ಚಲನಚಿತ್ರವಾಗಿರುವ ಆಘಾತ

Author : ಕೆ.ಎ. ಅಶೋಕ್ ಪೈ

Pages 224

₹ 150.00




Year of Publication: 1994
Published by: ದಿವ್ಯ ಚಂದ್ರ ಪ್ರಕಾಶನ
Address: ಕರ್ನಾಟಕ ಹೌಸ್ ಬೋರ್ಡಿಂಗ್ ಕಾಲೋನಿ, 2ನೇ ಹಂತ, ನೇ ಮುಖ್ಯ ರಸ್ತೆ, 8ನೇ ಅಡ್ಡ ರಸ್ತೆ, ಬಸವೇಶ್ವರನಗರ, ಬೆಂಗಳೂರು- 560079

Synopsys

ಚಲನಚಿತ್ರವಾಗಿರುವ ‘ಆಘಾತ’ ಕೃತಿಯು ಕೆ.ಎ. ಅಶೋಕ್ ಪೈ ಅವರ ಕಾದಂಬರಿಯಾಗಿದೆ. ಕಾದಂಬರಿಯ ಪ್ರಥಮ ಅಧ್ಯಾಯದ ಒಳವಸ್ತು ಹೀಗಿದೆ; ಅಂದು ಭಾನುವಾರ, ಶುಶೂಷಾ ಗೃಹಕ್ಕೆ ಬಿಡುವಿನ ದಿನ. ಅಂದರೆ, ಕಾರ್‍ಯ ಚಟುವಟಿಕೆಗಳು ಇಲ್ಲವೆಂದೇನಲ್ಲ, ಅಂದು ಹೊರ ರೋಗಿಗಳನ್ನು ನೋಡಲಾಗು ವುದಿಲ್ಲ ಅಷ್ಟೆ. ರೋಗಿಗಳಿಗೆ ಪೂರ್ವ ದಿನಾಂಕವನ್ನು ಭಾನುವಾರದಂದು ನೀಡುವ ವ್ಯವಸ್ಥೆ ಈ ಶುಶೂಷಾ ಗೃಹದಲ್ಲಿಲ್ಲ. ಆದರೆ ಒಳರೋಗಿಗಳಂತೂ ಇದ್ದೇ ಇರುತ್ತಾರಲ್ಲ. ವಾರ್ಡಿನಲ್ಲಿ ರೌಂಡ್ನನ್ನು ಮಾಡಿ ಮುಗಿಸಿ, ಪ್ರತಿಯೊಬ್ಬ ಒಳ ರೋಗಿಗಳ ಸುದೀರ್ಘ ರೋಗ ಚರಿತ್ರೆ, ಔಷಧದ ಪ್ರಮಾಣವನ್ನು ಪುನ‌ ನಿರ್ಧರಿಸುವಿಕೆ, ನಿರೀಕ್ಷಿತ ಪರಿಣಾಮವನ್ನು ನೀಡದಿದ್ದಾಗ ಔಷಧಿಯನ್ನು ಬದಲಾಯಿಸುವುದು, ಮನೋ ಸಂವಾದದ ಮೂಲಕ ರೋಗಿಯ ಪ್ರಗತಿಯನ್ನು ಮಾವನಿಸುವುದು ಮುಂತಾದ ನಿರಂತರ ಪ್ರಕ್ರಿಯೆ ಇತರೆ ವಾರದ ದಿನಗಳಂತೆ ಭಾನುವಾರವೂ ನಡೆಯುವುದುಂಟು. ಅಲ್ಲದೆ ಭಾನುವಾರದ ಮತ್ತೊಂದು ವೈಶಿಷ್ಟ್ಯವೆಂದರೆ, ಸೋಮವಾರದ ಆಗಮನಕ್ಕಾಗಿ ಪೂರ್ವಭಾವಿಸಿದ್ಧತೆಗಳನ್ನು ನಡೆಸುವುದು. ಸೋಮವಾರ ಪುರಸೊತ್ತು ಇಲ್ಲದ ಅತೀ ಬಿಜಿ ದಿನ. ಕನಿಷ್ಟ ಹದಿನೈದು ಇಪ್ಪತ್ತು ಹೊಸ ರೋಗಿಗಳ ಸೇರ್ಪಡೆಗೆ ಮಾನಸಿಕ ಸಿದ್ಧತೆಯನ್ನು, ದೈಹಿಕ ಸುಸ್ಥಿತಿಯನ್ನು ಕಾಯ್ದು ಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಮರುದಿನ ಆಸ್ಪತ್ರೆಯಿಂದ ಬಿಡುಗಡೆಯಾಗಲಿರುವ ರೋಗಿಗಳ ಸಂಬಂಧಿಕರನ್ನು ಕರೆದು ಸಲಹೆ ನೀಡುವುದು, ಮರು ಪರೀಕ್ಷೆಯ ಮಹತ್ವದ ಬಗ್ಗೆ ಅವಶ್ಯಕತೆಯ ಬಗ್ಗೆ ಸಲಹ ನೀಡುವುದು. ರೋಗಿಗಳ ಅನುಮಾನಗಳಿಗೆ ಪರಿಹಾರ ನೀಡುವುದು ಮುಂತಾದ ಚಟುವಟಿಕೆಗಳು ವಿರಾಮದ ದಿನದಂದು ವೈದ್ಯರನ್ನು, ದಾದಿಯರನ್ನು ಚುರುಕಾಗಿ ಇಡುವ ದಿನ. ಅದಲ್ಲದೆ ತುರ್ತಾದ ಕರೆಗಳನ್ನೂ ರಜಾ ದಿನವೆಂದು ತಿಳಿಯದೆ ಇರುವ ದೂರದಿಂದ ಬಂದ ರೋಗಿಗಳನ್ನು ಕಡೆಗಣಿಸುವ ಹಾಗಿಲ್ಲ.

