ನಿಸರ್ಗ

Author : ಮಿರ್ಜಿ ಅಣ್ಣಾರಾಯ

Pages 386

₹ 4.00
Year of Publication: 1982
Published by: ವಿಶ್ವಕನ್ನಡ ಸಮ್ಮೇಳನ
Address: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು

Synopsys

ಮಿರ್ಜಿ ಅಣ್ಣಾರಾಯರು ಬರೆದ ಮೊದಲ ಕಾದಂಬರಿ-ನಿಸರ್ಗ. ಬೆಳಗಾವಿ ಜಿಲ್ಲೆಯ ಉತ್ತರದ ತುತ್ತ ತುದಿಯ ಹಳ್ಳಿವೊಂದರ ಜನಜೀವನದ ಅದರಲ್ಲೂ ಜೈನ ಸಮಾಜದ ಚಿತ್ರ-ಕಾದಂಬರಿ ಸಾಹಿತ್ಯ ಪ್ರಕಾರದಲ್ಲಿ ಮೊದಲನೆ ಸಲ ಬಂದಿದ್ದು, ಇದರ ವೈಶಿಷ್ಟ್ಯ .

ಕತೆಯ ಓಟಕ್ಕೆ ಬಾಧೆ ಬರದಂತೆ ವರ್ಣನೆ ಮಿತಿ ಮೀರದಂತೆ ಆಯಾ ಪ್ರದೇಶದ ರೀತಿ ನಡತೆಗಳನ್ನು ಅಣ್ಣಾರಾಯರು ಚೆನ್ನಾಗಿ ಬಣ್ಣಿಸಿದ್ದಾರೆ. ಇಲ್ಲಿಯ ಪ್ರತಿ ಅಂಶಗಳು ಕಥೆಯ ಜೀವಾಳಕ್ಕೆ ಪೋಷಕವಾಗಿವೆ. ಇದು ಪ್ರಾದೇಶಿಕ ಕಾದಂಬರಿಯಾಗಿದ್ದಂತೆ ‘ನಿಸರ್ಗ’ವು ಪಾತ್ರಪ್ರಧಾನವಾದ ದುರಂತ ಕಥೆಯೂ ಆಗಿದೆ. ಅನಂತ-ತಾರೆ, ಈ ಕಥೆಯ ಕೇಂದ್ರ ವ್ಯಕ್ತಿಗಳು. ಅವರಿಬ್ಬರಲ್ಲಿಯ ನಿಸರ್ಗ ಪ್ರೇರಣೆ ಹಾಗೂ ಗಾಢಪ್ರೀತಿ, ಸಮಾಜದ ಹಾಗೂ ವ್ಯಕ್ತಿಗತ ದುರ್ಗುಣಗಳೊಡನೆ ಹೋರಾಡಿ ಸೋತು ಹಣ್ಣಾದುದೇ ಈ ಕಾದಂಬರಿಯ ಮುಖ್ಯ ಸೂತ್ರ. ಭಾಷೆ ಚರಿತ್ರೆ ಹಾಗೂ ಶಾಸ್ತ್ರಾಧ್ಯಯನಕ್ಕೂ ಈ ಕಾದಂಬರಿಯ ಭಾಷೆ ವಿಫುಲ ಸಾಮಗ್ರಿ ಒದಗಿಸುತ್ತದೆ. ಎಂದು ಕೃತಿಗೆ ಮುನ್ನುಡಿ ಬರೆದ ರಂ.ಶ್ರೀ. ಮುಗಳಿ ಅಭಿಪ್ರಾಯಪಟ್ಟಿದ್ದಾರೆ.

1945ರಲ್ಲಿ ಮೊದಲ ಬಾರಿಗೆ ಈ ಪುಸ್ತಕವನ್ನು ಮನೋಹರ ಗ್ರಂಥಮಾಲೆಯು ಪ್ರಕಟಿಸಿತ್ತು.

About the Author

ಮಿರ್ಜಿ ಅಣ್ಣಾರಾಯ
(25 March 1918 - 11 December 1975)

ಪ್ರಸಿದ್ಧ ಸಾಹಿತಿಗಳು, ಸಮಾಜ ಸುಧಾರಕರೂ ಆದ ಮಿರ್ಜಿ ಅಣ್ಣಾರಾಯರು ಹುಟ್ಟಿದ್ದು (ಜನನ 25-03-1918, ಮರಣ: 11-12-1975) ಬೆಳಗಾವಿ ಜಿಲ್ಲೆಯ ಶೇಡಬಾಳದಲ್ಲಿ. ಕನ್ನಡ ಭಾಷೆಯ ಜೊತೆಗೆ ಮರಾಠಿ, ಹಿಂದಿ, ಇಂಗ್ಲಿಷ್, ಗುಜರಾತಿ ಭಾಷೆಗಳಲ್ಲಿ ಪ್ರಭುತ್ವ. ಪಡೆದಿದ್ದರು.  ನಿಸರ್ಗ’ ಇವರು ಬರೆದ ಮೊದಲ ಕಾದಂಬರಿ. ಭಾಷೆಯ ಹೊಸತನ, ಸರಳ ನಿರೂಪಣೆಯಿಂದ ಕೂಡಿದ ಕಾದಂಬರಿ. ಚಾರಿತ್ರಿಕ ಕಾದಂಬರಿಗಳು: ಸಾಮ್ರಾಟ್ ಶ್ರೇಣಿಕ, ಚಾವುಂಡರಾಯ. ಪೌರಾಣಿಕ ಕಾದಂಬರಿ- ಋಷಭದೇವ. ಕಥಾಸಂಕಲನಗಳು-ಪ್ರಣಯ ಸಮಾ, ಅಮರ ಕಥೆಗಳು, ವಿಜಯಶ್ರೀ. ಶೈಕ್ಷಣಿಕ ಗ್ರಂಥಗಳು-ಭಾಷಾ ಶಿಕ್ಷಣ, ಲೇಖನ ಕಲೆ, ಮೂಲ ಶಿಕ್ಷಣದ ಮೌಲ್ಯಮಾಪನ. ವಿಮರ್ಶಾ ಕೃತಿಗಳು-ದತ್ತವಾಣಿ, ವಿಮರ್ಶೆಯ ಸ್ವರೂಪ, ಭರತೇಶನ ...

READ MORE

Related Books