ಗ್ರಾಮೀಣ ಪ್ರದೇಶದ ಜನರ ಬದುಕು-ಬವಣೆಗಳ ಸುತ್ತ ಹೆಣೆದಿರುವ ಕಾದಂಬರಿ ತೊರೆದ ಗೂಡು. ಅಪ್ರಾಪ್ತ ಬಾಲಕಿಯೊಬ್ಬಳ ಜೀವನದಲ್ಲಿ ನಡೆಯುವ ಕಲ್ಪಿತ, ನೈಜ ಘಟನೆಗಳನ್ನಿಟ್ಟುಕೊಂಡು ಈ ಕಾದಂಬರಿಯನ್ನು ಹೆಣೆಯಲಾಗಿದೆ. ವೃತ್ತಿ ಜೀವನದ ಸುತ್ತ ಕಾದಂಬರಿ ಹೆಣೆಯಲಾಗಿದೆ.
ಕಲಬುರಗಿ ಜಿಲ್ಲೆಯ ತಿಳಗೂಳಲ್ಲಿ ಜನಿಸಿದ ಶರಣಗೌಡ ಪಾಟೀಲ ಅವರು ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಬೆಳೆದವರು. ತಂದೆ ಬಸಣ್ಣಗೌಡ ವ್ಯವಸಾಯಗಾರ ಆಗಿದ್ದರು. ಗ್ರಾಮೀಣ ಪರಿಸರದಲ್ಲಿ ಪ್ರೌಢ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತಿದ್ದಾರೆ. ಗ್ರಾಮೀಣ ಜನಜೀವನ ಇಲ್ಲಿನ ಬದುಕು ಬವಣೆ ಬಹಳ ಹತ್ತಿರದಿಂದ ನೋಡಿರುವ ಆಧಾರದ ಮೇಲೆ ಕಥೆ ಕವನ ಲೇಖನ ಕಾದಂಬರಿ ಬರೆಯಲು ಆರಂಭಿಸಿದರು. ಈಗಾಗಲೇ ಮೂರು ಪುಸ್ತಕ ಪ್ರಕಟಿಸಿದ್ದಾರೆ. ಚೊಚ್ಚಲ ಕೃತಿ ’ಹಿಟ್ಟಿನ ಗಿರಣಿ ಕಿಟ್ಟಪ್ಪ’ ಕೃತಿಗೆ 2017-18 ನೇ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಡಿ ಮಾಣಿಕರಾವ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಬಂದಿದೆ. ಎರಡನೇ ...
READ MORE