ಸಂಕೋಲೆ

Author : ಗೀತಾ ಬಿ.ಯು

Pages 138

₹ 110.00




Year of Publication: 2016
Published by: ವಸಂತ ಪ್ರಕಾಶನ
Address: ನಂ.360, 10ನೇ ಬಿ ಮುಖ್ಯರಸ್ತೆ, 3ನೇ ಬ್ಲಾಕ್ ಜಯನಗರ, ಬೆಂಗಳೂರು- 560011
Phone: 08022443996

Synopsys

‘ಸಂಕೋಲೆ’ ಲೇಖಕಿ ಗೀತಾ ಬಿ.ಯು ಅವರ ಕಾದಂಬರಿ. ಈ ಕಾದಂಬರಿಯ ನಾಯಕಿ ಮಾನಸಾ. ಆರು ವರ್ಷದ ಪುಟ್ಟ ಹುಡುಗಿಯಾಗಿದ್ದಾಗ ಶುರುವಾಗುವ ಕಥಾನಕ ಅವಳು ಇಪ್ಪತ್ತೆರಡು ವರ್ಷದ ಪ್ರಬುದ್ಧ ಯುವತಿಯಾಗುವವರೆಗೂ ಮುಂದುವರೆಯುತ್ತದೆ. ಕಥೆ ಮಾನಸಾಳೆ ಹೇಳುವುದರಿಂದ ಅವಳೊಬ್ಬಳ ದೃಷ್ಟಿಕೋನದಲ್ಲಿ ನಡೆಯುತ್ತದೆ. ಮಾನಸಾ ಬೆಳೆದಂತೆ ಕಥೆ ಬೆಳೆಯುತ್ತದೆ. ವಿಚಾರ, ಭಾಷೆ ಎರಡೂ ಪ್ರಬುದ್ಧವಾಗುತ್ತಾ ಹೋಗುತ್ತದೆ.

About the Author

ಗೀತಾ ಬಿ.ಯು

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಗೀತಾ ಬಿ.ಯು. ಇದುವರೆಗೆ 12 ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ. ಬೆಂಗಳೂರಿನವರಾಗಿರುವ ಗೀತಾ  ಅವರ ಕತೆ-ಕಾದಂಬರಿಗಳು ಕನ್ನಡದ ಮಾಸ ಹಾಗೂ ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ’ಅವರನ್ನು ಬಿಟ್ಟು ಇವರನ್ನು ಬಿಟ್ಟು ಇವರು ಯಾರು’  ಹಾಗೂ ’ಮಿಥ್ಯ’ ಕಾದಂಬರಿಗಳು ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಸೋಲು ಗೆಲುವಿನ ಹಾದಿಯಲ್ಲಿ, ಹೊಂಗೆಯ ನೆರಳು, ಕೈ ಹಿಡಿದು ನಡೆಸನ್ನೆನ್ನನು, ಆರದಿರಲಿ ಬೆಳಕು, ವಾರಸುದಾರ, ಅದೇ ಏಕಾಂತ, ಜೊತೆ-ಜೊತೆಯಲಿ ಮುಂತಾದವು ಇವರ ಇನ್ನಿತರ ಕಥಾ ಸಂಕಲನ ಹಾಗೂ ಕಾದಂಬರಿಗಳು. ಆಂಗ್ಲ ಮಾಧ್ಯಮದಲ್ಲಿ ಓದಿರುವ ಗೀತಾ ಅವರು ...

READ MORE

Related Books