ಅನಾಥ ಹಕ್ಕಿಯ ಕೂಗು

Author : ಗಿರಿಮನೆ ಶ್ಯಾಮರಾವ್

Pages 152

₹ 130.00




Year of Publication: 2017
Published by: ಗಿರಿಮನೆ ಪ್ರಕಾಶನ
Address: ಲಕ್ಷ್ಮೀಪುರಂ ಬಡಾವಣೆ ಸಕಲೇಶಪುರ - 573134
Phone: 9739525514

Synopsis

ಬಾಲ್ಯದಲ್ಲಿ ಮಕ್ಕಳ ಮನಸಿನ ಮೇಲಾಗುವ ಪರಿಣಾಮ ಅಗಾಧ. ಈ ಹಂತದಲ್ಲಿ ಸರಿಯಾದ ಮಾನಸಿಕ ಪೋಷಣೆ ಸಿಗದಿದ್ದರೆ ಗುಣ-ಸ್ವಭಾವಗಳು ಹಾದಿ ತಪ್ಪುತ್ತವೆ. ಆದರೆ, ಮುಂದೊದಗುವ ದುಷ್ಪರಿಣಾಮ ದೊಡ್ಡವರ ಊಹೆಗೂ ನಿಲುಕದ ಅಪಾಯವನ್ನು ತಿಳಿಸುವ ಮನೋವೈಜ್ಞಾನಿಕ ಕಾದಂಬರಿ ಇದು. ವಿವೇಚನೆ ಇಲ್ಲದೆ ಒಂದು ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಪಡೆದ ದಂಪತಿಯ ಮಗು, ಈ ಸಮಾಜದಲ್ಲಿ ಏನೆಲ್ಲಾ ಕಷ್ಟ ಅನುಭವಿಸಬೇಕಾಗಿ ಬರುತ್ತದೆ ಎನ್ನುವ ಚಿತ್ರಣ ಇದರಲ್ಲಿದೆ.

ಬಹುತೇಕ ಹೆತ್ತವರಿಗೆ ಮಕ್ಕಳ ಮನಸ್ಸೇ ಅರ್ಥವಾಗುವುದಿಲ್ಲ. ಕೆಲವರು ಮಕ್ಕಳನ್ನು ದೊಡ್ಡವರ ಮಟ್ಟಕ್ಕೆ ತೂಗಿ ನೋಡಿದರೆ, ಇನ್ನು ಕೆಲವರು ಮತ್ತೂ ಚಿಕ್ಕವರಾಗಿಸಿ ನೋಡುತ್ತಾರೆ. ಆಯಾ ವಯಸ್ಸಿನ ಮಕ್ಕಳ ಮನೋಭಾವಕ್ಕೆ ತಕ್ಕಂತೆ ಅಳತೆ ಮಾಡಿ, ಅವರೊಂದಿಗೆ ಹೇಗೆ ಬೆರೆಯಬೇಕು, ಅವರ ನೋವು ನಲಿವುಗಳನ್ನು ಅರ್ಥಮಾಡಿಕೊಂಡು ಅವರನ್ನು ಬೆಳೆಸಬೇಕೆಂಬ ಮಾಹಿತಿಯನ್ನು ಲೇಖಕ ಗಿರಿಮನೆ ಶ್ಯಾಮರಾವ್ ಕಾದಂಬರಿ ಮೂಲಕ ನಿರೂಪಿಸಿದ್ದಾರೆ.

About the Author

ಗಿರಿಮನೆ ಶ್ಯಾಮರಾವ್

ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...

READ MORE

Related Books