ನಾನೇ ಭೀಷ್ಮ

Author : ಕೌಂಡಿನ್ಯ ನಾಗೇಶ

Pages 208

₹ 167.00
Year of Publication: 2021
Published by: ಶ್ರೀ ಕೃಷ್ಣ ಪ್ರಕಾಶನ

Synopsys

ನಾನೇ ಭೀಷ್ಮ ಕೌಂಡಿನ್ಯ ಅವರ ಐತಿಹಾಸಿಕ ಕಾದಂಬರಿಯಾಗಿದೆ. ಮಹಾಭಾರತದ ಘಟನೆಗಳು, ಪಾತ್ರಗಳು ನಮ್ಮ ಜೀವನದಲ್ಲಿ ಬೆಳೆದು ಕೊರುವುದು ವಾಸ್ತವದ ಸಂಗತಿ, ಕುರುಕುಲ ಪಿತಾಮಹ ಪುನಾವತಿಯ ಸಿಂಹಾಸನದ ರಕ್ಷಕ ದೇವವ್ರತ (ಜೀವ), ತ್ರೇತಾಯುಗದಲ್ಲಿ ಶ್ರೀರಾಮು ಪಿತೃವಾಕ್ಯ ಪರಿಪಾಲನೆಗಾಗಿ ವನವಾಸ ಮಾಡಿದಂತೆ, ವ್ಯಾಪರಯುಗದ ದೀಪ-ತಂದೆಯ ಸುಖ, ಸಂತೋಷ, ನೆಮ್ಮದಿಗಾಗಿ ಸಿಂಹಾಸನದ ಅಧಿಕಾರವನ್ನು ಮಾತ್ರವಲ್ಲ; ತನ್ನ ಬದುಕನ್ನೇ ತ್ಯಾಗ ಮಾಡಿದ ಅಪರೂಪದ ಆದರ್ಶವ್ಯಕ್ತಿ ಧರ್ಮ, ತತ್ವ ಸಿದ್ಧಾಂತ ಪ್ರಮಾಣವಚನ ಮತ್ತು ಪ್ರತಿಜ್ಞೆಗೆ ಸಿದ್ದನಾಗಿ ಬಾಳಿದವನು ಭೀಷ್ಠ ದೇವವ್ರತ ಎಂಬ ಮೂಲ ಹೆಸರಿನ ಈತ ಭೀಷ್ಠವಾದದ್ದು ತನ್ನ ಭೀಷಣ ಪ್ರತಿಜ್ಞೆಯಿಂದ, ಸ್ವಂತ ಆಸ, ಆಪೇಕ್ಷ ಇಂದ್ರಿಯ ಬಯಕೆಗಳಿಗೆ ಅವಕಾಶ ಕೊಡದ ನಿಸ್ವಾರ್ಥ ಭಾವದಿಂದ ಇವನಂತೆ ಬದುಕಿದ್ದ ವ್ಯಕ್ತಿ ಆ ಕಾಲದಲ್ಲಿ ಯಾರೂ ಇರಲಿಲ್ಲ. ಶ್ರೀಕೃಷ್ಣನ ಪರಮಭಕ್ತ ಮತ್ತು ವಿಷ್ಣು ಹಸ್ತನಾಮದ ದಾತಾರ ಭೀಷ್ಠ ಈ ಕುರುಕುಲದ ಪಿತಾಮಹನ ಬದುಕಲ್ಲಿ ನಡೆದಿದ್ದ ಮುಖ್ಯ ಘಟನೆಗಳು ಮತ್ತು ಪಾತ್ರಗಳ ಆಧಾರದ ಮೇಲೆ ಬದಲಾಗಿರುವ ಕಾಲ ಮತ್ತು ಸನ್ನಿವೇಶಗಳಿಗೆ ಪೂರಕವಾಗಿ ಈ ಕಾದಂಬರಿ ರೂಪಗೊಂಡಿದೆ. ಕಥಾನಾಯಕ - ಒಡಹುಟ್ಟಿದವರ ಬದುಕಿನ ಭವಿಷ್ಯದಲ್ಲಿ ಆವರಿಸಲಿರುವ ಕರಾಳ ರೂಪಕ ಸಮಸ್ಯೆಗಳನ್ನು ನಿವಾರಿಸಲು ಯಾವ ರೀತಿ ಹೋರಾಡುತ್ತಾನೆ ಎಂಬುವುದನ್ನು ವಿಭಿನ್ನ ಶೈಲಿಯಲ್ಲಿ ನಿರೂಪಿಸಿರುವ ಕಾದಂಬರಿ ಇದು. ಎಂದು ಲೇಖಕರ ನುಡಿಯಲ್ಲಿ ತಿಳಿಸಿದ್ದಾರೆ.

About the Author

ಕೌಂಡಿನ್ಯ ನಾಗೇಶ

  ಕೌಂಡಿನ್ಯ   ಕಾವ್ಯನಾಮದಿಂದ  ಪ್ರಸಿಧ್ದಿಯನ್ನು  ಪಡೆದಿರುವ ವೈ.ಎನ್‌ ನಾಗೇಶ್‌ ಅವರು ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸೀಪುರದವರು . ತಂದೆ ನಾರಾಯಣ ರಾವ್‌ ತಾಯಿ ಜಯಲಕ್ಷ್ಮಿ . ಮೂವತ್ತೆರಡು ವರ್ಷಗಳಿಂದ ಸಾಹಿತ್ಯ ಸೇವೆಯನ್ನು ಮಾಡಿಕೊಂಡಿದ್ದಾರೆ. ಇವರು ಮಂಗಳ, ತರಂಗ, ಸುಧಾ, ಕನ್ನಡ ಪ್ರಭ, ಪ್ರಜಾವಾಣಿ ,ಉದಯವಾಣಿ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ 350 ಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಕನ್ನಡ ಭಾಷಾ ಸಂಶೋಧನಾ ಕೃತಿ, ಚಾರಿತ್ರಿಕ ಕೃತಿ, ಪೌರಾಣಿಕ ಗ್ರಂಥಗಳು ,ಧಾರ್ಮಿಕ ಮತ್ತು ಸಾಮಾನ್ಯ ಲೇಖನಗಳು, ಸಣ್ಣ ಕತೆಗಳು , ಕವನ ಸಂಕಲನಗಳು,  ಚಲನಚಿತ್ರಗಳು  ರಚಿಸಿದ್ದಾರೆ.   ಪ್ರಶಸ್ತಿ ...

READ MORE

Related Books