ತ್ರಿವೇಣಿ ಅವರ ಕಾದಂಬರಿ-ಹಣ್ಣೆಲೆ ಚಿಗುರಿದಾಗ. ವಿಧವೆಯರಲ್ಲೂ ಪ್ರೇಮದ ಹಂಬಲವಿರುತ್ತದೆ. ತಾವೂ ಮರುಮದುವೆಯಾಗಿ ಬಾಳಬೇಕು ಎಂಬ ತುಡಿತವಿರುತ್ತದೆ. ಅದಕ್ಕೆ ಸಮಾಜ ಅವಕಾಶ ನೀಡಬೇಕು ಎಂಬ ಒತ್ತಾಸೆಯ ಕಥೆಯೇ -ಹಣ್ಣೆಲೆ ಚಿಗುರಿದಾಗ.
ಈ ರೀತಿಯ ಬಯಕೆಯು ಹೆಣ್ಣಿನ ಲೈಂಗಿಕ ಸ್ವೆಚ್ಛಾಚಾರಕ್ಕೆ ಇಂಬು ನೀಡುತ್ತದೆ ಎಂದು ವಾದಿಸುವುದು ಸರಿಯಲ್ಲ. ಆಕೆಯ ಮಾನವ ಸಹಜ ಹಂಬಲಗಳಿಗೆ ಸಮಾಜ ನೀಡುವ ಮಾನವೀಯ ಅವಕಾಶ ಎಂಬ ಸಂದೇಶ ಈ ಕಾದಂಬರಿಯಲ್ಲಿದೆ. ಆದ್ದರಿಂದ, ಕಥಾನಾಯಕಿ ವಿಧವೆಯು ಮತ್ತೊರ್ವ ವಿಧುರನೊಂದಿಗೆ ಮದುವೆಯಾಗಿ ಬಾಳುತ್ತಾಳೆ ಎನ್ನುವುದು ಕಥೆಯ ಮುಕ್ತಾಯವೂ ಆಗಿದೆ.
ಮನಸ್ಸಿನ ಕ್ರಿಯೆಗಳಿಗೆ ಕಥಾರೂಪ ನೀಡಿ ಕಾದಂಬರಿಗಳನ್ನು ರಚಿಸಿದ್ದು ತ್ರಿವೇಣಿ ಅವರ ಹೆಗ್ಗಳಿಕೆ. ಇವರು 1928 ರ ಸೆಪ್ಟಂಬರ್ 1 ರಂದು ಮೈಸೂರಿನಲ್ಲಿ ಜನಿಸಿದರು. ಮನಸ್ಸಿನ ಭಾವನೆಗಳನ್ನೂ ಚಿತ್ರಿಸಿ ಬರೆದ ಇವರು ರಚಿಸಿದ ಪ್ರಮುಖ ಕಾದಂಬರಿಗಳೆಂದರೆ- ಹೂವು ಹಣ್ಣು, ಅಪಸ್ವರ, ಅಪಜಯ, ಸೋತುಗೆದ್ದವಳು, ಬೆಕ್ಕಿನಕಣ್ಣು, ಶರಪಂಜರ, ದೂರದ ಬೆಟ್ಟ, ಅಪಜಯ, ಕಂಕಣ, ಮುಚ್ಚಿದ ಬಾಗಿಲು, ಬಾನು ಬೆಳಗಿತು, ಅವಳ ಮನೆ, ವಸಂತಗಾನದಿಂದ ಹಿಡಿದು ಬೆಳ್ಳಿಮೋಡದವರೆಗೆ ಸುಮಾರು 20 ಕಾದಂಬರಿಗಳನ್ನು ಹಾಗೂ 3 ಕತಾ ಸಂಕಲನಗಳನ್ನು ರಚಿಸಿದ್ದಾರೆ. ಇವರ ಬೆಳ್ಳಿಮೋಡ, ಶರಪಂಜರ, ಹಣ್ಣಲೆ ಚಿಗುರಿದಾಗ ಕಾದಂಬರಿಗಳು ಚಲನಚಿತ್ರವಾಗಿಯೂ ಅಪಾರ ಜನಮನ್ನಣೆ ಗಳಿಸಿವೆ. ಇವರಿಗೆ ಕರ್ನಾಟಕ ರಾಜ್ಯಪ್ರಶಸ್ತಿ – 'ಅವಳ ಮನೆ' ...
READ MORE