ಭೀಮಾ ತೀರದ ತಂಗಾಳಿ

Author : ಶರಣಗೌಡ ಬಿ.ಪಾಟೀಲ ತಿಳಗೂಳ

Pages 108

₹ 90.00
Year of Publication: 2020
Published by: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು
Address: ಮುಖ್ಯ ಬೀದಿ, ಕಲಬುರಗಿ-585101
Phone: 9448124431

Synopsys

ಶರಣಗೌಡ ಬಿ. ಪಾಟಳ, ತಿಳಗೂಳ ಅವರ ಕಾದಂಬರಿ-ಭೀಮಾ ತೀರದ ತಂಗಾಳಿ. ರೈತ ಮಹಿಳೆಯೊಬ್ಬಳು ಬಂಜರು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದು ಸಾಧಿಸಿ ತೋರಿಸುತ್ತಾಳೆ . ಭೀಮಾ ತೀರದ ಜನರ ಬದುಕಿಗೆ ಶಕ್ತಿ ತುಂಬುತ್ತಾಳೆ ಇವಳ ಪರಿಶ್ರಮ ಮತ್ತು ಸೇವಾ ಮನೋಭಾವ ಅನನ್ಯ . ಆದರೂ, ಜೀವನದಲ್ಲೇ ನೋವು ಸಂಕಟ ಅನುಭವಿಸಿದ ಚಿತ್ರಣವೇ ಈ ಕಾದಂಬರಿಯ ವಸ್ತು. ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ. 

ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ ‘ಈ ಕಾದಂಬರಿಯ ಕಥಾ ವಸ್ತುವು ಗ್ರಾಮೀಣ ಜನಜೀವನದೊಂದಿಗೆ ತಳುಕು ಹಾಕಿಕೊಂಡಿದೆ. ಆರಂಭದಿಂದ ಅಂತ್ಯದವರೆಗೂ ಕಾದಂಬರಿ ಕುತೂಹಲ ಮೂಡಿಸುತ್ತಾ ಹೋಗುತ್ತದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಶರಣಗೌಡ ಬಿ.ಪಾಟೀಲ ತಿಳಗೂಳ
(12 July 1974)

ಕಲಬುರಗಿ ಜಿಲ್ಲೆಯ ತಿಳಗೂಳಲ್ಲಿ ಜನಿಸಿದ ಶರಣಗೌಡ ಪಾಟೀಲ ಅವರು ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಬೆಳೆದವರು.  ತಂದೆ ಬಸಣ್ಣಗೌಡ ವ್ಯವಸಾಯಗಾರ ಆಗಿದ್ದರು. ಗ್ರಾಮೀಣ ಪರಿಸರದಲ್ಲಿ  ಪ್ರೌಢ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತಿದ್ದಾರೆ. ಗ್ರಾಮೀಣ ಜನಜೀವನ ಇಲ್ಲಿನ ಬದುಕು ಬವಣೆ ಬಹಳ ಹತ್ತಿರದಿಂದ ನೋಡಿರುವ ಆಧಾರದ ಮೇಲೆ ಕಥೆ ಕವನ ಲೇಖನ ಕಾದಂಬರಿ ಬರೆಯಲು ಆರಂಭಿಸಿದರು. ಈಗಾಗಲೇ ಮೂರು ಪುಸ್ತಕ ಪ್ರಕಟಿಸಿದ್ದಾರೆ. ಚೊಚ್ಚಲ ಕೃತಿ ’ಹಿಟ್ಟಿನ ಗಿರಣಿ ಕಿಟ್ಟಪ್ಪ’ ಕೃತಿಗೆ 2017-18 ನೇ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಡಿ ಮಾಣಿಕರಾವ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಬಂದಿದೆ. ಎರಡನೇ ...

READ MORE

Related Books