ಮಣ್ಣಿನ ಕನಸು

Author : ಶತಾವಧಾನಿ ಆರ್. ಗಣೇಶ

Pages 658

₹ 600.00
Year of Publication: 2022
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ-580020
Phone: 09448110034

Synopsys

ವಿದ್ವಾಂಸ ಡಾ. ಶತಾವಧಾನಿ ಆರ್. ಗಣೇಶ ಅವರು ರಚಿಸಿದ ಕಾದಂಬರಿ- ಮಣ್ಣಿನ ಕನಸು. ಕಾದಂಬರಿ ಪ್ರಕಾರಕ್ಕೂ ಅವರು ಕೈಹಾಕಿದ ಮೊದಲ ಪ್ರಯೋಗದಲ್ಲೇ ಯಶಸ್ವಿಯಾಗಿದ್ದು, ಭಾಷಾಪ್ರಯೋಗದಿಂದಲೇ ಕಾದಂಬರಿಗೆ ಹೊಸಚೈತನ್ಯವನ್ನು, ಓದುಗರಿಗೆ ಹೊಚ್ಚಹೊಸ ಅನುಭವವನ್ನು ನೀಡಿದ್ದಾರೆ. 

ಕೃತಿಯ ಬೆನ್ನುಡಿಯಲ್ಲಿ ಹೀಗೆ ಉಲ್ಲೇಖಿಸಲಾಗಿದೆ; ‘ಮಣ್ಣಿನ ಕನಸು ಸ್ವಪ್ನವಾಸವದತ್ತ ಮತ್ತು ಮೃಚ್ಛಕಟಿಕ ಎಂಬ ಸುಪ್ರಸಿದ್ಧ ಸಂಸ್ಕೃತ ರೂಪಕಗಳ ಇತಿವೃತ್ತವನ್ನು ಆಧರಿಸಿ ರೂಪುಗೊಂಡ ಐತಿಹಾಸಿಕ ಕಾದಂಬರಿ. ಇದು ಪ್ರೀತಿ-ವಿಶ್ವಾಸಗಳ, ರಾಜಕೀಯ, ತಂತ್ರ-ಪ್ರತಿತಂತ್ರಗಳ, ಕಲೆ ತತ್ವಗಳ ಬಣ್ಣಗಳನ್ನು ಒಳಗೊಂಡ ಚಿತ್ರ. ಸಹೃದಯರ ಚಿತ್ರವೃತ್ತಿಗಳನ್ನು ಕಾಡುವ ಹತ್ತಾರು ಪಾತ್ರಗಳು, ಸಂಕೀರ್ಣವಾದ ಘಟನೆಗಳು, ಕಾವ್ಯಮಯ ವರ್ಣನೆಗಳು, ಆಳವಾದ ಸಂವಾದಗಳು, ಅಭಿಜಾತ ಭಾಷಾ ಶೈಲಿ, ಈ ಕಾದಂಬರಿಯ ಕೆಲವು ವಿಶೇಷಗಳು. ವ್ಯಕ್ತಿಗಳಿಗೆ ಕನಸುಗಳಿರುವಂತೆ ನಮ್ಮನ್ನು ತಾಳಿ ಬಾಳಿಸುವ ಈ ಮಣ್ಣಿಗೂ ಕನಸಿದ್ದರೆ ಅದು ನನಸಾಗುವ ನಲಿವಿನ ಹಾದಿಯನ್ನು ಹುಡುಕುವ ನೋವು ಇಲ್ಲಿದೆ. ಸುಮಾರು ಎರಡು ಸಾವಿರದ ಐನೂರು ವರ್ಷಗಳಿಗೂ ಮುನ್ನ ಇದ್ದ ಭಾರತದ ಸಾಂಸ್ಕೃತಿಕ ಮತ್ತು ರಾಜಕೀಯ ಜೀವನದ ಎಷ್ಟೋ ವಿವರಗಳು ಈ ಕೃತಿಯ ಕಥೆ ಮತ್ತು ಪಾತ್ರಗಳ ಜೊತೆಯಲ್ಲಿ ದಟ್ಟವಾಗಿ ಹೆಣೆದುಕೊಂಡಿದೆ. ಇವುಗಳ ಅಧಿಕೃತತೆ ಮತ್ತು ಸೂಕ್ಷ್ಮತೆಗಳು ಓದುಗರ ಮನೋನೇತ್ರಗಳಿಗೆ ಆ ಕಾಲದ ಜೀವನವನ್ನು ಆಪ್ತವಾಗಿ ಒದಗಿಸಿಕೊಟ್ಟಿವೆ.’

 

 

About the Author

ಶತಾವಧಾನಿ ಆರ್. ಗಣೇಶ
(04 December 1962)

ಶತಾವಧಾನಿ ಗಣೇಶ ಅವರು ಉತ್ತಮ ವಾಗ್ಮಿಗಳು. ವಿದ್ವಾಂಸರು. ಅವಧಾನ ಕಲೆಯನ್ನು ರೂಢಿಸಿಕೊಂಡವರು. “ಕನ್ನಡದಲ್ಲಿ ಅವಧಾನ ಕಲೆ” ಎಂಬ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಪ್ರಪ್ರಥಮ ಡಿ.ಲಿಟ್. ಪದವಿ ನೀಡಿ ಗೌರವಿಸಿದೆ. ಪ್ರಸ್ತುತ ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿದ್ದಾರೆ. ಆರ್.ಶಂಕರನಾರಾಯಣ ಅಯ್ಯರ್ ಹಾಗೂ ಅಲಮೇಲಮ್ಮ ದಂಪತಿಯ ಪುತ್ರರು.04-12-1962ರಂದು ಕೋಲಾರದಲ್ಲಿ ಜನನ. ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (UVCE), ದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರು. ಬೆಂಗಳೂರಿನ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸೈನ್ಸ್ ನಲ್ಲಿ ಮೆಟೀರಿಯಲ್ ಸೈನ್ಸ್ ಹಾಗೂ ಮೆಟಲರ್ಜಿಯಲ್ಲಿ ಎಂ.ಎಸ್ಸಿ. ಪದವೀಧರರು. ಮೈಸೂರ್ ವಿಶ್ವವಿದ್ಯಾಲಯದ ಅಡಿಯಲ್ಲಿ ...

READ MORE

Related Books