ದೇವರ ಜಾತ್ರೆ

Author : ನರಸಿಂಹಮೂರ್ತಿ ಹೂವಿನಹಳ್ಳಿ

Pages 150

₹ 120.00
Published by: ಪ್ರೇರಣಾ ಪ್ರಕಾಶನ
Phone: 9480583913

Synopsys

ದೇವರ ಜಾತ್ರೆ ಜನಸಾಮಾನ್ಯರ ಬದುಕಿನ ಉಲ್ಲಸಿತ ಕ್ರಿಯೆಯಾಗದೆ, ಹೀಗೆ ಅದು ಅವರ ಒಳ-ಹೊರಗಿನ ಬೇಗುದಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎನ್ನುವುದನ್ನು ಕಾದಂಬರಿ ಅತ್ಯಂತ ಲವಲವಿಕೆಯಿಂದ ನಿರೂಪಿಸುತ್ತಾ ಹೋಗುತ್ತದೆ. ಬಡತನ ಮತ್ತು ಸಾಲದ ಬಾಧೆಗಳನ್ನು ಬೆನ್ನಲ್ಲಿ ಧರಿಸಿಕೊಂಡ ಹಳ್ಳಿಗಳ ಬದುಕನ್ನು ಧಾರ್ಮಿಕ ಕ್ರಿಯೆಗಳು ಇನ್ನಷ್ಟು ಅಸಹನೀಯ ಗೊಳಿಸುತ್ತದದೆ. ಹಳ್ಳಿಯನ್ನು ಒಡೆಯುತ್ತದೆ. ಯುವ ಕನಸುಗಳೂ ಇದರ ಬೇಗುದಿಯಲ್ಲಿ ನಜ್ಜುಗುಜ್ಜಾಗುತ್ತದೆ. ವರ್ತಮಾನದ ಭಾರತದಲ್ಲಿ ಹಳ್ಳಿಗಳ ಪತನಗಳನ್ನು, ಅವುಗಳ ದುರಂತ ಹೆಜ್ಜೆಗಳನ್ನು ದೇವರ ಜಾತ್ರೆ ಸೂಕ್ಷ್ಮವಾಗಿ ವಿವರಿಸುವಲ್ಲಿ ಯಶಸ್ವಿಯಾಗಿದೆ. " ಹಳ್ಳಿಯ ಬದುಕಿನ ಬಿಡಿ ಚಿತ್ರಗಳ ಸಂಕಲನವಾಗಿ ಈ ಕಾದಂಬರಿ ಕಾಣುತ್ತದೆ. ಅಲ್ಲಲ್ಲಿ ಓದುಗನೊಂದಿಗೆ ನೇರವಾಗಿ ಮಾತನಾಡುವ ನಿರೂಪಕನ ಉದ್ದೇಶಗಳು ಗಂಭೀರವಾಗಿವೆ.’ ಇದು ಕೃತಿಯ ಕುರಿತಂತೆರಾಜೇಂದ್ರ ಚೆನ್ನಿಯವರ ಮಾತು.

Related Books