ಆನಂದ ಶರಧಿ

Author : ಹೆಚ್.ಜಿ. ರಾಧಾದೇವಿ

Pages 156

₹ 110.00
Year of Publication: 2018
Published by: ಶ್ರೀ ಲಕ್ಷ್ಮಿವೆಂಕಟೇಶ್ವರ ಪ್ರಕಾಶನ

Synopsys

ಶ್ರೀ ಲಕ್ಷ್ಮೀ ಭಟ್ ವಿರಚಿತ ಪುಸ್ತಕಗಳ ಅವಲೋಕನ ಸ್ಪರ್ಧೆಯಲ್ಲಿ ಬಹುಮಾನವಾಗಿ ಸಿಕ್ಕ ಪುಸ್ತಕ "ಆನಂದ ಶರಧಿ" ಸರಾಗವಾಗಿ ಓದಿಸಿಕೊಳ್ಳುವ ಒಂದು ಸುಂದರ ಸಾಮಾಜಿಕ ಕಾದಂಬರಿ. ಮನವನ್ನು ಹಿಡಿದಿಟ್ಟುಕೊಂಡು ಹಂತ ಹಂತಕ್ಕೂ ಕುತೂಹಲ ಉಳಿಸಿಕೊಂಡು ಸುಲಲಿತವಾಗಿ ಓದಿಸಿಕೊಳ್ಳುವ ಪುಸ್ತಕ. ಹೆಚ್.ಜಿ.ರಾಧಾದೇವಿಯವರ ಕಾದಂಬರಿಯ ನಾಯಕಿ ಸುಂದರ ಯುವತಿಯಷ್ಟೇ ಅಲ್ಲ. ದಿಟ್ಟೆ, ವಿಚಾರವಂತೆ,ಯಾವುದೇ ಸಂದರ್ಭದಲ್ಲೂ ಧೈರ್ಯಗೆಡದೇ ವಿವೇಕಯುತವಾಗಿ ಎದುರಿಸುವ ಛಲವಂತೆ. ನಾಯಕಿ ಶರಧಿ ಓದುವಾಗಲೂ ಮನೆಪಾಠ ಮಾಡಿ ತನ್ನ ಖರ್ಚನ್ನು ನಿಭಾಯಿಸಿಕೊಂಡು ಉಳಿಸಿದ ದುಡ್ಡಿನಿಂದ ಅಕ್ಕ ಸಂಗೀತ ಳ ಮದುವೆ ಮಾಡುತ್ತಾಳೆ. ಅನುಕೂಲಸ್ಥ ರಂಗನಾಥನ ಮೆಚ್ಚಿನ ಮಡದಿಯಾಗಿ ಸಂಗೀತಳೂ ಸಹೃದಯಿ. ತಂಗಿಯ ದೊಡ್ಡ ಮನಸ್ಸನ್ನು ನೋಡಿ, ತಾನೂ ಅವಳಿಗೆ ಸರ್ವ ವಿಧದಲ್ಲೂ ಸಹಾಯ ಮಾಡುತ್ತಾಳೆ. ಶರಧಿ ತನ್ನ ಬುದ್ಧಿವಂತಿಕೆಯಿಂದ ಲೆಕ್ಚರರ್ ಆಗಿ ಎಲ್ಲ ವಿದ್ಯಾರ್ಥಿಗಳಿಗೂ ಮೆಚ್ಚಿನ ಶಿಕ್ಷಕಿಯಾಗುತ್ತಾಳೆ. ಕಾಲೇಜಿನ ಮುಖ್ಯಸ್ಥರಾದ ನಾರಾಯಣ್, ಅವಳ ಜಾಣತನ ಸರಳತೆ ನೋಡಿ ತಮಗೆ ಗೊತ್ತಿದ್ದ ಆನಂದ ಎಂಬ ಸುರದ್ರೂಪಿ ಯುವಕನಿಗೆ ಮದುವೆ ಮಾಡಲು ಯೋಚಿಸುತ್ತಾರೆ. ಆನಂದ ಅಮಾಯಕ,ವಸಂತ ಎಂಬ ನಡು ಹರೆಯದ ಕುಟಿಲ ಹೆಣ್ಣಿನ ಜಾಲಕ್ಕೆ ಸಿಕ್ಕು ದೊಡ್ಡ ಮೊತ್ತದ ಸಾಲಗಾರನಾಗಿರುತ್ತಾನೆ. ಅದೆಲ್ಲವನ್ನೂ ಶರಧಿಗೆ ಪ್ರಾಮಾಣಿಕವಾಗಿ ತಿಳಿಸುವ ಅವನನ್ನು ಶರಧಿ ಮೆಚ್ಚಿ ,ಮದುವೆಗೆ ಒಪ್ಪುತ್ತಾಳೆ. ಕೊನೆಗೆ ವಸಂತಳ ವಂಚನೆ ಆನಂದನಿಗೆ ಅರಿವಾಯಿತೇ? ಮದುವೆ ಸಾಂಗವಾಗಿ ನೆರವೇರಿತೇ? ಸಾಲದ ಶೂಲದಿಂದ ಹೇಗೆ ವಿಮುಕ್ತನಾದ? ಇದನ್ನೆಲ್ಲಾ ಶರಧಿ ಹೇಗೆ ಚಾಕಚಕ್ಯತೆಯಿಂದ ನಿಭಾಯಿಸಿದಳು? ..ಎಂಬುದನ್ನು ಓದಿ ಸವಿಯಿರಿ.. ಸ್ವಾಭಿಮಾನಿ,ದಿಟ್ಟೆ,ವಿಚಾರವಂತೆ ಶರಧಿಯ ಪಾತ್ರ ಗಮನಸೆಳೆಯುತ್ತದೆ..ಸಹೃದಯಿ ಪ್ರೇಮಮಯಿ ಸಂಗೀತ. ನಯವಂಚಕಿ,ಧೂರ್ತೆ ವಸಂತ, ಮಾತೃವಾತ್ಸಲ್ಯ ತುಂಬಿದ ವಾತ್ಸಲ್ಯಮಯಿ ಚಂದ್ರಮ್ಮ,ಹೀಗೆ ಎಲ್ಲ ಪಾತ್ರಗಳೂ ಮನಸೆಳೆಯುತ್ತವೆ..ಸರಾಗ ಶೈಲಿ,ಭಾಷೆಯ ವೈಭವೀಕರಣವಿಲ್ಲದ ಬರವಣಿಗೆ ಇಷ್ಟವಾಗುತ್ತದೆ. 2018ರಲ್ಲಿ ಈ ಖೃಇ ಎರಡನೇ ಮುದ್ರಣ ಕಂಡಿದೆ.

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books