ಮಾಪುರ ತಾಯಿಯ ಮಕ್ಕಳು

Author : ಗೀತಾ ನಾಗಭೂಷಣ

Pages 90

₹ 30.00




Address: ಗದಗ - 582101
Phone: 0832237527

Synopsys

ಕಾದಂಬರಿಕಾರ್ತಿ ಗೀತಾ ನಾಗಭೂಷಣ ಅವರು ಒಮ್ಮೆ ತನ್ನಮ್ಮನೊಡನೆ ಮನೆ ದೇವತೆ ಚುಂಚೂರಿನ ಮಾಪುರ ತಾಯಿ ದೇವಿಯ ಜಾತ್ರೆಗೆ ಹೋಗಿದ್ದಾಗ ಅಲ್ಲಿ ಹರಕೆ ಹೊತ್ತ ಹೆಣ್ಣುಗಂಡುಗಳು, ಹರೆಯದವರು, ಮುದುಕರು ಎನ್ನುವ ಭೇದವಿಲ್ಲದೆ ಬೆತ್ತಲೆ ಸೇವೆಯಲ್ಲಿ ತೊಡಗಿದ್ದನ್ನು ಕಂಡ ದೃಶ್ಯ ಮನಸ್ಸಿನ ಮೇಲೆ ಆಘಾತ ಮೂಡಿಸಿತು. ಆಗ ಮೇಲ್ವರ್ಗದವರ ಚಾಲಾಕಿತನ, ಕುತಂತ್ರಗಳನ್ನು ಬರಹದ ಮೂಲಕ ಬಯಲಿಗೆಳೆಯಲು ಬರೆದ ಕಾದಂಬರಿಯೇ ‘ಮಾಪುರ ತಾಯಿಯ ಮಕ್ಕಳು’

ತವರು (ಗುಲಬರ್ಗಾ) ಜಿಲ್ಲೆಯ ಝೋಪಡ ಪಟ್ಟಿಯ ಹೆಂಗಸರ ಕಷ್ಟದ ಜೀವನವನ್ನು ಕತೆಯಾಗಿಸಿದ್ದಾರೆ. ಅಲ್ಲದೆ, ಅಲ್ಲಿಯ ದಿನನಿತ್ಯದ ಆಡು ಭಾಷೆಯಲ್ಲೇ ಕೃತಿ ರಚಿಸಿದ್ದಾರೆ. ಈ ಕಾದಂಬರಿ 'ಮಯೂರ'ದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ.

About the Author

ಗೀತಾ ನಾಗಭೂಷಣ
(25 March 1942 - 28 June 2020)

ಕನ್ನಡದ ಲೇಖಕಿಯರಲ್ಲಿ ಒಬ್ಬರಾದ ಗೀತಾ ನಾಗಭೂಷಣ ಅವರು ತಮ್ಮ ಕಾದಂಬರಿ-ಕತೆಗಳ ಮೂಲಕ ಜನಪ್ರಿಯರಾದವರು. ಗುಲ್ಬರ್ಗದ ಬಡ ಕುಟುಂಬದಲ್ಲಿ 1942ರ ಮಾರ್ಚ್ 25ರಂದು ಜನಿಸಿದರು. ತಂದೆ ಶಾಂತಪ್ಪ-ತಾಯಿ ಶರಣಮ್ಮ. ಮೆಟ್ರಿಕ್ ಮುಗಿಸಿದ ಮೇಲೆ ಕೆಲವುಕಾಲ ಕಲೆಕ್ಟರ್ ಕಛೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಓದಿ ಪದವಿ ಪಡೆದು, ಸಂಜೆ ಕಾಲೇಜಿನಲ್ಲಿ ಓದಿ ಬಿಎಡ್ ಮತ್ತು ಎಂ.ಎ. ಪದವಿ ಗಳಿಸಿದರು. ಓದುವಾಗಲೇ ಉದ್ಯೋಗ ಮಾಡುತ್ತಿದ್ದ ಇವರು ಎಂ.ಎ. ಪದವಿ ಗಳಿಸಿದ ನಂತರ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ 30ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು. ...

READ MORE

Related Books