ಲೇಖಕ ಡಾ. ಬಿ. ಪ್ರಭಾಕರ ಶಿಶಿಲ ಅವರ ಐತಿಹಾಸಿಕ ಕಾದಂಬರಿ-ದೊಡ್ಡ ವೀರರಾಜೇಂದ್ರ.. ಕ್ರಿ.ಶ. 1787-1809 ರವರೆಗೆ ಕೊಡಗಿನ ಹಾಲೇರಿ ಅರಸರು ಆಡಳಿತ ನಡೆಸಿದ್ದರು. ಈತನ ತಂದೆ 1ನೇ ಲಿಂಗರಾಜರು ಸಾವನ್ನಪ್ಪಿದಾಗ ದೊಡ್ಡ ವೀರರಾಜೇಂದ್ರನು ಅಪ್ರಾಪ್ತ ವಯಸ್ಕ. ಆದ್ದರಿಂದ, ಟಿಪ್ಪು ಸುಲ್ತಾನನು ರಾಣಿ ಪತ್ನಿ, ವೀರರಾಜೇಂದ್ರ, ಹಾಗೂ ವೀರರಾಜೇಂದ್ರನ ತಮ್ಮ ಈ ಮೂವರನ್ನು ಗೋರೂರಿನಲ್ಲಿ ಸೆರೆ ಇಟ್ಟ. ಇದರಿಂದ ಕೊಡಗಿನ ಜನತೆ ದಂಗೆ ಏಳುತ್ತಾರೆ. ಮಂಗಳೂರಿನ ವಿಜಯದ ನಂತರ ಟಿಪ್ಪು ಸುಲ್ತಾನನು ಕೊಡಿಗಿನ ಜನತೆ ತನಗೆ ಬೆಂಬಲಿಸಿದರೆ ರಕ್ಷಣೆ ನೀಡುವುದಾಗಿ ಭರವಸೆ ನೀಡುತ್ತಾನೆ. ಅದೇ ರೀತಿ ಮಾಡಿದಾಗ, ಮತ್ತೇ ಈ ಮೂವರನ್ನು ಬೇರೆ ಕಡೆ ಸೆರೆಯಲ್ಲಿ ಇಡುತ್ತಾನೆ. ನಂತರ ದೊಡ್ಡ ವೀರ ರಾಜೇಂದ್ರನು ತಪ್ಪಿಸಿಕೊಂಡು ತನ್ನ ರಾಜ್ಯ ಸೇರುತ್ತಾನೆ. ನಂತರ ಯುದ್ಧದ ಮೇಲೆ ಯುದ್ಧ ನಡೆಯುತ್ತಿದ್ದಂತೆ ವೀರ ರಾಜೇಂದ್ರನು ಕೊಡಗಿನ ಬಹುತೇಕ ಭಾಗವನ್ನು ವಶಪಡಿಸಿಕೊಳ್ಳುತ್ತಾನೆ. ಐತಿಹಾಸಿಕವಾದ ಈ ಘಟನಾವಳಿಯನ್ನು ಕಾದಂಬರಿಯ ಸ್ಪರ್ಶ ನೀಡುವ ಮೂಲಕ ಲೇಖಕರು ಉತ್ತಮ ಕಾದಂಬರಿಯಾಗಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದ ಡಾ. ಪ್ರಭಾಕರ ಶಿಶಿಲ ಅರ್ಥಶಾಸ್ತ್ರದ ಪಠ್ಯಪುಸ್ತಕಗಳ ರಚನಕಾರರು. ಕೃತಿಗಳು: ಮತ್ಸ್ಯಗಂಧಿ, ಗಗ್ಗರ, ಬಾರಣೆ, ಗುಜರಿ ಅದ್ದಿಲಿಚ್ಚನ ಜಿಹಾದಿಯ, ಕೊಡಗಿನ ಐತಿಹ್ಯ ಕಥೆಗಳು, ಬೆಟ್ಟದಾ ಮೇಲೊಂದು, ಕಪಿಲಳ್ಳಿಯ ಕತೆಗಳು, ಜಲಲ ಜಲಧಾರೆ, ದೊಡ್ಡ ವೀರ ರಾಜೇಂದ್ರ, ಕೊಡಗಿನ ಕತೆಗಳು. ಶಿಶಿಲರನ್ನೇ ಕುರಿತು ಅನೇಕ ಗ್ರಂಥಗಳು ಪ್ರಕಟವಾಗಿವೆ . ಸುವರ್ಣ ಅಭಿನಂದನಾ ಸ್ಮರಣಿಕೆ, ಸಾಹಿತ್ಯ ಶಿಶಿಲ: ಶಿಶಿಲರ ಸಮಗ್ರ ಸಾಹಿತ್ಯ ವಿಮರ್ಶೆ, ಶಿಶಿಲರ ಜೀವನ ಮತ್ತು ಸಾಧನೆಗಳು, ಪ್ರಭಾಕರ ಶಿಶಿಲರ ಸಾಹಿತ್ಯ ಕುರಿತು ಡಾ. ಮೋಹನ ಕುಮಾರ ಅವರು ಪಿಹೆಚ್.ಡಿ. ಮಹಾ ಪ್ರಬಂಧ ಬರೆದಿದ್ದಾರೆ. ಪ್ರಶಸ್ತಿಗಳು : ಗೊರೂರು ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದಿಂದ ಕುವೆಂಪು ಕಾದಂಬರಿ ಪುರಸ್ಕಾರ, ಪುಟ್ಟರಾಜ ...
READ MORE