ಶ್ರೀ ಕೃಷ್ಣ

Author : ಸು. ರುದ್ರಮೂರ್ತಿ ಶಾಸ್ತ್ರಿ

Pages 648

₹ 650.00




Year of Publication: 2023
Published by: ಅಂಕಿತ ಪುಸ್ತಕ
Address: ಪ್ರಕಾಶಕರು : ಅಂಕಿತ ಪುಸ್ತಕ, #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

ಶ್ರೀ ಕೃಷ್ಣ , ಸು.ರುದ್ರಮೂರ್ತಿ ಶಾಸ್ತ್ರಿ ಅವರ ಕೃತಿಯಾಗಿದೆ. ಪುರುಷ ಪರುಷೋತ್ತಮನಾದ ಕಥೆ ಭಾರತ ಭಾಗವತಗಳನ್ನು, ಕವಿಯಾಗಿ ಅಧ್ಯಯನ ಮಾಡಿ, ಅರ್ಥೈಸಿಕೊಂಡ ಸು.ರುದ್ರಮೂರ್ತಿ ಶಾಸ್ತ್ರಿಗಳು, ಶ್ರೀಕೃಷ್ಣನನ್ನು ಈ ದೃಷ್ಟಿಯಿಂದ ಜಗದ್ಗುರುವಾಗಿ ನೋಡಿದರೋ ಏನೋ ಶ್ರೀಕೃಷ್ಯನ ಅಂತರಂಗವನ್ನು ಪ್ರವೇಶಿಸಿ ಶ್ರೀ ಕೃಷ್ಣ ಪುರುಷೋತ್ತಮನಾದುದನ್ನು ಈ ಕಾದಂಬರಿಯ ಮೂಲಕ, ಸಹಜವಾಗಿ ನಿರೂಪಿಸುತ್ತಾ ಹೋಗಿದ್ದಾರೆ. ಶ್ರೀಕೃಷ್ಣ ನಮ್ಮ ನಿಮ್ಮಂತ ಸಾಮಾನ್ಯ ಮನುಷ್ಯನಾಗಿ ಹುಟ್ಟಿದವನೆ. ಆತನು ಸಾಮಾನ್ಯ ಮಾನವ ಧರ್ಮವನ್ನು ಅನುಸರಿಸುತ್ತಾ, ಪ್ರತಿಯೊಬ್ಬರಿಂದ ಒಂದೊಂದು ಮಾನವೀಯತೆಯ ಸಾರಗಳನ್ನು ಕಲಿಯುತ್ತಾ, ಅವುಗಳನ್ನು ತನ್ನ ನಿಜಜೀವನದಲ್ಲಿ ಅನುಸರಿಸಿ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾ, ತನ್ನನ್ನು ತಾನು ವಿಮರ್ಶಿಸಿ ಕೊಳ್ಳುತ್ತಾ ಬೆಳೆದಿದ್ದಾನೆ, ಈ ರೀತಿ ಪ್ರತಿಯೊಬ್ಬ ಮಾನವನೂ ಪುರುಷೋತ್ತಮ ನಾಗಬಹುದು ಎಂಬುದು ಈ ಕಾದಂಬರಿ ನಮಗೆ ನೀಡುವ ಸಂದೇಶವಾಗಿದೆ ಎಂದು ಆರ್‌. ಶೇಷಶಾಸ್ತ್ರಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಸು. ರುದ್ರಮೂರ್ತಿ ಶಾಸ್ತ್ರಿ
(11 November 1948)

ಲೇಖಕ ರುದ್ರಮೂರ್ತಿ ಶಾಸ್ತ್ರಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿಯವರು. ತಂದೆ-ಎಸ್.ಎನ್. ಶಿವರುದ್ರಯ್ಯ, ತಾಯಿ- ಸಿದ್ಧಗಂಗಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟೂರಿನಲ್ಲಿ , ಪ್ರೌಢಶಾಲೆಯನ್ನು ರಾಮನಗರದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವೀಧರರು. ಬೆಂಗಳೂರಿನ ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಂತರ ವೃತ್ತಿಗೆ ರಾಜೀನಾಮೆ ನೀಡಿ ಸಾಹಿತ್ಯ ಸೇವೆಯಲ್ಲಿ ತೋಡಗಿ, ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಭಾವ ಲಹರಿ’, ಪರಿ, ಅಂತರಂಗ-ಬಹಿರಂಗ, ಚಿತ್ರಕಲ್ಪನೆ, ರಾಗ, ನಾಡಗೀತೆಗಳು, ನಾದರೂಪಕ ಕವನ ಸಂಕಲನಗಳು. ಪ್ರಾಸ-ಪ್ರಯಾಸ, ಕೆಂಪಭಾರತಂ, ಕೆಂಪರಾಮಾಯಣಂ, ಕೆಂಪನ ವಚನಗಳು, ಅಲ್ಪಜ್ಞನ ವಚನಗಳು ಮುಂತಾದ ಹಾಸ್ಯ ಸಂಕಲನಗಳು ಸೇರಿ ಸುಮಾರು ...

READ MORE

Related Books