ವಿರಹದ ಸಂಕ್ಷಿಪ್ತ ಪದಕೋಶ

Author : ಜೋಗಿ (ಗಿರೀಶ್ ರಾವ್ ಹತ್ವಾರ್)

Pages 128

₹ 95.00




Year of Publication: 2015
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - 560 004
Phone: 080-26617100/26617755

Synopsys

‘ವಿರಹದ ಸಂಕ್ಷಿಪ್ತ ಪದಕೋಶ’ ಜೋಗಿ ಅವರ ಕಾದಂಬರಿ. ‘ಅಷ್ಟೇನೂ ಚಟುವಟಿಕೆಯಿಲ್ಲದ ಬೀದಿ, ಒಬ್ಬ ಆಟೋ ಡ್ರೈವರ್, ಒಬ್ಬ ಕಬಾಬ್ ಅಂಕಲ್, ಒಬ್ಬ ಸ್ಟೀಲ್ ಪಾತ್ರೆ ಮಾರುವವನು, ಒಬ್ಬ ಟೈಲರ್, ಒಬ್ಬಳು ತರಕಾರಿ ಮಾರುವ ಹೆಂಗಸು, ಟಾಟಾ ಇಂಡಿಕಾ ಕಾರಿಟ್ಟುಕೊಂಡ ಒಬ್ಬ- ಹೀಗೆ ಅಲ್ಲಿ ತರಹೇವಾರಿ ಮಂದಿ. ಕೊಂಚ ಕಿರಿದಾದ ಆ ರಸ್ತೆಯ ಲೊಂದು ಆರೆಂಟು ಮನೆಗಳ ಅಪಾರ್ಟಮೆಂಟು. ಆ ಅಪಾರ್ಟಮೆಂಟು ಕಾವಲಿಗೆ ಒಬ್ಬ ವಾಚನ್ನು, ಅಲ್ಲಿಗೆ ವಿವರ ಮುಗಿಯುತ್ತದೆ. ಬೆಂಗಳೂರಿನ ಟಿಪಿಕಲ್ ಬದುಕು ಇದು. ರಾಮನಗರಕ್ಕೋ ತುರುವೇಕೆರೆಗೋ ಚಿಕ್ಕಮಗಳೂರಿಗೋ ಹಾಸನ ಹೋದರೆ ಅಲ್ಲಿಯ ಚಿತ್ರ ಕೊಂಚ ಬದಲಾಗಬಹುದು’ ಹೀಗೆ ಶುರುವಾಗುವ ಕಾದಂಬರಿ, ಬೆಂಗಳೂರೆಂಬ ಮಹಾನಗರದ ವಿಚಿತ್ರ ನೋಟಗಳನ್ನು ಕಟ್ಟಿಕೊಡುತ್ತಾ ಸಾಗುತ್ತದೆ. ಸದಾ ಬೆಂಗಳೂರೆಂಬ ಮಯಾನಗರದ ಬಗ್ಗೆ ವಿಶೇಷ ಪ್ರೀತಿಯಲ್ಲಿ ಬರೆವ ಜೋಗಿ ಅವರ ಬೆಂಗಳೂರು ಸರಣಿಯ ಮತ್ತೊಂದು ಕೃತಿ ಇದು. ಬೆಂಗಳೂರಿನ ಒಡಲೊಳಗೆ ಹುಟ್ಟುವ ವಿಚಿತ್ರಕಥೆಯೊಂದನ್ನ ಈ ಕಾದಂಬರಿ ಒಳಗೊಂಡಿದೆ.

About the Author

ಜೋಗಿ (ಗಿರೀಶ್ ರಾವ್ ಹತ್ವಾರ್)
(16 November 1965)

ಜೋಗಿ, ಜಾನಕಿ, ಎಚ್‌. ಗಿರೀಶ್‌ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್‌ 16ರಂದು. ಮೂಲತಃ ಸೂರತ್ಕಲ್‌ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಹಾಯ್‌ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...

READ MORE

Related Books