ದಂಡಿ

Author : ರಾಜಶೇಖರ ಮಠಪತಿ (ರಾಗಂ)

Pages 160

₹ 135.00




Year of Publication: 2020
Published by: ಯಾಜಿ ಪ್ರಕಾಶನ
Address: ಭೂಮಿ, ಎಂ.ಪಿ. ಪ್ರಕಾಶ ನಗರ, ನಹರ ಕಾಲೊನಿ, ಹೊಸಪೇಟೆ. ಬಳ್ಳಾರಿ ಜಿಲ್ಲೆ

Synopsys

ಲೇಖಕ ಹಾಗೂ ಸಾಹಿತಿ ರಾಜಶೇಖರ ಮಠಪತಿ (ರಾಗಂ) ಅವರ ಕಾದಂಬರಿ- ದಂಡಿ. ಸ್ವತಃ ಲೇಖಕರು ಹೇಳುವಂತೆ-ದಂಡಿಯು ಕೇವಲ ತುಂಡು ನೆಲದ ಕಥನವಲ್ಲ. ಅದು ಜಗದ ಕಡಲ ಕುದಿ. ದಂಡಿ-ಸತ್ತವರ ಚರಿತ್ರೆಯೂ ಅಲ್ಲ; ವರ್ತಮಾನವೂ ಅಲ್ಲ. ಮುಂದೊಮ್ಮೆ ಅದು ಭವಿಷ್ಯವಾಗುವುದಾದರೆ ಅದು ಗುಣದ ಶಕ್ತಿ. ಅದು ನಾವು ನಿತ್ಯ ತಿನ್ನುವ ಉಪ್ಪಿನ ಆತ್ಮಚರಿತ್ರೆ. ಉಪ್ಪಿ ಎಂದರೆ, ಗುಣ ಮತ್ತು ಋಣದ ಹಾಡು. ದಂಡಿ-ಇಡೀ ಜಗತ್ತಿನಲ್ಲಿ ಚಾಚಿಕೊಂಡ ಮನುಷ್ಯನೆಂಬೋ ಮನುಷ್ಯ ಧರ್ಮದ ಅನಾವರಣವಷ್ಟೇ.' ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಐತಿಹಾಸಿಕ ಘಟನೆಯೊಂದರೆ ಹಾಗೂ ವ್ಯಕ್ತಿಕೇಂದ್ರಿತ (ಮಹಾತ್ಮ ಗಾಂಧಿ) ವ್ಯಕ್ತಿತ್ವವೊಂದನ್ನು ಬಿಂಬಿಸುವ ಕಾದಂಬರಿ ಇದು. .

About the Author

ರಾಜಶೇಖರ ಮಠಪತಿ (ರಾಗಂ)

ಸಾಹಿತಿ, ಚಿಂತಕ, ಕನ್ನಡ ಸಾಹಿತ್ಯ ಆಕಾಡೆಮಿ ಸದಸ್ಯರಾದ  ರಾಜಶೇಖರ ಮಠಪತಿ (ರಾಗಂ) ಅವರು ಹುಟ್ಟಿದ್ದು ಬೆಳಗಾಂವ ಜಿಲ್ಲೆಯ ತೆಲಸಂಗದಲ್ಲಿ. ಕರ್ನಾಟಕದ ಗಡಿಯ ಊರಾದ ಚಡಚಣದಲ್ಲಿ ಪ್ರಾಥಮಿಕದಿಂದ ಪದವಿಪೂರ್ವದ ಶಿಕ್ಷಣ, ನಂತರ ಬಿಜಾಪೂರ ಮತ್ತು ಸೊಲ್ಲಾಪುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ, ಕ.ವಿ.ವಿ ಧಾರವಾಡದಿಂದ ಆಂಗ್ಲ ಸಾಹಿತಿ, ಸಿನಿಮಾ ನಿರ್ದೇಶಕ,ಪತ್ರಕರ್ತ, ಕೆ.ಎ.ಅಬ್ಬಾಸರನ್ನು ಕುರಿತು ಪಿ.ಹೆಚ್.ಡಿ - ಹೀಗೆ ಶೈಕ್ಷಣಿಕ ಬದುಕಿನ ಹಲವು ಹಂತಗಳನ್ನು ಗಳಿಸಿದ್ದಾರೆ. ಇದುವರೆಗೆ ಅವರು ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ಕೃತಿಗಳ ಸಂಖ್ಯೆ ಅರವತ್ತು ಅಂಕಿಯನ್ನು ದಾಟುತ್ತದೆ. ಕಾವ್ಯ, ಕತೆ, ನಾಟಕ, ಪ್ರಬಂಧ, ಅಂಕಣ, ಸಂಶೋಧನೆ, ...

READ MORE

Related Books