ಬೆದ್ಲು ಬದ್ಕು

Author : ತೇಜಸ್ ಜಿ.ಎಲ್. ವಡ್ನಾಳ್

Pages 240

₹ 250.00
Year of Publication: 2022
Published by: ನನ್ನಿ ಪುಸ್ತಕ ದಾವಣಗೆರೆ
Address: #874/3, ಗಂಗಕಮಲ, ಶ್ರೀ ವೆಂಕಟೇಶ್ವರ ನಿಲಯ, ಭಾಗೀರಥ ಸರ್ಕಲ್ ಹತ್ತಿರ, ನಿಟ್ಟುವಲ್ಲಿ, ಜಯನಗರ ಬಿ-ಬ್ಲಾಕ್, ದಾವಣಗೆರೆ- 577004
Phone: 9742046665

Synopsys

“ಬೆದ್ಲು ಬದ್ಕು’ ನಗೋಲತೇ(ತೇಜಸ್.ಜಿ.ಎಲ್. ವಡ್ನಾಳ್) ಅವರ ಕಾದಂಬರಿಯಾಗಿದೆ. ಲೇಖಕರು ತನ್ನ ಚಿಕ್ಕಮ್ಮನ ಬಾಳೆ ಈ ಕಾದಂಬರಿಯ ಆಸ್ತಿ ಎನ್ನುತ್ತಾರೆ. ಅವಳೊಂದಿಗೆ ನಾನು ಅಷ್ಟು ಬೆರೆತಿಲ್ಲವಾದರು ಅವಳ ಕಥೆ ಎಲ್ಲರ ಬಾಯಲ್ಲು ಕೇಳಿದ್ದೇನೆ. ಅವಳ ಊರಲ್ಲೂ ಬಹಳ ದಿನಗಳನ್ನು ನಾನು ಕಳೆದಿಲ್ಲ. ಆದರೆ ಇದ್ದಷ್ಟು ದಿನ ಊರ ಸುತ್ತಿ ಮೂಲೆ ಮೂಲೆಯನ್ನು ಕಂಡಿದ್ದೇನೆ. ನಾನು ನನ್ನ ಚಿಕ್ಕಮ್ಮನ ಮಗಳು ವಿಜಿ, ಮಾಮನ ಮಕ್ಕಳು ಸಣ್ಣವರಿದ್ದಾಗ ಹಾಳಾದ ಬೋರಿಗೆ ಕಲ್ಲು ಹಾಕುತ್ತಿದ್ದೆವು. ಅದು “ಗುಳಗುಳಲಲಲ" ಎಂದು ಸದ್ದು ಮಾಡುತ್ತಿತ್ತು. ಅದಕ್ಕೆ ಗೊಳ್ಳಂಗೊಟ್ಟ ಎಂದು ಹೆಸರಿಟ್ಟಿದ್ದೆವು. ಸ್ವಲ್ಪ ಬೆಳೆದ ಮೇಲೆ ಈರುಳ್ಳಿ ಕೊಯ್ಯಲು ಕೂಡ ಹೋಗಿದ್ದೆವು. ಓರ್ಗಲ್ಲಮ್ಮ ಜಾತ್ರೆ ಒಂದು ವಾರ ನಡೆದಿತ್ತು. ಅಲ್ಲಿ ಆಗಲು ಅಷ್ಟೆ ನಾನು ಕಾಣದಿದ್ದ ಅನೇಕ ಆಚಾರಗಳನ್ನು ನೋಡಿ ವಿಸ್ಮಿತನಾಗಿದ್ದೆ, ಅದರಲ್ಲಿ ಕೆಲವು ಈ ಕಾದಂಬರಿಯಲ್ಲು ಕಾಣಿಸುತ್ತವೆ ಎಂದಿದ್ದಾರೆ.

About the Author

ತೇಜಸ್ ಜಿ.ಎಲ್. ವಡ್ನಾಳ್

"ನಗೋಲತೇ" ಕಾವ್ಯನಾಮದ ತೇಜಸ್ ಜಿ.ಎಲ್. ವಡ್ನಾಳ್ ಮೂಲತಃ ದಾವಣಗೆರೆಯವರು. ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಅವರು ಈಗಾಗಲೇ ಮೂರು ಕೃತಿಗಳನ್ನು ರಚಿಸಿದ್ದಾರೆ. ಮಂಗಳೂರಿನ ಶ್ರೀದೇವಿ ತಾಂತ್ರಿಕ ವಿದ್ಯಾಲಯದಲ್ಲಿ ಏರೋನಾಟಿಕಲ್ ಇಂಜಿನಿರಿಂಗ್‌ನಲ್ಲಿ ಬಿಇ ಪದವಿಯನ್ನು ಪಡೆದಿರುತ್ತಾರೆ. ಪೇಂಟಿಂಗ್, ಅಡುಗೆ ಮಾಡುವುದು, ತಬಲಾ ನುಡಿಸುವುದು, ಹಾಡು ಹೇಳುವುದು, ಕುದುರೆ ಸವಾರಿ ಮಾಡುವುದು, ಈಜುವುದು, ಚಾರಣ, ಕತೆ ಕಾದಂಬರಿ ಓದುವುದರ ಜೊತೆಗೆ ವಿಮಾನಗಳ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.  ಕೃತಿಗಳು: ಮುಗಿಲ ಹೆಗಲ ಮೇಲೆ( ಕವನ ಸಂಕಲನ), ಮಣ್ಣಣ್ಣ ಮಾರಿ ಜಾತ್ರೆ(ಕಾದಂಬರಿ), ಬೆದ್ಲು ಬದ್ಕು(ಕಾದಂಬರಿ)   ...

READ MORE

Related Books