ಶಕ್ತಿಪೂಜೆ

Author : ಇಂದಿರಾತನಯ (ವಿ.ಆರ್.ಶ್ಯಾಂ)

Pages 232

₹ 150.00
Year of Publication: 2013
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 26617100

Synopsys

’ಶಕ್ತಿಪೂಜೆ’ ಕೃತಿಯು ಇಂದಿರಾತನಯ ಅವರ ಕಾದಂಬರಿ. ಮನುಷ್ಯನ ಎಲ್ಲೆಯಿಂದ ಮನಃಶಕ್ತಿಯನ್ನು ಮನವರಿಕೆ ಮಾಡಿಕೊಡುವ ಈ ಕೃತಿ . ಈ ಲೇಖಕರು ಈ ಹಿಂದೆ ‘ಮಂತ್ರಶಕ್ತಿ’ ಎಂಬ ಕಾದಂಬರಿ ಬರೆದಿದ್ದು, ಅದರ ಮುಂದುವರಿದ ಭಾಗ ಎಂಬಂತೆ ಅದೇ ವಿಷಯ ಅನುಸರಿಸಿ ಬರೆದ ಕಾದಂಬರಿ ಇದು. ಸಂಕಲ್ಪಶಕ್ತಿಯಿಂದ ಪ್ರೇರಿತವಾದ ಮಾನವ ಮನಸ್ಸಿನ ಸೂಕ್ಷ್ಮಗಳನ್ನು ಆಧಾರಗಳ ಮೂಲಕ ನಿರೂಪಿಸುವ ಅಪೂರ್ವ ಗ್ರಂಥ. ಕನ್ನಡದಲ್ಲಿನ ಈ ಬಗೆಯ ಕಾದಂಬರಿಗಳನ್ನು ಮೊಟ್ಟಮೊದಲಿಗೆ ಬರೆದವರು ಇಂದಿರಾತನಯ. ಅತ್ಯಂತ ಕ್ಲಿಷ್ಟವಾದ ಮಂತ್ರತಂತ್ರ ವಿದ್ಯೆಗಳನ್ನು ಸಮಾಜ ಜೀವನದ ಗಾಜಿನ ಮೂಲಕ ಹಾಯಿಸಿ, ಒಂದು ಗಾಢ ಅನುಭವ ಉಂಟಾಗುವಂತೆ ಮಾಡುವ ಅವರ ಬರವಣಿಗೆ ನಮ್ಮ ಸಾಹಿತ್ಯ ಸಂದರ್ಭದಲ್ಲಿ ತೀರ ಅಪರೂಪವಾದದ್ದು. ನೇರವಾಗಿ ಕತೆ ಹೇಳುವ ಜಾಣ್ಮೆ, ಉದ್ದೇಶಿಸಿರುವುದಕ್ಕಿಂತ ಹೆಚ್ಚು ಧ್ವನಿಸುವ ಪಾರದರ್ಶಕ ಭಾಷೆ, ಪಾತ್ರಗಳ ಅಂತರಂಗವನ್ನು ನಿರಾಯಾಸವಾಗಿ ತೆರೆದಿಡಬಲ್ಲ ಕಲಾತ್ಮಕ ಅಭಿವ್ಯಕ್ತಿ- ಇವುಗಳಿಂದಾಗಿ ಈ ಕೃತಿ ಮತ್ತೆಮತ್ತೆ ಓದಿಸಿಕೊಳ್ಳುವ ಅನನ್ಯ ಕೃತಿಯೆನಿಸಿದೆ. “ಶವವಾಗಿದ್ದ ಯುವತಿ ಜೀವಂತ ಎದ್ದು ನಿಂತಳು….” “ಸದಾ ಮರವೇರಿ ಕುಳಿತಿರುತ್ತಿದ್ದ ಹುಡುಗ ಕೆಳಗಿಳಿದು ಬಂದು ಬಾಳುವೆ ಮಾಡತೊಡಗಿದ...’’, ”ಕಣ್ಣಿನ ದೃಷ್ಟಿಯಿಂದಲೇ ಮೋಹಿತಳಾದ ಹೆಂಗಸೊಬ್ಬಳು ಕಂಡುಕೇಳರಿಯದವನೊಬ್ಬನ ದುರಾಸೆಗೆ ಬಲಿಯಾದಳು” ಇವು ಈ ಗ್ರಂಥದಲ್ಲಿ ನಡೆಯುವ ಅಸಂಖ್ಯಾತ ಘಟನೆಗಳಲ್ಲಿ ಒಂದೆರಡು ಸಾಲುಗಳಾಗಿವೆ. 

