ನೆಲದ ನಂಟು

Author : ಶರಣಗೌಡ ಬಿ.ಪಾಟೀಲ ತಿಳಗೂಳ

Pages 154

₹ 255.00




Year of Publication: 2019
Published by: ಅದಿತ್ರಿ ಪಬ್ಲಿಕೇಷನ್ಸ್
Address: ಬೆಂಗಳೂರು

Synopsys

‘ನೆಲದ ನಂಟು’ ಲೇಖಕ ಶರಣಗೌಡ ಬಿ.ಪಾಟೀಲ ತಿಳಗೂಳ ಅವರ ಕಾದಂಬರಿ. ಇದು ಶರಣಗೌಡ ಪಾಟೀಲರ ನಾಲ್ಕನೇ ಕೃತಿಯಾಗಿದ್ದು, ಹೈದರಾಬಾದ್ ಕರ್ನಾಟಕದ ಐತಿಹಾಸಿಕ ವಸ್ತುವಿಷಯವನ್ನು ಒಳಗೊಂಡ ಕಾದಂಬರಿಯಾಗಿದೆ. 1947 ಮತ್ತು 48ನೇ ಇಸವಿಯಲ್ಲಿ ನಡೆದ ವಿಮೋಚನಾ ಹೋರಾಟದಲ್ಲಿ ಪಾಲ್ಗೊಂಡ ದೇಶಭಕ್ತನೊಬ್ಬನ ಕತೆಯನ್ನು ಒಳಗೊಂಡಿರುವ ಈ ಕಾದಂಬರಿಗೆ ಸಂಗೀತ ನಿರ್ದೇಶಕ ವಿ. ಮನೋಹರ್ ಅವರ ಮುನ್ನುಡಿ ಇದೆ. ಜೊತೆಗೆ ಸ್ವಾತಂತ್ರ್ಯಕ್ಕಾಗಿ ದುಡಿದು ಬೆಳಕಿಗೆ ಬಾರದ ಹೋರಾಟಗಾರನ ಜೀವನ ಚರಿತ್ರೆಯೇ ಈ ಕೃತಿಯ ಮುಖ್ಯ ವಿಷಯವಾಗಿದೆ.

About the Author

ಶರಣಗೌಡ ಬಿ.ಪಾಟೀಲ ತಿಳಗೂಳ
(12 July 1974)

ಲೇಖಕ ಶರಣಗೌಡ ಪಾಟೀಲ ಅವರು  ಕಲಬುರಗಿ ಜಿಲ್ಲೆಯ ತಿಳಗೂಳ ಗ್ರಾಮದವರು. ಸ್ನಾತಕೋತ್ತರ ಪದವೀಧರರು. ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಕೃತಿಗಳು: ಹಿಟ್ಟಿನ ಗಿರಣಿ ಕಿಟ್ಟಪ್ಪ (ಲಲಿತ ಪ್ರಬಂಧಗಳ ಸಂಕಲನ)’, ತೊರೆದ ’ಗೂಡು (ಕಾದಂಬರಿ), ಕೆಂಪು ಶಲ್ಯ ಫಕೀರೂ ಹಾಗೂ ಇತರ ಕಥೆಗಳು (ಕಥಾ ಸಂಕಲನ), ಕಾಳು ಕಟ್ಟದ ಕಣ್ಣೀರು, ಭೀಮಾ ತೀರದ ತಂಗಾಳಿ (ಕಾದಂಬರಿಗಳು)   ಪ್ರಶಸ್ತಿ-ಪುರಸ್ಕಾರಗಳು:  ಇವರ ‘ಹಿಟ್ಟಿನ ಗಿರಣಿ ಕಿಟ್ಟಪ್ಪ  ಕೃತಿಗೆ 2017-18 ನೇ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಡಿ ಮಾಣಿಕರಾವ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಲಭಿಸಿದೆ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ. ಶಿಕ್ಷಕರ ಕಲ್ಯಾಣ ನಿಧಿಯ ರಾಜ್ಯ ಮಟ್ಟದ ...

READ MORE

Related Books