ಹೊಸ ರಾಗ

Author : ಉಷಾ ನವರತ್ನರಾಂ

Pages 112

₹ 90.00




Year of Publication: 2022
Published by: ಇಂದಿರಾ ಪ್ರಕಾಶನ
Address: ಕಾಟನ್‌ ಪೇಟೆ ರೋಡ್‌ , ಚಿಕ್‌ಪೇಟೆ , ಬೆಂಗಳೂರು 560053
Phone: 9448467728

Synopsys

ಹೊ'ಸರಾಗ' ಕೃತಿಯು ಉಷಾ ನವರತ್ನರಾಂ ಅವರ ಕಾದಂಬರಿಯಾಗಿದೆ. ಹೊಸ ರಾಗ 'ಮಯೂರ'ದಲ್ಲಿ ಪ್ರಕಟವಾದಂದಿನಿಂದ ಇದುವರೆಗೂ ಅತ್ಯಂತ ಜನಪ್ರಿಯ ಕಾದಂಬರಿಯಾಗಿ ಮರು ಮುದ್ರಣಕ್ಕಾಗಿ ಮೇಲೆ ಮೇಲೆ ಒತ್ತಾಯ ಬರುತ್ತಿತ್ತು. ನನ್ನ ಸಾಹಿತ್ಯ ಕೃಷಿಯಲ್ಲಿ ಅತ್ಯಂತ ಉತ್ಸಾಹ, ಪ್ರೋತ್ಸಾಹ ನೀಡುತ್ತಾ ಬಂದು ನನ್ನನ್ನು ಬೆಳೆಸಿ ಪೋಷಿಸಿ, ಬೆಳೆಸಿದ ಎಲ್ಲರಿಗೂ ನನ್ನ ವಂದನೆಗಳು ಎಂದು ಉಷಾ ನವರತ್ನರಾಂ ಅವರು ಮುನ್ನುಡಿಯಲ್ಲಿ ಬರೆದಿದ್ದಾರೆ

About the Author

ಉಷಾ ನವರತ್ನರಾಂ
(23 November 1939 - 10 October 2000)

ಲೇಖಕಿ ಉಷಾ ನವರತ್ನರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ಎಂ.ವಿ. ಸುಬ್ಬರಾವ್. ತಾಯಿ- ಶಾಂತಾ. ಪ್ರಾರಂಭಿಕ ಶಿಕ್ಷಣವನ್ನು ಶಿವಮೊಗ್ಗದ ಮೇರಿ ಇಮ್ಯಾಕುಲೇಟ್ ಕಾನ್ವೆಂಟ್ ಹಾಗೂ ಬೆಂಗಳೂರಿನ ಮಹಿಳಾ ಸೇವಾ ಸಮಾಜದಲ್ಲಿ ಪೂರ್ಣಗೊಳಿಸಿದರು. ಆನಂತರ ಮೌಂಟ್ ಕಾರ್ಮಲ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯ ಹಾಗೂ ಇತಿಹಾಸದಲ್ಲಿ ಪದವಿ ಪಡೆದರು. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪೂರೈಸಿದರು. ವಿದ್ಯಾರ್ಥಿನಿಯಾಗಿದ್ದಾಗಲೇ ಹಲವು ಲೇಖನಗಳನ್ನು ಪ್ರಕಟಿಸಿದರು. ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳ ಅಂಕಣಗಾರ್ತಿಯಾಗಿದ್ದು, ಗೆಳತಿ ಮತ್ತು ಉಷಾ ಪತ್ರಿಕೆಗಳ ಸಂಪಾದಕಿಯಾಗಿದ್ದರು. ಮಹಿಳಾ ಸೇವಾ ಸಮಾಜದಲ್ಲಿ ಅಧ್ಯಾಪಕಿಯಾಗಿ 27 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ನಾಲ್ಕು ವರ್ಷ ರೀಜನಲ್ ಫಿಲಂ ಸೆನ್ಸಾರ್ ...

READ MORE

Related Books