ಕ್ಷುದ್ರಶಕ್ತಿ ವಶಪಡಿಸಿಕೊಂಡವರ ಬದುಕಿನ ಚಿತ್ರಣ ಮಾತ್ರವಲ್ಲ; ಇಂತಹ ಶಕ್ತಿಯಲ್ಲಿ ನಂಬಿಕೆ ಇರದವನ ಬದುಕಿನ ಚಿತ್ರಣವನ್ನು ತಾಳೆ ಹಾಕುವ ರೀತಿಯಲ್ಲಿ ಕಥೆಯನ್ನು ಹೆಣೆಯಲಾಗಿದೆ. ಹಾಗಂತ; ಇಲ್ಲಿ ಮಾಟ-ಮಂತ್ರ-ಮಹೇಂದ್ರಜಾಲ-ಪ್ರೇತ ಸಂಭಾಷಣೆ ಎಲ್ಲವೂ ವಾಸ್ತವವೇನಲ್ಲ. ಓದುಗರು ನಂಬಲೇ ಬೇಕೆಂದಿಲ್ಲ. ಕಥಾವಸ್ತುವಿಗಾಗಿ ಈ ಸಾಮಗ್ರಿ ಬಳಸಿಕೊಂಡಿದೆ ಎಂದೂ ಲೇಖಕರು ಸ್ಪಷ್ಟಪಡಿಸಿದ್ದಾರೆ.


ಈ ಕಾದಂಬರಿಯನ್ನು ಮೊದಲಬಾರಿ ಅಂದರೆ 1955ರಲ್ಲಿ ತುಮಕೂರು ಜಿಲ್ಲೆಯ ತಿಪಟೂರಿನ ಸುದರ್ಶನ ಪ್ರಕಾಶನವು ಪ್ರಕಟಿಸಿತ್ತು. ಆಗ ಕೃತಿಗಳ ಪುಟ 268 ಹಾಗೂ ಬೆಲೆ 1 ರೂ ಇತ್ತು.   

About the Author

ಇಂದಿರಾತನಯ (ವಿ.ಆರ್.ಶ್ಯಾಂ)

ತಮ್ಮ ಮಾಂತ್ರಿಕ ಬರಹದಿಂದ ಓದುಗ ಬಳಗವನ್ನು ಸೃಷ್ಟಿಸಿಕೊಂಡ ಲೇಖಕ ವಿ.ಆರ್.ಶ್ಯಾಂ. ಇಂದಿರಾತನಯ ಎಂಬ ಕಾವ್ಯನಾಮದಲ್ಲಿ ಕಾದಂಬರಿಗಳನ್ನು ಬರೆದ ಇವರು ಸುಮಾರು 50ಕ್ಕೂ ಹೆಚ್ಚು ಕಾದಂಬರಿ ಹಾಗೂ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.ತಾಂತ್ರಿಕ ವಿಷಯದ ಬಗ್ಗೆ ಕುತೂಹಲಕಾರಿ ಕಾದಂಬರಿಗಳನ್ನು ರಚಿಸಿರುವ ಇಂದಿರಾತನಯ ತಮ್ಮ ಪ್ರಯೋಗಶೀಲತೆಯಿಂದ ಕನ್ನಡ ಕಥಾ ಸಾಹಿತ್ಯಕ್ಕೆ ಹೊಸ ಆಯಾಮ ಮೂಡಿಸಿದವರು. ಅವರ ಶಾಕ್ತ್ಯಪಂಥದ ಪ್ರಯೋಗಶೀಲ ಕೃತಿಗಳಾದ ‘ಮಂತ್ರಶಕ್ತಿ’, ಶಕ್ತಿಪೂಜೆ, ಸೇಡಿನಕಿಡಿ, ಹಾಗೂ ಪೂಜಾತಂತ್ರ ಅತ್ಯಂತ ಜನಪ್ರಿಯ ಕಾದಂಬರಿಗಳು. ಅವರ ‘ಚಕ್ರಾಯಣ’ ಸ್ವಾಮಿ ರಮಾನಂದರ ಹಿಮಾಲಯದ ತಪ್ಪಲಿನಲ್ಲಿ ಕೃತಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ...

READ MORE

Related Books