About the Author

ಕೆ.ಎ. ಅಶೋಕ್ ಪೈ
(30 December 1946 - 29 September 2016)

ಡಾ.ಅಶೋಕ್ ಪೈ ಮನೋವೈದ್ಯರು. ಬರಹಗಾರರು. ಚಲನಚಿತ್ರ ನಿರ್ಮಾಪಕರು. ತಂದೆ ಕಟೀಲು ಅಪ್ಪು ಪೈ, ತಾಯಿ ವಿನೋದಿನಿ ಪೈ. 1946ರ ಡಿಸೆಂಬರ್ 30 ರಂದು ಜನಿಸಿದರು. ಶಿವಮೊಗ್ಗದಲ್ಲಿ ಮನೋರೋಗಿಗಳ ಶುಶ್ರೂಷೆಗೆ ಮಾನಸ ನರ್ಸಿಂಗ್ ಹೋಮ್ ಹಾಗೂ ಮಾನಸ ಎಜುಕೇಶನ್ ಫೌಂಡೇಶನ್ ಸ್ಥಾಪಿಸಿದರು. ಪತ್ನಿ ಡಾ. ರಜನಿ ಪೈ ಅವರೊಂದಿಗೆ ಮನಃಶಾಸ್ತ್ರದ ಆಳಸ್ಪರ್ಶವುಳ್ಳ ತಮ್ಮದೇ ಕತೆಗಳನ್ನು ಆಧರಿಸಿದ ಉಷಾಕಿರಣ, ಆಘಾತ, ಮನಮಂಥನ ಮೊದಲಾದ ಚಲನಚಿತ್ರಗಳನ್ನು ನಿರ್ಮಿಸಿದ್ದರು.  ನಾ. ಡಿಸೋಜ ಕಾದಂಬರಿ ಆಧಾರಿತ 'ಕಾಡಿನ ಬೆಂಕಿ' ಚಿತ್ರ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಗಳಿಸಿತ್ತು. ಉಷಾಕಿರಣ ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ಹಾಗೂ ಆಘಾತ ಚಿತ್ರಕ್ಕೆ ರಾಜ್ಯಪ್ರಶಸ್ತಿ ಸಂದಿತ್ತು. ...

READ MORE

Related Books