ಸಂಜೆಗತ್ತಲು

Author : ಅ.ನ.ಕೃ (ಅ.ನ. ಕೃಷ್ಣರಾಯ)

Pages 318

₹ 214.00

Buy Now


Year of Publication: 2019
Published by: ಹೇಮಂತ ಸಾಹಿತ್ಯ
Address: ನಂ.972, ಸಿ, 4ನೇ ಇ ಬ್ಲಾಕ್, 10ನೇ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-560060
Phone: 23507170

Synopsis

ಖ್ಯಾತ ಕಾದಂಬರಿಕಾರ ಅ.ನ.ಕೃಷ್ಣರಾಯರು ಬರೆದ ಕಾದಂಬರಿ-ಸಂಜೆಗತ್ತಲು. ನಗ್ನಸತ್ಯ, ಶನಿಸಂತಾನ ಇಂತಹ ಕಾದಂಬರಿಗಳ ವಿಷಯ ವಸ್ತುವೇ ಅಂದರೆ ಮನುಷ್ಯ ಸಮಾಜದ ನಾಗರಿಕತೆಯನ್ನು ನಾಚಿಸುತ್ತದೆ- ವೇಶ್ಯಾವಾಟಿಕೆ. ಸಮಾಜವನ್ನು ಕಾಡುತ್ತಿರುವ ಸಮಸ್ಯೆ ಇದು. ಇದರ ಪರಿಹಾರವೂ ಮರೀಚಿಕೆಯಾಗುತ್ತಿದೆ. ಇಂತಹ ವ್ಯವಸ್ಥೆಯು ಮಹಿಳೆಯರ ಜೀವ ಹಿಂಡುತ್ತಿದ್ದು, ಗಂಡಿನ ಅಹಂಕಾರಕ್ಕೆ ಮತ್ತಷ್ಟು ಇಂಬು ನೀಡುತ್ತದೆ ಎಂಬ ಭೀಕರ ಸತ್ಯವನ್ನು ಈ ಕಾದಂಬರಿಯು ತೆರೆದಿಡುತ್ತದೆ.

About the Author

ಅ.ನ.ಕೃ (ಅ.ನ. ಕೃಷ್ಣರಾಯ)
(09 May 1908 - 04 July 1971)

‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...

READ MORE

Related Books