ಅನಘಾ ಬಿಡಿಸಿದ ಚಿತ್ತಾರ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 200

₹ 160.00




Year of Publication: 2020
Published by: ಸುಧಾ ಎಂಟರ್ ಪ್ರೈಸಸ್
Address: ನಂ.761,8ನೇ ಮುಖ್ಯರಸ್ತೆ, 3ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-560 034

Synopsys

ಕಾದಂಬರಿಗಾರ್ತಿ ಸಾಯಿಸುತೆ ಅವರ ಸಾಮಾಜಿಕ ಕಾದಂಬರಿ `ಅನಘಾ ಬಿಡಿಸಿದ ಚಿತ್ತಾರ’. ಸಮಗ್ರತೆ, ಶ್ರೇಷ್ಠತೆ, ಜವಾಬ್ದಾರಿ, ಪ್ರವರ್ತತೆ, ಏಕತೆ ಈ ಐದು ಅದ್ಭುತವಾದ, ಅಮೂಲ್ಯವಾದ ಮೌಲ್ಯಗಳನ್ನು ಇಟ್ಟುಕೊಂಡು ಉದ್ಯಮ ಸಾಮ್ರಾಜ್ಯ ಕಟ್ಟಿದ 'ಟಾಟಾ ಮನೆತನ' ಎಂದರೆ, 'ಪುನರ್ವಸು' ಫ್ಯಾಮಿಲಿಗೆ ಹೆಚ್ಚು ಗೌರವ, ಅಭಿಮಾನ. ಅದನ್ನು ಈಗಿನ ದಾಮೋದರ್‌ ಬಲ್ಲರು. ಅಂಥ ಉನ್ನತ ಮೌಲ್ಯದ ಮನೆತನದ ವಾರಸುದಾರನನ್ನು ಕೈ ಹಿಡಿದವಳು ಅನಘಾ.

ನಿರಂಜನನದು ಒಂದು ಪ್ರಶ್ನೆ. ಅನಘಾ ನಾನು ತುಂಬ ಕನ್‌ಪ್ಯೂಷನ್‌ನಲ್ಲಿ ಇದ್ದೀನಿ. ನಿನ್ನ ಪೋಸ್ಟ್‌ಗಳು ಯಾವ ಯಾವ ಸಮಯಕ್ಕೆ ಎನ್ನುವುದೇ ಅರ್ಥವಾಗಿಲ್ಲ. ಗ್ರೇಟ್ ದಾಮೋದರ್‌ ಮಗನ ಕೈಯಿಂದ ಮಾಂಗಲ್ಯ ಕಟ್ಟಿಸಿ ಒಂದು ಪೋಸ್ಟ್‌ನ ಆಲ್‌ರೆಡಿ ಸ್ಯಾಂಕ್ಷನ್ ಮಾಡಿದ್ದಾರೆ. ಅಂಥದ್ದರಲ್ಲಿ ನೀನು ಇನ್ನೊಂದು ಪೋಸ್ಟ್‌ನ ಬೇಡಿಕೆ ಇಟ್ಟಿದ್ದು ಯಾಕೆ? ಈ ಪ್ರಶ್ನೆಗೆ ಅವಳಲ್ಲಿ ಸಷ್ಟವಾದ ಉತ್ತರವಿತ್ತು. ಆದರೆ ಈಗ ಹೇಳಲಾರಳು, ಚಿತ್ತಾರ ಬಿಡಿಸಲು ಹೊರಟ ಅನಘಾ…

ಕಾದಂಬರಿಗಾರ್ತಿ ಸಾಯಿಸುತೆ ಅವರು ಹೇಳುವಂತೆ,’ನಾನು ಹೆಚ್ಚೆಚ್ಚು ಇಷ್ಟಪಡುವ ಕುವೆಂಪು, ಚೆನ್ನವೀರ ಕಣವಿ, ಜಿ.ಎಸ್.ಶಿವರುದ್ರಪ್ಪ ಮತ್ತು ಎಚ್.ಎಸ್. ವೆಂಕಟೇಶ ಮೂರ್ತಿಯವರ ಕವನಗಳು ಭಾವಗೀತೆಗಳಾಗಿ ನನ್ನ ಮನ ಮಾತ್ರವಲ್ಲ, ಕಾದಂಬರಿಯ ಪಾತ್ರಗಳ ಮನವನ್ನೂ ತಟ್ಟಿವೆ’ ಎಂದಿದ್ದಾರೆ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books