಂಬರಿಯ ವಿಮರ್ಶೆ ಇದು.)" 

- ಚನ್ನಮಲ್ಲಿಕಾರ್ಜುನ ಹದಡಿ 
 

Related Books