ಕನಸಿನ ಕಡೆ

Author : ಜಯಲಕ್ಷ್ಮಿ ಎಂ.ಕೆ.



Year of Publication: 2008
Published by: ಇಂದಿರಾ ಪ್ರಕಾಶನ
Address: ಬೆಂಗಳೂರು-10

Synopsys

ಕನ್ನಡದ ಜನಪ್ರಿಯ ಸಾಹಿತಿಗಳ ಸಾಲಿನಲ್ಲಿ ಕಂಗೊಳಿಸುವ ಹೆಸರು ಶ್ರೀಮತಿ ಎಂಕೆ ಜಯಲಕ್ಷ್ಮಿ ಅವರು. ಕನ್ನಡ ಕಾದಂಬರಿ ಲೋಕದ ಮೇರು ತಾರೆ ತ್ರಿವೇಣಿಯವರ ಸಮಕಾಲೀನರಾದ ಇವರು ಅವರ ಆಪ್ತ ಗೆಳತಿಯೂ ಹೌದು. ಪ್ರಸ್ತುತ ಇವರ ಕನಸಿನ ಕಡೆ ಕಾದಂಬರಿ ಪ್ರಥಮ ಕಾದಂಬರಿ ಆಗಿದ್ದು ಮೊದಲನೆಯ ಕಾದಂಬರಿ ಎಂಬ ಯಾವ ರಿಯಾಯಿತಿಯನ್ನೂ ಬೇಡದೆ ಪ್ರಬುದ್ಧ ಶೈಲಿಯಲ್ಲಿ ನಿರೂಪಿತವಾಗಿದೆ. ಲೇಖಕಿ ಅವರೇ "ಹೆಣ್ಣು ಮಕ್ಕಳ ಹಾಸ್ಟೆಲ್ ಜೀವನದ ಬಗ್ಗೆ ಜನಸಾಮಾನ್ಯರಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ ಈ ಕಾದಂಬರಿಯಲ್ಲಿ ಹಾಸ್ಟೆಲಿನ ವಾತಾವರಣವನ್ನು ಅಲ್ಲಿನ ಜೀವನವನ್ನು ಚಿತ್ರಿಸಲು ಪ್ರಯತ್ನಿಸಿದ್ದೇನೆ" ಎಂದಿದ್ದಾರೆ . ನಿಜ ಅರವತ್ತು ವರ್ಷಗಳಾದರೂ ಈ ಕಥಾವಸ್ತು ಪ್ರಸ್ತುತ ಎನಿಸುವುದು ನಿತ್ಯನವೀನ ಎನಿಸುವುದು . ಇವರ ಶೈಲಿಯು ಅಷ್ಟೇ ಸರಳ ಸುಂದರ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ . 1962ರಲ್ಲಿ ಈ ಕಾದಂಬರಿ ಮೊದಲ ಮುದ್ರಣ ಕಂಡಿದೆ.

About the Author

ಜಯಲಕ್ಷ್ಮಿ ಎಂ.ಕೆ.
(06 January 1929 - 02 April 1968)

ಕನ್ನಡದ ಪ್ರಮುಖ ಕಾದಂಬರಿಗಾರ್ತಿಯಾದ ಜಯಲಕ್ಷ್ಮಿ ಎಂ. ಕೆ. ಅವರು 1929 ಜನವರಿ 06 ಚಿಕ್ಕಮಗಳೂರಿನಲ್ಲಿ ಜನಿಸಿದರು. ತಾವು ಬದುಕಿದ್ದ ಅಲ್ಪ ಕಾಲದಲ್ಲಿ ಅತ್ಯತ್ತಮ ಕಾದಂಬರಿಗಳನ್ನು ಕನ್ನಡ ಓದುಗರಿಗೆ ನೀಡಿದ್ದಾರೆ. ‘ಕನಸಿನ ಕಡೆ, ಮೋಡ ಚದುರಿತು, ಬಾಳು ಬೆಳಗಿತು, ಮಾಯದ ಬಲೆ, ತಾಯ ಹರಕೆ, ಬಾಳಿನಪಥ, ಬಾಳ ಮುಂಜಾವು, ಸಂಸಾರದಲ್ಲಿ ಸಮರ, ತಾರೆ ಮಿನುಗಿತು, ಹೂವು ಚೆಲ್ಲಿದ ಹಾದಿ, ಸಮರ ಕೋಲಾಹಲ, ಪ್ರೇಮ ಪಂಜರ, ಕನಸು ನನಸು, ನಿಂದೆಯ ನೆಲೆ, ಪತನದ ಹಾದಿ’ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ‘ಮಂಗಳವಾದ್ಯ ಮೊಳಗಿತು’ ಅವರ ಕಥಾಸಂಕಲನ. 1968 ಏಪ್ರಿಲ್ 14 ರಂದು ನಿಧನರಾದರು.  ...

READ MORE

Related Books