ಕುಮಾರಿಖಂಡಂ

Author : ಅತುಲ ದಾಮಲೆ

Pages 280

₹ 280.00




Year of Publication: 2021
Published by: ಪರ್ಯಾಯ ಪ್ರಕಾಶನ
Address: #44/ಎ, 2ನೇ ಕ್ರಾಸ್, 6ನೇ ಫೇಸ್, 1ನೇ ಹಂತ(ಲೇವಾ ಸ್ಕೂಲ್ ಹತ್ತಿರ), ಮಹಾಗಣಪತಿ ನಗರ, ಬೆಂಗಳೂರು-560010
Phone: 6366072392

Synopsys

‘ಕುಮಾರಿಖಡಂ’ ಕೃತಿಯು ಅತುಲ್ ದಾಮ್ಲೆ ಅವರ ಕಾದಂಬರಿ. ಕೃತಿಯ ಬೆನ್ನುಡಿಯಲ್ಲಿ `ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗೆ ಮುದ್ರಿತವಾಗಿದೆ. ಅತ್ತಕಡೆ ಪೆರುಮಧುರೈ ರಾಜ್ಯದ ವಸುಧೆ ನೀಳವೇಣಿ ಈಗ ಮರಣ ಶಯ್ಯೆಯಲ್ಲಿದ್ದಾಳೆ. ಶ್ವಾಸಕೋಶದಲ್ಲಿ ಬೆಳೆದ ಗಡ್ಡೆಯ ಜೀವಕಣಗಳು ಅನ್ನನಾಳಕ್ಕೂ ವ್ಯಾಪಿಸಿ ಆಹಾರ ತೆಗೆದುಕೊಳ್ಳಲಾಗದ ಪರಿಸ್ಥಿತಿ. ವಸುಧೆ ಈಗ ದ್ರವಾಹಾರದ ಆಧಾರದ ಮೇಲೆ ಬದುಕಿ‌ದ್ದಾಳೆ. ಇನ್ನು ಕೆಲವು ವಾರಗಳಷ್ಟೇ ಆಕೆಯ ಜೀವ ಉಳಿಯುವುದು ಎಂದು ಆಕೆಗೂ ತಿಳಿದಿತ್ತು. ಆಕೆಗೆ ಮರಣದ ಮುಂಚೆ ಮುಂದಿನ ವಸುಧೆ ಯಾರಾಗುತ್ತಾರೆ ಎಂಬ ಕುತೂಹಲವಿತ್ತು. ಹಾಗಾಗಿ , ಆಕೆ ವಸುಧೆಯ ಆಯ್ಕೆ ಸ್ಪರ್ಧೆಯನ್ನು ಪ್ರಾರಂಭಿಸಲು ದಂಡದವರಿಗೆ ಸೂಚನೆಯಿತ್ತಳು. ಇತ್ತಕಡೆ , ಸುಮಾರು ಮೂರುವರೆ ತಿಂಗಳಿನಿಂದ ‘ನಾಪತ್ತೆ’ ಆಗಿದ್ದ ಪಾಪಯ್ಯ,  ಮಾಳಿಗೆಯ ಮೇಲಿದ್ದ ಜೋಕಾಲಿಯ ಮೇಲೆ ಬಂದು ಕುಳಿತ. ಕೈಕಾಲುಗಳಿಗೆ ಅಲ್ಲಲ್ಲಿ ತರಚಿದ ಗಾಯಗಳು. ಬೆಳೆದಿದ್ದ ಗಡ್ಡ-ಕೂದಲುಗಳು. ಕೃಶಕಾಯನಾಗಿ ಹೋಗಿದ್ದ. ‘ಒಂದೋ ಎಲ್ಲಿಯೋ ಸಿಕ್ಕಿಹಾಕಿಕೊಂಡಿದ್ದ ಅಥವಾ ಮುಂದೆ ಭಿಕ್ಷುಕನೋ ಇಲ್ಲವೇ ಬೀದಿ ಹುಚ್ಚನೋ ಆಗಿ ವೇಷ ಹಾಕಲು ಈ ಹೊಸ ರೂಪ’ ಎಂದು ಮುತ್ತಯ್ಯ ಮನಸ್ಸಿನಲ್ಲಿಯೇ ಅಂದುಕೊಂಡ’ ಅನ್ನುವ  ವಿಚಾರಗಳು ಕಾದಂಬರಿಯ ವಸ್ತು, ನಿರೂಪಣೆ ಕುರಿತು ಸುಳಿವು ನೀಡುತ್ತವೆ. 

About the Author

ಅತುಲ ದಾಮಲೆ

ಯುವ ಲೇಖಕ ಅತುಲ ದಾಮಲೆ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯವರು. ಪ್ರಸ್ತುತ ಉಜಿರೆಯ ಎಸ್. ಡಿ.ಎಂ ಕಾಲೇಜಿನಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದಾರೆ..ಚಿತ್ರಕಲೆ, ಓದುವುದು, ಬರವಣಿಗೆ ಅವರ ಹವ್ಯಾಸ. ಕೃತಿಗಳು : ಕುಮಾರಿಖಡಂ ...

READ MORE

Related Books