ಆಸ್ಥೆ

Author : ವಿನೋದ್ ಕೆ.ಎಲ್.

Pages 124

₹ 120.00
Year of Publication: 2019
Published by: ವಂಶಿ ಪಬ್ಲಿಕೇಷನ್ಸ್
Address: #4, ಗಾಯತ್ರಿ ಕಾಂಪ್ಲಾಕ್ಸ್, ಬಿ.ಹೆಚ್. ರೋಡ್, ಶುಭಾಷ್ ನಗರ, ಟಿ.ಬಿ. ಬಸ್ ಸ್ಟಾಂಡ್ ಹತ್ತಿರ, ನೆಲಮಂಗಲ, ಬೆಂಗಳೂರು- 562123
Phone: 9916595916

Synopsys

ಯುವ ಸಾಹಿತಿ ವಿನೋದ್ ಅವರ ಚೊಚ್ಚಲ ಕಾದಂಬರಿಯ ಆಯ್ಕೆಯ ವಸ್ತು ವಿಷಯವೇ ಹೆಣ್ಣು. ಹೆಣ್ಣಿನ ಮನಸ್ಸನ್ನು ತಟ್ಟಿ ಅವಳೊಳಗಿನ ಮುಕ್ಕೋಟಿ ಭಾವನೆಗಳೊಂದಿಗೆ ಜೀವಿಸಿ ಅಕ್ಷರ ರೂಪಕ್ಕೆ ಇಳಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ಲೇಖಕರು ಈ ಕಾದಂಬರಿಯಲ್ಲಿ ಅದನ್ನು ಸಾಧ್ಯವಾಗಿಸಿದ್ದಾರೆ. 

ಇಲ್ಲಿ ಹೆಣ್ಣಿನ ಬಯಕೆಗಳಿವೆ, ಪ್ರೇಮವಿದೆ, ಕಾಮವಿದೆ, ಆರ್ತನಾದವಿದೆ, ಬೆತ್ತಲು ಮನಸ್ಸಿದೆ, ತೊಳಲಾಟವಿದೆ, ಖುಷಿಗಳ ಹಸಿವಿದೆ, ವಾಸ್ತವದ ಬದುಕಿದೆ, ತಾಯ್ತನದ ಕೊರಗಿದೆ-ಒಲವಿದೆ ಹಾಗಾಗಿ ಆಸ್ಥೆ ಅತ್ಯಂತ ಆಪ್ತವಾಗುತ್ತದೆ ಎನ್ನುತ್ತಾರೆ ಚಿತ್ರನಿರ್ದೇಶಕ ಶ್ರೀಕಾಂತ್ ಕನ್ನಲ್ಲಿ. ಈ ಕೃತಿಗೆ ಬೆನ್ನುಡಿ ಬರೆದಿರುವ ಅವರು ಆಸ್ಥೆಯ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ. ಸೂಕ್ಷ್ಮ ವಿಚಾರಗಳನ್ನು ಅಷ್ಟೇ ನಾಜೂಕಾಗಿ ಬಿಡಿಬಿಡಿಯಾಗಿ ಓದುಗನ ಮುಂದೆ ಬಿಡಿಸಿಡುವ ಜಾಣ್ಮೆಯ ಜೊತೆಗೆ ಬರವಣಿಗೆಯಲ್ಲಿ ಅವರಿಗೆ ಇರುವ ಹಿಡಿತ ಸೊಗಸಾಗಿದೆ ಎನ್ನುತ್ತಾರೆ. 

About the Author

ವಿನೋದ್ ಕೆ.ಎಲ್.
(20 July 1993)

ವಿನೋದ್ ಕೆ.ಎಲ್ ಅವರು ಬೆಂಗಳೂರು ದಕ್ಷಿಣ ತಾಲೂಕಿನ ಕೆಂಚನಪುರದವರು. ತಂದೆ ಲಕ್ಕಹನುಮಯ್ಯ, ತಾಯಿ ಮಂಜಮ್ಮ. ಕನ್ನಡ ಎಂ. ಎ ಪದವಿ ಪಡೆದಿರುವ ವಿನೋದ್ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಹಲವು ನಾಟಕ ಮತ್ತು ಸಿನಿಮಾ, ಕಿರುಚಿತ್ರ, ಟೆಲಿ ಸಿನಿಮಾಗಳಲ್ಲಿ ನಟಿಸಿರುವ ವಿನೋದ್ ಬರವಣಿಗೆಯನ್ನು ತಮ್ಮ ಹವ್ಯಾಸವಾಗಿಸಿಕೊಂಡಿದ್ದಾರೆ.  ‘ಆಸ್ಥೆ’ ವಿನೋದ್ ಅವರ ಮೊದಲ ಕಾದಂಬರಿಯಾಗಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದಿಂದ 2019ರ ಯುವ ಬರಹಗಾರರ ಚೊಚ್ಚಲ ಕೃತಿ ಪ್ರೋತ್ಸಾಹ ಧನಕ್ಕೆ ಆಯ್ಕೆಯಾಗಿದ್ದ ಕೃತಿಯಾಗಿದೆ. ಹಾಗೇ ಅವರ ನಾಟಕ ‘ಗಾಂಧಿ ಬಂದ ಗಾಂಧಿ’, ಕವನ ಸಂಕಲನ ‘ಗಾಳಿದೀಪ’, ಕಥೆಗಳು ‘ಲಾಭಿ’, ‘ಗಣಪತಿಬಪ್ಪ ಮೊರಿಯಾ’, ‘ಸ್ವಾಭಿಮಾನಿ’ ...

READ MORE

Related Books