ಚಂದನದ ಗೊಂಬೆ

Author : ತ.ರಾ.ಸು. (ತ.ರಾ. ಸುಬ್ಬರಾವ್)

Pages 192

₹ 130.00
Year of Publication: 2018
Published by: ಹೇಮಂತ ಸಾಹಿತ್ಯ
Address: ನಂ. 53/1, ಕಾಟನ್ ಪೇಟೆ ಮುಖ್ಯರಸ್ತೆ, ಬೆಂಗಳೂರು-53
Phone: 0802670210

Synopsys

ಭಾವನೆಯ ಬುನಾದಿಯ ಮೇಲೆ ಮೂಡಿದ ’ಚಂದನದ ಗೊಂಬೆ’ ಕಾದಂಬರಿ, ವ್ಯಕ್ತಿ ತಾನು ವೈಯಕ್ತಿಕವಾಗಿ ಯಾವ ತಪ್ಪನ್ನು ಮಾಡದಿದ್ದರೂ, ಯಾರಿಗೂ ಯಾವ ಬಗೆಯ ಕೆಡಕನ್ನು ಮಾಡದಿದ್ದರೂ ಸ್ವಾರ್ಥದೂಷಿತವಾದ ಸಮಾಜದ ನಡುವೆ ಬಾಳುವಾಗ ಅಂಥ ನಿರಪರಾಧಿ ಜೀವನವೂ ಹೇಗೆ ದುರಂತದಲ್ಲಿ ಪರ್ಯವಸಾನವಾಗುತ್ತದೆ, ಬಾಳಲು ಅಗತ್ಯವಾದ ಗುಣಗಳನ್ನು ಕಳೆದುಕೊಂಡ ಜನ, ಹೇಗೆ ಅಂಥ ಜೀವನವನ್ನು ಬಾಳಗೊಡುವುದಿಲ್ಲ ಎನ್ನುವ ಇಂದಿನ ಸಮಾಜದ ವಿಷಮ ಪರಿಸ್ಥಿತಿಯು ಓದುಗರ ಮನದಲ್ಲಿ ನೆಲೆ ನಿಲ್ಲುವಂತೆ ಲೇಖಕ ತ.ರಾ.ಸು ಚಿತ್ರಿಸಿದ್ದಾರೆ.

About the Author

ತ.ರಾ.ಸು. (ತ.ರಾ. ಸುಬ್ಬರಾವ್)
(12 June 1906 - 10 April 1984)

ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...

READ MORE

Related Books