ಅನಂತಯಾನ

Author : ಉಮೇಶ ದೇಸಾಯಿ

Pages 92

₹ 100.00




Year of Publication: 2019
Published by: ಮೈತ್ರಿ ಪ್ರಕಾಶನ
Address: 504, 2ನೇ ಬ್ಲಾಕ್, ಬನಶಂಕರಿ 1ನೇ ಸ್ಟೇಜ್, ಬೆಂಗಳೂರು- 560050

Synopsys

‘ಅನಂತಯಾನ’  ಲೇಖಕ ಉಮೇಶ ದೇಸಾಯಿ ಅವರ ಎರಡನೆಯ ಕಾದಂಬರಿ. ಮೊದಲನೆಯ ಕಾದಂಬರಿ ' ಭಿನ್ನ' ಸಲಿಂಗಿಗಳ ಜಗತ್ತನ್ನು ಅನಾವರಣ ಮಾಡಿದ್ದರೆ ಇದು ಸಾಂಸಾರಿಕ ಸಂಬಂಧಗಳ ತೊಳಲಾಟವನ್ನು, ಎಲ್ಲ ಬಿಟ್ಟವರನ್ನೂ ಹೇಗೆ ಅವು ಸೆಳೆಯುತ್ತವೆ, ಲೈಕಿಕದ ಹಂಗೊಳಗಿಂದ ಹೊರಬರುವುದು ಎಷ್ಟು ಕಷ್ಟ ಎಂಬುದನ್ನು ಸಮರ್ಥವಾಗಿ ಬಿಡಿಸಿಡುತ್ತದೆ.

ಮನೆ ಬಿಟ್ಟು ಹೋದ ಅಪ್ಪನ ಗುರುತು, ಪತ್ತೆ ಸಿಕ್ಕಿ ಅವನ ವಾಪಸ್ ಕರಕೊಂಡು ಬರಲು ಹವಣಿಸುವ ಮಗ, ಅವನ ಬದುಕಲ್ಲೂ ನೆಮ್ಮದಿ ಇಲ್ಲ, ಅವನಿಗೂ ಅವನ ಮಡದಿಗೂ ನಡುವಿನ ಬಿರುಕಲ್ಲಿ ಭೂತದ ನೋವಿನ ಸೆಳೆಯಿದೆ.. ಇತ್ತ ಅದೂ ಕಾರಣವಾಗಿ ಎಲ್ಲ ಬಿಟ್ಟು ಸನ್ಯಾಸಿಯಾಗಿ ಆಶ್ರಮದ ಆಡಳಿತ ನೋಡುತ್ತಾ ಇರುವ ಅಪ್ಪ ಅನಿರೀಕ್ಷಿತವಾದ ಸಂಬಂಧಿಕರ, ತನಗಾಗದವರ ಮಾನಸಿಕ ದಾಳಿಗೆ ತುತ್ತಾದರೂ ಅವನಿಗೆ ತನ್ನ ಹಾದಿ ಸರಿಯೇ? ಎಂಬ ಗೊಂದಲವುಂಟಾಗುವಂತೆ ಮಾಡುತ್ತದೆ.ಮಗನ ಹೆಂಡತಿ ಸೊಸೆಯದು ಇನ್ನೊಂದೇ ಕಥೆ. ತನ್ನದಲ್ಲದ ತಪ್ಪಿಗೆ ಗಂಡನ ಜೊತೆ ತಪ್ಪಿ ನೋವುಣ್ಣಬೇಕಾದ ಪರಿಸ್ಥಿತಿ. ಗಂಡ ಹೇಳಿದ ಅಂತ ಮಾವನ ಒಪ್ಪಿಸಲು ತೆರಳಿದವಳಿಗೆ ಸಮಸ್ಯೆಯ ಪರಿಹಾರ ಒದಗುತ್ತದೆಯೇ? ಅಪ್ಪನ ಮರಳಿ ಕರೆತರುವಲ್ಲಿ ಮಗ ಯಶಸ್ವಿಯಾಗುತ್ತಾನೆಯೇ? ಅಪ್ಪನಿಗೆ ತನ್ನ ಹಾದಿಯ ಗೊಂದಲ ನಿವಾರಣೆಯಾಗುತ್ತದೆಯೇ? ಎಂಬುದು ಓದಿ ತಿಳಿಯಬೇಕಾದ ಸಂಗತಿ.

ಉಮೇಶ ದೇಸಾಯಿಯವರ ಈ ಕಾದಂಬರಿಯಲ್ಲಿ ಬಹಳ ಇಷ್ಟವಾದ ವಿಷಯ ಭಾಷೆಯ ಬಳಕೆ. ಎಲ್ಲೂ ರಾಜಿಯಾಗದೆ ಆಡು ಮಾತಿನ ಭಾಷೆಯನ್ನು ಅವರು ಬರೆದದ್ದು ಕಥೆಯ ಓಟಕ್ಕೆ ಬಲ‌ ತಂದಿದೆ. ಇನ್ನೊಂದು ಮನಸುಗಳ ಮಾತಿಗೆ ಅವರು ಹಾಕಿದ ಪಾತಾಳ ಗರಡಿ.. ಪಾತ್ರಗಳೆಡೆಗೆ ಪಕ್ಷಪಾತಿಯಾಗದೆ ಎಲ್ಲರ ಮನಸಿನ ಭಾವಗಳ ಬರೆದ ರೀತಿ ಹಾಯೆನಿಸುತ್ತದೆ. ಭಿನ್ನ ಓದಿದವರಿಗೆ ಉಮೇಶ ದೇಸಾಯಿಯವರ ಬರವಣಿಗೆ ಬೆಳೆದ ಬಗೆ ಅಚ್ಚರಿ ಹುಟ್ಟಿಸುತ್ತದೆ.

About the Author

ಉಮೇಶ ದೇಸಾಯಿ
(27 July 1965)

ಹುಬ್ಬಳ್ಳಿಯಲ್ಲಿ ಜನಿಸಿದ ಉಮೇಶ ದೇಸಾಯಿ  ಸದ್ಯ ಬೆಂಗಳೂರಿನಲ್ಲಿ ಲೆಕ್ಕಿಗರಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲಿಂದಲೂ ಸಾಹಿತ್ಯದಲ್ಲಿ ಆಸಕ್ತಿ. ’ಚೌಕಟ್ಟಿನಾಚೆ’ ಕಥಾಸಂಕಲನ ಹಾಗೂ ’ಭಿನ್ನ’ ಕಾದಂಬರಿ ಪ್ರಕಟಿಸಿದ್ದಾರೆ.  ಸ್ವತಃ ಪ್ರಕಾಶನ ಸಂಸ್ಥೆ ನಡೆಸುತ್ತಿದ್ದು  ಹೊಸ ಬರಹಗಾರರನ್ನು ಪ್ರೋತ್ಸಾಹಿಸುತ್ತಿದ್ದಾರೆ.    ...

READ MORE

Related Books